ಹಾಸನ

ತೂಕದಲ್ಲಿ ಮೋಸ: ಗ್ರಾಹಕರ ಪ್ರತಿಭಟನೆ

Published On :

ಸಕಲೇಶಪುರ: ಪಡಿತರ ನೀಡುವ ವೇಳೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಹಕರು ನ್ಯಾಯಬೆಲೆ ಅಂಗಡಿ ಎದುರು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ  ಅಧಿಕಾರಿಗಳು ಪಟ್ಟಣದ ಕುಶಾಲನಗರ ಬಡಾವಣೆಯ ನ್ಯಾಯಬೆಲೆ ಅಂಗಡಿಗೆ ಬೀಗ ಜಡಿದ ಘಟನೆ ಭಾನುವಾರ ನಡೆಯಿತು.
ಕುಶಾಲನಗರ ಬಡಾವಣೆಯ ತಾರುಣ್ಯ ಮಹಿಳಾ ಸಂಘದ ರಾಜಮ್ಮ ಎಂಬ ಮಹಿಳೆ ನಡೆಸುತ್ತಿರುವ ಸರಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಗ್ರಾಹಕರು ತೂಕ ಮಾಡಿಟ್ಟಿದ್ದ ಅಕ್ಕಿ ಹಾಗೂ ತೂಕಕ್ಕೆ ಬಳಸಲಾಗುತ್ತಿದ್ದ ಸೀಲ್ ಇಲ್ಲದ ತೂಕದ ಬಟ್ಟುಗಳನ್ನು ವಶಪಡಿಸಿಕೊಂಡ ಗ್ರಾಹಕರು, ನ್ಯಾಯಬೆಲೆ ಅಂಗಡಿಯನ್ನು ಬಂದ್ ಮಾಡಬೇಕು ಹಾಗೂ ಇಲ್ಲಿನ ಗ್ರಾಹಕರಿಗೆ ಪಡಿತರ ನೀಡಲು ಬದಲಿ ವ್ಯವಸ್ಥೆ ಮಾಡ ಬೇಕು, ಇಲ್ಲಿ ಪಡಿತರ ಪಡೆಯುವ ಗ್ರಾಹಕರಿಗೆ ಪ್ರತಿತಿಂಗಳು ಅನ್ಯಾಯವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೆ ಪ್ರಯೋಜವಾಗಿಲ್ಲ. 27 ಕೆಜಿ ಅಕ್ಕಿ ಎಂದು ಹೇಳಿ ತೋಕದಲ್ಲಿ ಮೋಸ ಮಾಡಿ 23 ಕೆಜಿ ಅಕ್ಕಿ ನೀಡಲಾಗುತ್ತಿದೆ. ಅಕ್ಕಿಯೊಂದಿಗೆ ಸೋಪು, ಅಡಿಗೆ ಎಣ್ಣೆ ಕೊಳ್ಳ ಬೇಕು ಎಂಬ ಕಡ್ಡಾಯ ಮಾಡಿರುವುದರಿಂದಾಗಿ ಬಹುತೇಕ ಗ್ರಾಹಕರು ಪಡಿತರ ಕೊಳ್ಳಲು ಸಾದ್ಯವಾಗುತ್ತಿಲ್ಲ. ಎಂದು ಒತ್ತಾಯಿಸಿದ್ದಲ್ಲದೆ ಒಂದು ಹಂತದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಲಾಯಿತು.
ಉಪ ವಿಭಾಗಧಿಕಾರಿ ಭೇಟಿ: ಸ್ಥಳಕ್ಕಾಗಮಿಸಿದ ಉಪ ವಿಭಾಗಧಿಕಾರಿ ಶ್ರೀವಿದ್ಯಾ ಮಾತನಾಡಿ, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ತಾತ್ಕಲಿಕವಾಗಿ ತನಿಖೆ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರಾದರೂ ತಕ್ಷಣವೇ ಅಂಗಡಿಯ ಬಂದ್ ಮಾಡಬೇಕು ಎಂದು ಪ್ರತಿಭಟನೆ ಮುಂದುವರಿಸಲಾಯಿತು.ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಪಾರ್ವತಿ ಹಾಗೂ ಆಹಾರ ನಿರೀಕ್ಷಕ ರಾಮೇಗೌಡ ಸ್ಥಳಕ್ಕಾಗಮಿಸಿ ಅಂಗಡಿಗೆ ಬೀಗ ಜಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.