ಅಧಿಕಾರಿಗಳ ನಿರ್ಲಕ್ಷ್ಯ: ಮಾಹಿತಿ ಕೇಂದ್ರ ಕಟ್ಟಡ ಕಾಮಗಾರಿ ಅಪೂರ್ಣ
ಹಾಸನ: ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಳಗಳಲ್ಲಿ ಕೇಂದ್ರ ಟ್ಞಜ್ಗಞ್ಟ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ಗ್ರಾಮೀಣ ಜನರಿಗೆ ಅನುಕೂಲವಾಗುವಂತಹ ರಾಜೀವ್ಗಾಂಧಿ ಮಾಹಿತಿ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಜಾವಗಲ್ ಹೋಬಳಿಯ 9 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ 10 ಲಕ್ಷ ರು. ವೆಚ್ಚದಲ್ಲಿ ಮಾಹಿತಿ ಸೇವಾ ಕೇಂದ್ರ ನಿರ್ಮಾಣವಾಗಿದ್ದು 7 ಗ್ರಾಮ ಪಂಚಾಯ್ತಿ ಕೇಂದ್ರ ಗಳಲ್ಲಿ ಉದ್ಘಾಟನೆಯಾಗಿ ಕಳೆದ 6 ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಮಾಹಿತಿ ಕೇಂದ್ರ ಪೂರ್ಣ ವಾಗದಿರುವಲ್ಲಿ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದು ಜಾವಗಲ್ ಗ್ರಾಮ ಪಂಚಾಯಿತಿ ಮಾಹಿತಿ ಕೇಂದ್ರದ ಸಮಸ್ಯೆಯಾದರೆ ಬಂದೂರು ಗ್ರಾಮ ಪಂಚಾಯಿತಿಯಲ್ಲೂ ರಾಜೀವ್ ಗಾಂಧಿ ಮಾಹಿತಿ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಕಿಟಕಿ ಬಾಗಿಲು ಹಾಕದೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಡಿ ನಿರ್ಮಿಸುತ್ತಿರುವ ಕಟ್ಟಡಗಳು ಏಕೆ ಅಪೂರ್ಣಗೊಂಡಿವೆ ಎಂಬುದನ್ನು ಕೇಳುವ ಅಧಿಕಾರಿಗಳು ಸಹ ಇಲ್ಲವಾಗಿದ್ದಾರೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅರ್ಥಪೂರ್ಣ ವಾರ್ಷಿಕೋತ್ಸವಕ್ಕೆ ಛಾಯಾಗ್ರಾಹಕರ ಸಭೆ ನಿರ್ಧಾರ
ಬೇಲೂರು: ತಾಲೂಕು ಛಾಯಾಗ್ರಾಹಕರ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ನಡೆಸಲು ತಾಲೂಕು ಛಾಯಾಗ್ರಾಹಕರ ಸಂಘದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎ.ರಾಘವೇಂದ್ರ ಹೊಳ್ಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದಲ್ಲಿ ಛಾಯಾಗ್ರಾಹಕರ ಸಂಘ ಸ್ಥಾಪನೆಯಾಗಿ ಅಕ್ಟೋಬರ್ಗೆ ಒಂದು ಕಳೆಯಲಿದ್ದು, ಈ ಹಿನ್ನೆಲೆಯಲ್ಲಿ ಸವಿನೆನಪಿಗಾಗಿ ವಾರ್ಷಿಕೋತ್ಸವ ಸಮಾರಂಭ ನಡೆಸುವುದು, ಕಾರ್ಯಕ್ರಮದ ದಿನದಂದು ಡಿಜಿಟಲ್ ತಾಂತ್ರಿಕತೆ, ಕ್ಯಾಮರಗಳ ಬಗ್ಗೆ ಅನುಭವಿ ತಂತ್ರಜ್ಞರಿಂದ ತರಬೇತಿ ಶಿಬಿರ ನಡೆಸುವುದು, ಛಾಯಾಗ್ರಾಹಕರಿಗೆ ಮಧುಮೇಹ, ಕಣ್ಣು ತಪಾಸಣೆ ಅಲ್ಲದೆ ತಾಲೂಕಿನ ಛಾಯಾಗ್ರಾಹಕರಿಗೆ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸುವ ಬಗ್ಗೆ ಚರ್ಚೆ ನಡೆಯಿತು. ಉಪಾಧ್ಯಕ್ಷ ನಾಯಕ್ ಸ್ಟುಡಿಯೋ ಪ್ರಕಾಶ್, ಕಾರ್ಯದರ್ಶಿ ಎ.ಎಲ್.ಆರ್. ಸ್ಟುಡಿಯೋ ಅಶೋಕ್, ಖಜಾಂಚಿ ಏಕದಂತ ಸ್ಟುಡಿಯೋ ಮಲ್ಲೇಶ್, ಹಿರಿಯ ಛಾಯಾಗ್ರಾಹಕ ಶ್ಯಾಂ, ರಮೇಶ್, ಸುರೇಶ್, ಪ್ರಭಾಕರ್, ಶಿವಕುಮಾರ್, ಗುರು, ಚಂದ್ರು, ರಾಘು, ಯಶ್ವಂತ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

