ಖಾಸಗಿ ಬ್ಯಾಂಕ್ ತೆರೆಯಲು ಕೇಂದ್ರ ಸಜ್ಜು
ಕನ್ನಡಪ್ರಭ ವಾರ್ತೆ ಹಾಸನ ಸೆ.18
ಬ್ಯಾಂಕಿಂಗ್ ವ್ಯವಹಾರದ ಹಿನ್ನೆಲೆ, ಅನುಭವವಿಲ್ಲದ, ಸಾರ್ವಜನಿಕರ ಠೇವಣಿ ಲೂಟಿ ಮಾಡುವ ಉದ್ದೇಶ ಹೊಂದಿರುವ ಖಾಸಗಿ ಕಂಪನಿಗಳಿಗೆ ಬ್ಯಾಂಕ್‌ಗಳನ್ನು ತೆರೆಯಲು ಅನುಮತಿ ನೀಡಲು ಕೇಂದ್ರ ತುದಿಗಾಲಲ್ಲಿ ನಿಂತಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ವಾಲ್ಟರ್‌ಲಾಸ್‌ರೆಡೊ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 26 ಕಂಪನಿಗಳು ಬ್ಯಾಂಕ್ ತೆರೆಯಲು ಅರ್ಜಿ ಸಲ್ಲಿಸಿವೆ. ಅರ್ಜಿಗಳನ್ನು ಪರಿಶೀಲಿಸಿರುವ ಕೇಂದ್ರ ಸರ್ಕಾರ ಖಾಸಗಿ ಬ್ಯಾಂಕುಗಳನ್ನು ತೆರೆಯಲು ಸಜ್ಜಾಗಿದೆ. ಈಗ ಬ್ಯಾಂಕು ತೆರೆಯಲು
ಮುಂದಾಗಿರುವ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೋಟ್ಯಂತರ ರು. ಸುಸ್ತಿದಾರರಾಗಿವೆ. ಮತ್ತೀಗ ಈಗ ಸಾರ್ವಜನಿಕರ ಠೇವಣಿ ಹಣವನ್ನು ಲೂಟಿ ಮಾಡುವ ಉದ್ದೇಶದ ಸಂಸ್ಥೆಗಳಿಗೆ 2014 ರಲ್ಲಿ ಕೇಂದ್ರ ಸರ್ಕಾರ ಲೈಸನ್ಸ್ ನೀಡುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಹೊಸ ಬ್ಯಾಂಕಿಂಗ್ ಲೈಸೆನ್ಸ್ ನೀತಿಯನ್ನು ಅನುಸರಿಸುತ್ತಿರುವುದರಿಂದ ಹೊಸ ಪೀಳಿಗೆಯ ಬ್ಯಾಂಕುಗಳು ಅಸ್ತಿತ್ವಕ್ಕೆ ಬಂದಿದೆ. ಇಂತಹ ಖಾಸಗಿ ಬ್ಯಾಂಕುಗಳಲ್ಲಿ ಗ್ರಾಹಕರು ಖಾತೆ ಹೊಂದಲು ಕನಿಷ್ಠ 10 ಸಾವಿರ ರು. ಠೇವಣಿ ಇಡಬೇಕು. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೇವಲ 250 ರು. ಠೇವಣಿ ಇದ್ದರೆ ಸಾಕು. ಖಾಸಗಿ ಬ್ಯಾಂಕುಗಳು ಗ್ರಾಹಕರ ಹಣವನ್ನು ಲೂಟಿ ಮಾಡುವ ಉದ್ದೇಶದಿಂದಲೇ ರೂಪುಗೊಂಡಂತಿವೆ ಎಂದು ಕಿಡಿಕಾರಿದರು.
ಹೊರ ಗುತ್ತಿಗೆ ನೆಪದಲ್ಲಿ ಖಾಸಗೀಕರಣ: 1980ರ ದಶಕದಲ್ಲಿ ಬ್ಯಾಂಕ್ ನೌಕರರ ಸಂಘಗಳ ಹೋರಾಟದ ಫಲವಾಗಿ ಖಾಸಗಿ ಬ್ಯಾಂಕ್‌ಗಳು ರಾಷ್ಟ್ರೀಕರಣವಾಗಿದ್ದವು. ಆದರೆ 1991 ರಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಯನ್ನು ಭಾರತ ಸರ್ಕಾರ ಅನುಸರಿಸಲು ನಿರ್ಧರಿಸಿದ ನಂತರ ರಾಷ್ಟ್ರೀಕರಣಗೊಂಡ ಬ್ಯಾಂಕ್‌ಗಳನ್ನು ಖಾಸಗೀಕರಣ ಗೊಳಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಈಗಾಗಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ.50 ರಷ್ಟು ಸೇವೆ ಗುತ್ತಿಗೆ, ಹೊರ ಗುತ್ತಿಗೆ ನೆಪದಲ್ಲಿ ಖಾಸಗೀಕರಣ ಗೊಂಡಿವೆ. ಬ್ಯಾಂಕ್ ನೌಕರರು ಎಚ್ಚೆತ್ತು ಕೊಂಡು ಹೋರಾಟ ಮಾಡದಿದ್ದರೆ ರಾಷ್ಟ್ರೀಕೃತ ಬ್ಯಾಂಕುಗಳು ಖಾಸಗೀಕರಣ ವಾಗುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಸಿದರು.
ಕೇಂದ್ರದ ಹೊಸ ಆರ್ಥಿಕ ಸುಧಾರಣಾ ನೀತಿಗಳಿಂದ ಶ್ರೀಮಂತರು ಹೆಚ್ಚು ಶ್ರೀಮಂತರಾದರೆ, ಬಡವರು ಕಡು ಬಡವರಾಗುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಖಾಸಗಿ ಕೈಗಾರಿಕೆಗಳಲ್ಲಿನ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಿ ಅಸಂಘಟಿತ ಕಾರ್ಮಿಕರ ಸಂಕಷ್ಟಕ್ಕೆ
ಸಿಲುಕಿದ್ದಾರೆ. ಆದರೆ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಿ ಅಸಂಘಟಿತ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಖಾಸಗಿ ಕೈಗಾರಿಕೋದ್ಯಮಿಗಳಿಗೆ 5.23 ಲಕ್ಷ ಕೋಟಿ ರು. ತೆರಿಗೆ ವಿನಾಯ್ತಿ ನೀಡಿದೆ ಎಂದು ಟೀಕಿಸಿದರು.
ರಾಜ್ಯ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಹಿರಣ್ಣಯ್ಯ, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಎಚ್.ಎನ್. ಪರಮಶಿವಯ್ಯ ಬಿ.ಎಸ್. ರಾಜಾಜಿ, ಸುಬ್ಬಣ್ಣ ಆರ್.ಕುಮಾರ್ ಇದ್ದರು.
1980ರ ದಶಕದಲ್ಲಿ ಬ್ಯಾಂಕ್ ನೌಕರರ ಸಂಘಗಳ ಹೋರಾಟದ ಫಲವಾಗಿ ಖಾಸಗಿ ಬ್ಯಾಂಕ್‌ಗಳು ರಾಷ್ಟ್ರೀ ಕರಣವಾದವು. ಆದರೆ 1991 ರಲ್ಲಿ ಉದಾರೀಕರಣ, ಜಾಗತೀಕರಣ ನೀತಿಯನ್ನು ಕೇಂದ್ರ ಅನುಸರಿಸಲು ನಿರ್ಧರಿಸಿದ ನಂತರ ರಾಷ್ಟ್ರೀಕರಣಗೊಂಡ ಬ್ಯಾಂಕ್‌ಗಳನ್ನು ಮತ್ತೆ ಖಾಸಗೀಕರಣ ಗೊಳಿಸುವ ಹುನ್ನಾರ ಮಾಡುತ್ತಿದೆ
-ವಾಲ್ಟರ್‌ಲಾಸ್‌ರೆಡೊ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

