ಮಾಡಾಳು ಸ್ವರ್ಣಗೌರಿ ಜಾತ್ರಾ ಮಹೋತ್ಸವ ಮಂಗಳ
ಅರಸೀಕೆರೆ: ತಾಲೂಕಿನ ಪ್ರಸಿದ್ಧ ಮಾಡಾಳಿನ ಮೂಗುತಿ ಸ್ವರ್ಣ ಗೌರಿಯ ಜಾತ್ರಾ ಮಹೋತ್ಸವ 9 ದಿನಗಳ ಕಾಲ ವಿಜೃಂಭಣೆಯಿಂದ ಸೋಮವಾರ ಸಂಜೆ ಮುಕ್ತಾಯವಾಯಿತು. ಗೌರಿಯ ದರ್ಶನ ಪಡೆಯಲು ರಾಜ್ಯ, ಹೊರರಾಜ್ಯಗಳ ಲಕ್ಷಾಂತರ ಭಕ್ತರು ಆಗಮಿಸಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಸೋಮವಾರ ಬೆಳಗಿನ ಜಾವ 3.50ಕ್ಕೆ ಸರಿಯಾಗಿ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ನೆರೆದಿದ್ದ ಭಕ್ತ ಸಮೂಹ ಜಯಘೋಶಗಳನ್ನು ಕೂಗುತ್ತಾ ಕರ್ಪೂರದ ಕುಂಡದಲ್ಲಿ ಲಕ್ಷಾಂತರ ಕರ್ಪೂರ ಸುಡುವ ಮೂಲಕ ತಾವು ತಂದಿದ್ದ ಕಾಣಿಕೆಗಳನ್ನು ಸಮರ್ಪಿಸಿ ತಲೆ ಮೇಲೆ ದುಗ್ಗುಳ ಹೊತ್ತು ಗೌರಮ್ಮನವರ ಹರಕೆ ತೀರಿಸುತ್ತಿದ್ದ ದೃಶ್ಯ ನೋಡುಗರನ್ನು ನಿಬ್ಬೆರಗಾಗಿಸುವಂತೆ ಮಾಡಿತು.ಮೂಗುತಿ ಗೌರಮ್ಮನನ್ನು ಗ್ರಾಮದ ಬೀದಿ ಬೀದಿಗಳಲ್ಲಿ ಉತ್ಸವ ಮಾಡುವ ಮೂಲಕ ಮನೆ ಮನೆಗೆ ತೆರಳಿ ಮಡಿಲು ತುಂಬಿಸಿಕೊಳ್ಳುವ ದೃಶ್ಯ ರೋಚಕವಾಗಿತ್ತು ಅಮ್ಮನವರ ಸ್ವಾಗತಕ್ಕಾಗಿ ಬೀದಿ ಬೀದಿಗಳಲ್ಲಿಯು ರಂಗೋಲಿ ಬಿಡಿಸಿ ಮಾವಿನ ತೋರಣಗಳಿಂದ ಬಾಳೆಯ ಕಂಬಗಳಿಂದ ಸಿಂಗರಿಸಿ ಭಕ್ತ ಸಮೂಹವನ್ನು ಮೆರವಣಿಗೆಗೆ ಆಕರ್ಷಿಸುವಂತಿತ್ತು.
ವಾಡಿಕೆಯಂತೆ ಮಂಗಳವಾರ ಸೂರ್ಯಾಸ್ತದ ಸಮಯದಲ್ಲಿ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಪ್ರತಿಷ್ಠಾಪನೆಯ ವೇಳೆ ಅಮ್ಮನವರಿಗೆ ತೊಡಿಸಿದ್ದ ಮೂಗುತಿಯನ್ನು ಕಳಚಿ ಊರ ಮುಂದಿರುವ ಕಲ್ಯಾಣಿಯಲ್ಲಿ 5.25ಕ್ಕೆ ವಿಸರ್ಜಿಸುವ ಮೂಲಕ ಮಹಾ ತಾಯಿಗೆ ಭಕ್ತಿಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತಾಧಿಗಳು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

