ಗ್ರಾಮೀಣ ಜನರಿಗೆ 50 ರಿಯಾಯಿತಿ ದಸರಾ ದರ್ಶನ
ಕ.ಪ್ರ. ವಾರ್ತೆ, ಮೈಸೂರು, ಸೆ.19
ದಸರಾ ಕಾರ್ಯಕ್ರಮ ಹಾಗೂ ಮೈಸೂರನ್ನು ಒಮ್ಮೆಯೂ ವೀಕ್ಷಿಸದ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಗ್ರಾಮೀಣ ಭಾಗದ ಜನರಿಗಾಗಿ ದಸರಾ ದರ್ಶನ ಎಂಬ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವರಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ನಲ್ಲಿ ನಿಗದಿತ ಗ್ರಾಮಗಳಿಂದ ಜನರನ್ನು ಮೈಸೂರಿಗೆ ಕರೆತರಲಾಗುತ್ತದೆ. ದಸರಾ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಲಾಗುತ್ತದೆ. ರಾತ್ರಿ ಮತ್ತೆ ಆಯಾ ಊರಿಗೆ ಬಿಡಲಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರಿಗೂ 50 ರಿಯಾಯಿತಿ ದರ ಪಾಸುಗಳನ್ನು ಒದಗಿಸಲಾಗುತ್ತದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ 29 ತಾಲೂಕುಗಳಿಂದ ಜನರನ್ನು ಕರೆತಂದು ದಸರಾ ದರ್ಶನ ಮಾಡಿಸಲಾಗುತ್ತದೆ. ಈ ಬಾರಿಯ ದಸರಾ ದರ್ಶನವು ಅ.6 ರಿಂದ 10 ರವರೆಗೆ ಹಮ್ಮಿಕೊಳ್ಳಲಾಗಿದೆ.
ಬಸ್ಸಿನ ವ್ಯವಸ್ಥೆ: ಅ.6 ರಿಂದ 8 ರವರೆಗೆ ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಟ್ಟು 18 ತಾಲೂಕುಗಳಿಂದ ಗ್ರಾಮೀಣ ಜನರನ್ನು ದಸರಾ ದರ್ಶನಕ್ಕೆ ಕರೆತರಲಾಗುತ್ತದೆ. ಅ.9 ಮತ್ತು 10 ರಂದು ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ 11 ತಾಲೂಕುಗಳಿಂದ ದಸರಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. 29 ತಾಲೂಕುಗಳಿಗೂ ಒಟ್ಟು 174 ಬಸ್ ಒದಗಿಸಲಾಗುತ್ತದೆ. ಈ ವರ್ಷ 9570 ಮಂದಿದಸರಾ ದರ್ಶನ ಆಗಮಿಸುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶಗಳಿಂದ ದಸರಾ ದರ್ಶನಕ್ಕೆ ಬರುವ ಜನರಿಗೆ ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ಹಾಗೂ ದಸರಾ ಕಾರ್ಯಕ್ರಮಗಳ ವೀಕ್ಷಣೆ ಮಾಡಿಸಲಾಗುತ್ತದೆ. 20 ರಿಯಾಯಿತಿ ದರದಲ್ಲಿ ಮೃಗಾಲಯ ವೀಕ್ಷಣೆಗೆ ಅನುಮತಿ ಸಿಕ್ಕಿದೆ. ಅರಮನೆ ಮತ್ತು ಚಾಮುಂಡಿಬೆಟ್ಟದಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ದಸರಾ ದರ್ಶನ ಉಪಸಮಿತಿಯ ಕಾರ್ಯಾಧ್ಯಕ್ಷ ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಶ್ರೀನಿವಾಸ್ “OÚ«ÚsÚ®ÚúڒOæQ ತಿಳಿಸಿದರು.
ದಸರಾ ದರ್ಶನ ಉಪಸಮಿತಿಯ ಅಧ್ಯಕ್ಷ ಆರ್.ಎಂ. ರಾಜಪ್ಪ, ಉಪಾಧ್ಯಕ್ಷ ಎನ್.ಆರ್.ನಾಗೇಶ್, ಕಾರ್ಯಾಧ್ಯಕ್ಷ ಕೆಎಸ್ಆರ್ಟಿಸಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಶ್ರೀನಿವಾಸ್, ಕಾರ್ಯದರ್ಶಿಯಾದ ಜಿಪಂ ಯೋಜನಾಧಿಕಾರಿ ವಸುಂಧರಾದೇವಿ, ಸದಸ್ಯರಾದ ನರಸಿಂಹಮೂರ್ತಿ, ತಾಜ್ ಅಹಮದ್, ರೇವಣ್ಣ, ಎಸ್.ರತ್ನಮ್ಮ, ಜಿ.ಎಸ್. ನಂಜುಂಡಸ್ವಾಮಿ, ಸುರೇಶ್ಕುಮಾರ್ ಜೈನ್, ಎಂ.ಬಿ. ದೊಡ್ಡೇಗೌಡ, ಸ್ವಾಮಿನಾಯಕ, ವಿಕ್ರಾಂತ್ ಪಿ. ದೇವೇಗೌಡ, ಬಿ.ಎಸ್. ರಾಮು ಅವರು ಬನ್ನಿಮಂಟಪದಲ್ಲಿರುವ ಕೆಎಸ್ಆರ್ಟಿಸಿ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಗುರುವಾರ ಸಭೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ದಸರಾ ದರ್ಶನಕ್ಕೆ ಆಗಮಿಸುವವರಿಗೆ ಊಟದ ಪಾಸ್ ನೀಡಲು ಸಹ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ದಸರಾ ದರ್ಶನ ಸಂಬಂಧ 29 ತಾಲೂಕುಗಳ ತಹಸೀಲ್ದಾರರ ಸಭೆಯು ಸೆ.24 ರಂದು ಮೈಸೂರಿನ ಕೆಎಸ್ಆರ್ಟಿಸಿ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

