ಹಾಸನ

ಕಾನೂನು ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯ ಪ್ರತಿಪಾದಕರಾಗಲಿ: ತಿಮ್ಮೇಗೌಡ

Published On :

ಹಾಸನ: ಸಮಾಜಕ್ಕೆ ಸಮರ್ಪಕ ನ್ಯಾಯ ಒದಗಿಸಿಕೊಡುವ ಸಾರ್ಥಕ ನ್ಯಾಯವಾದಿಗಳಾಗಿ ರೂಪುಗೊಳ್ಳಬೇಕು ಎಂದು ರಾಜ್ಯ ವಕೀಲ ಪರಿಷತ್  ಸದಸ್ಯ  ಎಚ್.ವಿ.ತಿಮ್ಮೇಗೌಡ ತಿಳಿಸಿದರು.
ಎಂ.ಕೃಷ್ಣ ಕಾನೂನು ಮಹಾವಿದ್ಯಾಲಯ,  ಹಾಸನದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ವತಿಯಿಂದ ಇತ್ತೀಚೆಗೆ  ಕಾನೂನು ಕಾಲೇಜಿನ  ಮೂಟ್ ಕೋರ್ಟ್ ಸಭಾಂಗಣದಲ್ಲಿ  ಪ್ರಥಮ ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಮತ್ತು ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಯಾಧೀಶ ಜೆ.ಎಸ್.ಸೋಮಶೇಖರ್ ಮಾತನಾಡಿ, ಪ್ರಸ್ತುತ ವಿಜ್ಞಾನ ಮತ್ತು  ಮಾಹಿತಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ರಾಂತಿಕಾರಿ ಬೆಳವಣಿಗೆಗಳ  ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳು  ಮಹತ್ತರ  ಸಾಧನೆಗೈಯ್ಯಲು ವಿಫುಲ ಅವಕಾಶಗಳಿರುತ್ತವೆ ಎಂದರು.
ಪ್ರಾಂಶುಪಾಲ ವೈ.ಪಿ.ಉದಯಕುಮಾರ್ ಮತ್ತು ಉಪನ್ಯಾಸಕರು ಕಾಲೇಜಿನ ಪಠ್ಯ ಚಟುವಟಿಕೆಗಳ ಮತ್ತು  ಸಮಗ್ರ ಮಾಹಿತಿ ಬಗ್ಗೆ ವಿದ್ಯಾರ್ಥಿಗಳಿಗೆ  ತಿಳಿಸಿದರು.
ಇದೇ ವೇಳೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಪಾಲಕ ಎಸ್.  ಶಿವರಾಮಕೃಷ್ಣಯ್ಯ  ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು. ಸುಚಿತ್ರ ಪ್ರಾರ್ಥಿಸಿದರು.
 ನಮಿತಾ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು. ನಂತರ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

18 ಕಿಮೀ ರಸ್ತೆ ಅಭಿವೃದ್ಧಿ: ಶಾಸಕ ಕುಮಾರಸ್ವಾಮಿ
ಸಕಲೇಶಪುರ:  ನಮ್ಮ ರಸ್ತೆ, ನಮ್ಮ ಗ್ರಾಮ  ಯೋಜನೆಯಡಿ  ತಾಲೂಕಿನ 18 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು
ಇತ್ತೀಚೆಗೆ  ತಾಲೂಕಿನ ಕೆಲಗಳಲೆ-ಹೂಸಕೊಪ್ಪಲು ಗ್ರಾಮದ ರಸ್ತೆ ಅಭಿವೃದ್ಧಿಗೆ ಹೂಸಕೊಪ್ಪಲು ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ರಸ್ತೆ ನಮ್ಮ ಗ್ರಾಮ ಯೋಜನೆಯಡಿ 30 ಕಿ.ಮೀ. ರಸ್ತೆ ಮಂಜೂರಾಗಿದ್ದು, ಇದರಲ್ಲಿ ಸಕಲೇಶಪುರ ತಾಲೂಕಿನ 18 ಕಿ.ಮೀ. ರಸ್ತೆ ಆಲೂರಿನ 9 ಕಿ.ಮೀ ಹಾಗೂ ಕಟ್ಟಾಯ ಹೋಬಳಿಯ 3 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. ಈ ಯೋಜನೆಯಲ್ಲಿ ತಾಲೂಕು ಕೇಂದ್ರದ ಪ್ರಮುಖ ಸಂಪರ್ಕ ರಸ್ತೆಯಾದ ಕೆಲಗಳಲೇ-ಹೂಸಕೊಪ್ಪಲು  ಸಂಪರ್ಕ ಕಲ್ಪಿಸುವ 4 ಕಿ.ಮೀ. ರಸ್ತೆ ಅಭಿವೃದ್ಧಿಯನ್ನು ರು. 2.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಗೊಳ್ಳಲಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು. ತಾಪಂ ಅಧ್ಯಕ್ಷೆ ಮಂಜುಳಾ, ಉದೇವಾರ ಗ್ರಾಪಂ ಉಪಾಧ್ಯಕ್ಷ ಪೈರೋಜ್, ಸುಲೋಚನಾ ರಾಮಕೃಷ್ಣ, ವೇದಾವತಿ  ರಾಮಕೃಷ್ಣ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.