ಹಾಸನ

ಶುದ್ಧ ಹಾಲಿಗೆ ಉಪ್ಪು ನೀರು ಬೆರೆಸಿ ವಂಚನೆ

Published On :

ಕ.ಪ್ರ.ವಾರ್ತೆ ಹಾಸನ ಸೆ. 19
ಶುದ್ಧ ಹಾಲಿಗೆ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಕಲಬೆರಕೆ ಮಾಡಿ ಹಾಲು ಉತ್ಪಾದಕರನ್ನು ವಂಚಿಸುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಬುಧವಾರ ರಾತ್ರಿಯಿಡಿ ಕೂಡಿ ಹಾಕಿದ ಘಟನೆ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಹಾಸನದ ಗವೇಹನಹಳ್ಳಿಯ ನಾಗಣ್ಣ ಮತ್ತು ದಿಲೀಪ್ ಎಂಬುವರು ಹಾಲನ್ನು ಕಲಬೆರಕೆ ಮಾಡಿ ರೈತರು ಹಾಗೂ ಹಾಲು ಒಕ್ಕೂಟಕ್ಕೆ ವಂಚಿಸುತ್ತಿದ್ದರು. ಇವರಿಬ್ಬರನ್ನೂ ಗ್ರಾಮಸ್ಥರು ಹಾಸನ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಲೂಕಿನ ವೀರಾಪುರ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಸುಮಾರು ಏಳೆಂಟು ಸಂಘಗಳಿಂದ ಪ್ರತಿನಿತ್ಯ ನಾಗಣ್ಣ ನೂರಾರು ಲೀಟರ್ ಹಾಲನ್ನು ಕ್ಯಾಂಟರ್ ಮೂಲಕ ಒಕ್ಕೂಟಕ್ಕೆ ಸಾಗಿಸುತ್ತಿದ್ದರು. ಪ್ರತಿ ಸಂಘದಿಂದ ದಿನಕ್ಕೆ 30ರಿಂದ 40 ಕ್ಯಾನ್‌ಗಳನ್ನು ಪಡೆಯುತ್ತಿದ್ದ ಅವರು, ಬೆಳಗ್ಗೆ ಹಾಗೂ ಸಂಜೆ ತಲಾ 15 15 ಕ್ಯಾನ್‌ಗಳನ್ನು ಹಾಲನ್ನು ಹಾಸನ ಹಾಲು ಒಕ್ಕೂಟಕ್ಕೆ ಸಾಗಿಸುತ್ತಿದ್ದರು.್ಙ
ಗ್ರಾಮಸ್ಥರಿಂದ ಕ್ಯಾಂಟರ್ ಪರಿಶೀಲನೆ: ಎಂದಿನಂತೆ ಹಾಲನ್ನು ತೆಗೆದುಕೊಂಡು ಹೋಗಲು ನಾಗಣ್ಣ ವೀರಾಪುರ ಹಾಲು ಒಕ್ಕೂಟಕ್ಕೆ ಬಂದಿದ್ದರು. ಆಗ ಗ್ರಾಮಸ್ಥರು ಕ್ಯಾಂಟರ್ ನೋಡಿದಾಗ ಆತ ಸುಮಾರು ಮುಕ್ಕಾಲು ಭಾಗ ತುಂಬಿದ್ದ ಕ್ಯಾನ್‌ಗಳಲ್ಲಿ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಇಟ್ಟಿದ್ದು ಪತ್ತೆಯಾದವು. ಲಾರಿಯಲ್ಲಿಯೇ ಪಂಚಿಂಗ್ ಯಂತ್ರವೂ ಪತ್ತೆಯಾಗಿದ್ದು, ಗ್ರಾಮಸ್ಥರು ಇವು ಏನೆಂದು ಪ್ರಶ್ನಿಸಿದ್ದಾರೆ.
ತುಂಬಿದ ಹಾಲಿನ ಕ್ಯಾನ್‌ಗಳನ್ನು ಈ ಇಬ್ಬರು ಆರೋಪಿಗಳು ಮಾರ್ಗ ಮಧ್ಯೆಯೇ ತೆಗೆದು ಶುದ್ಧ ಹಾಲು ತೆಗೆದು, ಕಡಿಮೆಯಾದ ಹಾಲಿಗೆ ಉಪ್ಪು ಹಾಗೂ ಸಕ್ಕರೆ ಮಿಶ್ರಿತ ನೀರನ್ನು ಕಲಬೆರಕೆ ಮಾಡಿ, 30 ಡಿಗ್ರಿಯಷ್ಟು ಗುಣಮಟ್ಟ ಬರುವಂತೆ ಕಾಯ್ದುಕೊಂಡು ಮತ್ತೆ ಕ್ಯಾನ್‌ಗಳನ್ನು ಸೀಲ್ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳಪೆ ಗುಣಮಟ್ಟದ ಹಾಲಿಗೆ ಹಾಲು ಒಕ್ಕೂಟ ಲೀಟರ್‌ಗೆ 21 ಬದಲು 18 ನೀಡುತ್ತಿದ್ದರು. ಇದರಿಂದ ಸಹಕಾರ ಸಂಘಕ್ಕೂ ನಷ್ಟವಾಗುತ್ತಿತ್ತು.
ವಿಚಾರ ತಿಳಿದ ಹಾಲು ಒಕ್ಕೂಟದ ಮುಖ್ಯ ವ್ಯವಸ್ಥಾಪಕ ಗೋಪಾಲಯ್ಯ, ಉಪ ವ್ಯವಸ್ಥಾಪಕ ಜಯಪ್ರಕಾಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಸಂಬಂಧವಾಗಿ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಗ್ರಾಮಾಂತರ ಪೊಲೀಸರು, ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.