ಹಾಸನ

ಮಡಿಲು ಕಿಟ್‌ನಿಂದ ಶಿಶು ಸಾವಿಗೆ ಕಡಿವಾಣ: ಅನ್ಬುಕುಮಾರ್

Published On :

ಬೇಲೂರು: ಸರ್ಕಾರದಿಂದ ನೀಡುವ ಮಡಿಲು ಕಿಟ್ ಉಪಯೋಗದಿಂದ ಮಕ್ಕಳ ಸಾವಿನ ಸಂಖ್ಯೆ ನಿಯಂತ್ರಣವಾಗಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ತಾಲೂಕು ಆರೋಗ್ಯ ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿ,  ಸಮಸ್ಯೆ ಅಲಿಸಿದ ನಂತರ  ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸರ್ಕಾರಕ್ಕೆ ವರದಿ: ಹಗರೆ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ವೈದ್ಯರ ಕೋರತೆ ಸಮಸ್ಯೆ ಇದೆ. ಅಲ್ಲದೆ ಬೇಲೂರು ಆಸ್ಪತ್ರೆಯಲ್ಲಿ ಕೂಡ ಈ ಸಮಸ್ಯೆ ಇದ್ದು, ನಾವುಗಳು ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛತೆಗೆ ಆದ್ಯತೆ ಇರಲಿ: ಔಷಧಿಗಳ ಕೊರತೆ ಇಲ್ಲ ಹಾಗೂ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಹಾಗೂ ದಾಖಲೆಗಳ ಬಗ್ಗೆ ಅಧಿಕಾರಿಗಳು ಅತಿ ಜಾಗೃತಿ ವಹಿಸಬೇಕು ಎಂದು ತಾಕೀತು ಮಾಡಿದ ಅವರು ಸಾರ್ವಜನಿಕರು ವೈದ್ಯರೊಂದಿಗೆ ಸಹಕಾರ ಇರುವಂತೆ ಮನವಿ ಮಾಡಿದರು.ತಾಲೂಕು ಆರೋಗ್ಯ ಕೇಂದ್ರದ  ಅಧಿಕಾರಿ ಡಾ. ಸಂಧ್ಯಾ ಮಾತನಾಡಿದರು.
ಡಾ.ನರಸೇಗೌಡ ಹಾಗೂ ಸಿಬ್ಬಂದಿ, ಇತರರು ಇದ್ದರು.

ಸಂಘದ ಗುರುತಿನ ಚೀಟಿ ವಿತರಣೆ
ಹಾಸನ: ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನವಾಗಿ ಸದಸ್ಯರಾಗಿರುವ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ನಡೆಯುತ್ತಿದ್ದು, ಈ ನಿಟ್ಟಿನಲಲ್ಲಿ ಒಕ್ಕಲಿಗರ ಸಂಘದ  ನೂತನ ಸದಸ್ಯರು ತಮ್ಮ ಮತದಾನದ ಹಕ್ಕು ಚಲಾಯಿಸಲು ಗುರುತಿನ ಚೀಟಿ ಪಡೆಯುವಂತೆ ಮನವಿ ಮಾಡಲಾಗಿದೆ. ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಸೆ.30 ರವರೆಗೆ, ಗಂಡಸಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸ ಸಂಘದಲ್ಲಿ ಸೆ.25 ಮತ್ತು 26ರಂದು, ಚನ್ನರಾಯಪಟ್ಟಣದ ಜಿಲ್ಲಾ  ಸಹಕಾರ ಬ್ಯಾಂಕ್ ಶಾಖೆಯಲ್ಲಿ  ಸೆ. 27 ರಿಂದ ಸೆ. 30 ರವರೆಗೆ ಗುರುತಿನ  ಚೀಟಿ ವಿತರಿಸಲಾಗುವುದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.