ಹಾಸನ

ಜಿಲ್ಲಾ ಅಂತರ ಕಾಲೇಜು ಎನ್‌ಎಸ್‌ಎಸ್ ಶಿಬಿರ

Published On :

ಕನ್ನಡಪ್ರಭ ವಾರ್ತೆ ಹಾಸನ ಸೆ.20
ಚನ್ನರಾಯಪಟ್ಟಣ ತಾ. ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಂತರ ಕಾಲೇಜು ಶಿಬಿರವನ್ನು ಹೊಳೆನರಸೀಪುರ ತಾಲೂಕಿನ ತೆರಣ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
  ಶಿಬಿರ ಉದ್ಘಾಟಿಸಿದ ಪ್ರಭಾರಿ ಪ್ರಾಂಶುಪಾಲ ಪ್ರೊ. ಬಿ.ನಂಜುಂಡಸ್ವಾಮಿ ಮಾತನಾಡಿ, ಶಿಬಿರಾರ್ಥಿ  ಗಾಂಧೀಜಿಯವರ ಗ್ರಾಮಗಳ ಉದ್ಧಾರದ ಕನಸು ನನಸು ಮಾಡಬೇಕೆಂದು ಹಾಗೂ ಎಲ್ಲರೂ ಜಾತಿಯನ್ನು ಮರೆತು ಒಂದೇ ಎಂಬ ಭಾವನೆಯಿಂದ ಇದ್ದು, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
 ಗ್ರಾಮದ ನಿವೃತ್ತ ಉಪನ್ಯಾಸಕ ಶಿವರಾಜು, ದೊರೆಸ್ವಾಮಿ, ಮಂಜೇಗೌಡ, ಈರಯ್ಯ ಹಾಗೂ ಗ್ರಾಮದ ಎಲ್ಲಾ ಮುಖಂಡರು ಇದ್ದರು. ಶಿಬಿರದ ಸಂಯೋಜಕ ಸಿ.ಎಲ್.ಶಿವಕುಮಾರ್ ಸ್ವಾಗತಿಸಿದರು.
 ಪ್ರೊ. ಕೃಷ್ಣಪ್ಪ, ಎನ್‌ಎಸ್‌ಎಸ್ ಅಧಿಕಾರಿ ವಂದಿಸಿದರು. ಪ್ರೊ. ಎಚ್.ಕೆ. ಜಯರಾಮ್, ಪ್ರೊ. ಎಚ್.ಎಸ್.ಲಿಂಗಪ್ಪ, ಸಹಾಯಕ ಪ್ರಾಧ್ಯಾಪಕ ಪ್ರೊ. ಹನುಮಂತಯ್ಯ, ಪ್ರೊ. ಪ್ರಕಾಶಕುಮಾರ್, ಪ್ರೊ. ಗಂಗಾಧರಯ್ಯ, ಪ್ರೊ. ಹೇಮೇಗೌಡ ಇದ್ದರು. ಯಶವಂತ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಬಿರಾರ್ಥಿ ಉಮೇಶ ನಿರೂಪಿಸಿದರು.

ಅಧ್ಯಕ್ಷೆ ಶ್ರೀವಿದ್ಯಾರಿಂದ ವಾರ್ಡ್ ಭೇಟಿ, ಪರಿಶೀಲನೆ
ಹಾಸನ: ನಗರಸಭೆ ನೂತನ ಅಧ್ಯಕ್ಷೆ ಶ್ರೀವಿದ್ಯಾ 31ನೇ ವಾರ್ಡ್‌ನಲ್ಲಿ ಸ್ವಚ್ಛತೆ, ಕಸ ವಿಲೇವಾರಿ ಇತ್ಯಾದಿಯನ್ನು ವೀಕ್ಷಣೆ ಮಾಡುವಾಗ ಕೆಲ ಮನೆಗಳವರು ರಸ್ತೆ ಒತ್ತುವರಿ ಮಾಡಿರುವುದು ಕಂಡುಬಂದಿತು.31ನೇ ವಾರ್ಡ್‌ನಿಂದ ಸಿದ್ದಯ್ಯ ನಗರಕ್ಕೆ ತೆರಳಿದ ಅಧ್ಯಕ್ಷೆ ರಸ್ತೆ ಮೇಲೆ ಟೆಂಟ್ ಹಾಕಿದ್ದನ್ನು ಗಮನಿಸಿ ತೆರವುಗೊಳಿಸಲು ತಿಳಿಸಿದರು. ಆಯುಕ್ತ ನಾಗಭೂಷಣ್ ಸೇರಿ ನಾನಾ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆರೋಗ್ಯಾಧಿಕಾರಿ ಕೃಷ್ಣಮೂರ್ತಿ, ನಾಗೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.