ಬಾಲಕ ಅಪಹರಣ, ಸಿನಿಮಿಯ ರೀತಿಯಲ್ಲಿ ಬಚಾವ್
ಆಲೂರು: ಪಟ್ಟಣದ ಅಬ್ದುಲ್ ಅನೀಫ್ ಎಂಬುವರ ಪುತ್ರ ಮಹಮ್ಮದ್ ಸೈಫ್ (12) ನನ್ನು ಅಪಹರಣ ಮಾಡಿದ್ದು, ಬಾಲಕ ಸಿನಿಮೀಯ ರೀತಿಯಲ್ಲಿ ಬಚಾವ್ ಆಗಿ ಬಂದ ಘಟನೆ ಶುಕ್ರವಾರ ನಡೆದಿದೆ.
ಭೈರಾಪುರದ ಬೆಥೆಸ್ತಾ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಬೆಳಗಿನ ಜಾವ 6.30 ರಲ್ಲಿ ಹೋಂ ವರ್ಕ್‌ಗೆಂದು ಪೆನ್ಸಿಲ್ ತರಲು ಬಿ.ಎಂ.ರಸ್ತೆಯಲ್ಲಿ ಹೋಗುತ್ತಿದ್ದ. ಆಗ ಸಕಲೇಶಪುರ ಮಾರ್ಗದಿಂದ ಕೆಂಪು ಓಮ್ನಿಕಾರಿನಲ್ಲಿ ಬಂದ ನಾಲ್ವರು ಆತನ ಬಾಯಿ ಮುಚ್ಚಿ ಕಾರಿನಲ್ಲಿ ಅಪಹರಿಸಿ ಹಾಸನ ಬೈಪಾಸ್ ರಸ್ತೆಯಲ್ಲಿ ಹೋಗಿ, ಟೀ ಕುಡಿಯಲು ಕಾರನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬಾಲಕ ಅವರಿಂದ ತಪ್ಪಿಸಿಕೊಂಡು ಜನರಿದ್ದ ಕಡೆಗೆ ಓಡಿದ ಕಾರಣ ಅಪಹರಣಕಾರರು ಅಲ್ಲಿಂದ ಕಾಲು ಕಿತ್ತಿದ್ದಾರೆ. ನಂತರ ಬಾಲಕ ಬೈಪಾಸ್ ಮೂಲಕ ಜವರಾಯಪಟ್ಟಣ ತನಕ ನಡೆದುಕೊಂಡು ಬಂದು, ನಂತರ ಟೆಂಪೋದಲ್ಲಿ ಆಲೂರಿಗೆ ಬಂದಿದ್ದಾನೆ. ವಿಷಯ ತಿಳಿದು ಗಾಬರಿಗೊಂಡ ಪೋಷಕರು ಸ್ಥಳೀಯರೊಡಗೂಡಿ ಅಪಹರಣಕಾರರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದು, ಈವರೆಗೂ ಅಪಹರಣಕಾರರ ಸುಳಿವು ಸಿಕ್ಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

