ಜಿಲ್ಲಾದ್ಯಂತ ಸಂಭ್ರಮದ ಮೋದಿ ಹುಟ್ಟುಹಬ್ಬಆಚರಣೆ
ಕ.ಪ್ರ. ವಾರ್ತೆ ಹಾಸನ ಸೆ. 17
ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 64ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ನಗರದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ಅಂಧಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಂತರ ಮಕ್ಕಳಿಗೆ ಕೇಕಕ್ವಿತರಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ನೇರಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಅಭಿವೃದ್ಧಿಯತ್ತ ಕೊಂಡಯ್ಯಲು ಅವಕಾಶವನ್ನು ದೇವರು ನೀಡಲಿ ಎಂದು ಹಾರೈಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚನ್ನಕೇಶವ, ಕೃಷ್ಣ ಅಂಧ ಮಕ್ಕಳ ಶಾಲೆ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಶ್, ವಿಜಯಕುಮಾರ್, ನಗರಾಧ್ಯಕ್ಷ ಶ್ರೀನಿವಾಸ್, ವೇಣು, ಜಯಶಂಕರ್ ಇತರರು ಇದ್ದರು.
ಸಕಲೇಶಪುರ: ಪಟ್ಟಣದಲ್ಲಿ ನಮೋ ಬ್ರಿಗೇಡ್ ಸಂಘಟನೆಯಿಂದ ಏರ್ಪಡಿಸಲಾಗಿದ್ದ ಬೈಕ್ ರ್ಯಾಲಿಯಲ್ಲಿ 500 ಕ್ಕೂ ಹೆಚ್ಚು ದ್ವಿಚಕ್ರದಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಪಟ್ಟಣದ ಬಾಳೆಗದ್ದೆಯ ಗುಹೆಕಲ್ಲಮ್ಮ ದೇವಸ್ಥಾನದಿಂದ ಬೆಳಿಗ್ಗೆ 11.30ಕ್ಕೆ ಪ್ರಾರಂಭವಾದ ರ್ಯಾಲಿಗೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಅವರು ವಿವೇಕಾನಂದರ ಭಾವಚಿತ್ರಕ್ಕೆ ಪೂಜಿಸುವ ಮೂಲಕ ಚಾಲನೆ ನೀಡಿದರು.
ಸಾವಿರಾರು ನರೇಂದ್ರ ಮೋದಿರವರ ಅಭಿಮಾನಿಗಳು ನಗರದ ಪ್ರಮುಖ ಬೀದಿಗಳಲ್ಲಿ ತಮ್ಮ ದ್ವಿಚಕ್ರದೊಂದಿಗೆ ಸಂಚರಿಸಿದರು. ಕಾರ್ಯಕ್ರಮದಲ್ಲಿ ಬೈಕ್ ಜೊತೆಗೆ ಕೇಸರಿ ಬಾವುಟ ಹಾಗೂ ಶಲ್ಯಗಳನ್ನು ಏರಿಸಿಕೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಮೋ ಬ್ರಿಗೇಡ್ ಕಾರ್ಯಕರ್ತರು ಅಂತಿಮವಾಗಿ ಹಳೇ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಬಹಿರಂಗಸಭೆಗೆ ಸೇರಿದರು.
ಬ್ರಿಗೇಡ್ ಮುಖಂಡ ರವಿವರ್ಮಾ ಮಾತನಾಡಿ, ಮೋದಿ ಬಗ್ಗೆ ಯಾವುದೇ ಕಪ್ಪುಚುಕ್ಕೆಯಿರುವುದಿಲ್ಲ. ಮೋದಿರವರ ವಿರೋಧಿಗಳು 2002ರಲ್ಲಿ ಗುಜರಾತ್ನಲ್ಲಿ ನಡೆದ ಗೋಧ್ರ ಗಲಭೆಯನ್ನು ಬಿಂಬಿಸಿ ಅವರನ್ನು ಕೋಮುವಾದಿ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ ಎಂದರು.
ನಂತರ ಕೌಡಳ್ಳಿಯಲ್ಲಿರುವ ಎನ್.ಕೆ. ಗಣಪಯ್ಯ ರೋಟರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಮಕ್ಕಳೊಂದಿಗೆ ನಮೋ ಬ್ರಿಗೇಡಿಯರ್ ಕಾರ್ಯಕರ್ತರು ಊಟ ಮಾಡುವುದರ ಮೂಲಕ ನರೇಂದ್ರಮೋದಿ ಹುಟ್ಟುಹಬ್ಬ ಆಚರಿಸಿದರು.
ಮುಖಂಡ ಗಿರೀಶ್ಕಡಬನಹಳ್ಳಿ, ಸಂದೇಶ್ ಶೆಟ್ಟಿ, ರಮೇಶ್ ಅಗ್ರಹಾರ, ದೀಪಕ್, ವಿಕ್ರಮ್, ರಾಜಣ್ಣ, ಹರೀಶಬರಡಹಳ್ಳಿ, ನರೇಶ್ ಇನ್ನು ಮುಂತಾದವರು ಹಾಜರಿದ್ದರು.
ಬೇಲೂರು: ಅಭಿವೃದ್ಧಿಯ ಹರಿಕಾರ ನರೇಂದ್ರಮೋದಿಯವರನ್ನು ಬಿಜೆಪಿ ಮುಂದಿನ ಪ್ರಧಾನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದನ್ನು ದೇಶದ ಯುವಕರು ಹೆಚ್ಚಿನ ರೀತಿಯಲ್ಲಿ ಸ್ವಾಗತಿಸುತ್ತಿದ್ದಾರೆ ಎಂದು ನರೇಂದ್ರಮೋದಿ ಅಭಿಮಾನಿ ಸಂಘದ ಅಧ್ಯಕ್ಷ ಜಯಪಾಲ್ ಹೇಳಿದರು.
ನರೇಂದ್ರಮೋದಿ 64 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲುಹಣ್ಣು ವಿತರಿಸಿದ ನಂತರ ಮಾತನಾಡಿ, ದೇಶದ ಯುವಪಡೆ ಸೇರಿದಂತೆ ಎಲ್ಲರೂ ನರೇಂದ್ರಮೋದಿ ಅವರತ್ತ ಆಕರ್ಷಿತರಾಗಿದ್ದು ಮುಂದಿನ ಪ್ರಧಾನಿ ಅವರೇ ಆಗಲಿದ್ದಾರೆ ಎಂದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್ ಮಾತನಾಡಿ, ಬಿಜೆಪಿ ಮುಖಂಡರು ನೇರಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತಿದ್ದಂತೆ ವಿರೋಧ ಪಕ್ಷಗಳಲ್ಲಿ ನಡುಕು ಶುರುವಾಗಿದ್ದು ದಿನನಿತ್ಯ ಒಂದಿಲ್ಲಾ ಒಂದು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ಪ್ಕ್ಷದ ಹಿರಿಯರಾದ ವೀರಪ್ಪಮೊಯ್ಲಿ, ವಿಶ್ವನಾಥ್, ಜೆಡಿಎಸ್ಪ್ಕ್ಷದ ದೇವೇಗೌಡರು ನೇರಂದ್ರ ಮೋದಿ ಪ್ರಧಾನಿ ಆಗುವುದು ಕನಸು ಎಂದಿದ್ದಾರೆ. ಆದರೆ ದೇಶದ ಜನತೆ ಕೇಂದ್ರ ಸರ್ಕಾರದ ಕೆಟ್ಟ ಆಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.ತಾಲೂಕು ಮಹಿಳಾ ಯುವಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಆನಂದ್, ಚನ್ನಕೇಶವ ಸ್ವಾಮಿ ದೇಗಲ ವ್ಯವಸ್ಥಾಪನಾ ಅಧ್ಯಕ್ಷ ಜಿ.ಕೆ ಕುಮಾರ್, ಅರೇಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಶ್ ಶೆಟ್ಟಿ ಮಾತನಾಡಿದರು. ಬಿಜೆಪಿ ಮುಖಂಡ ರವಿ, ಶ್ರೀದರ್, ಕೃಷ್ಣೇಗೌಡ, ಅಭಿ, ಪವನ್, ಚೇತನ್, ಚಂದನ್, ಜೀವನ್, ಶಿವಕುಮಾರ್, ಶಂಕರ್, ತೇಜು ಇನ್ನೂ ಮೊದಲಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

