ಹಾಸನ

ಶ್ರೀರಾಮಸೇನೆಯಿಂದ ಉಪವಾಸ ಸತ್ಯಾಗ್ರಹ: ಜಿಲ್ಲಾಧ್ಯಕ್ಷ ಎಚ್ಚರಿಕೆ

Published On :

ಕ.ಪ್ರ.ವಾರ್ತೆ ಹಾಸನ ಸೆ. 23
ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿರುವ ತನ್ನ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದು, ಅದನ್ನು ವಾಪಸ್ ಪಡೆಯದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರಂದು ಕೃಷ್ಣ ಅಂಧಮಕ್ಕಳ ಶಾಲೆ ಸಮೀಪ ನಿರ್ಜನ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಬಹಳ ಹೊತ್ತು ಅಸಭ್ಯವಾಗಿ ವರ್ತಿಸುತ್ತಿದ್ದರು. ಆಗ ಆ ಪ್ರೇಮಿಗಳನ್ನು ವಿಚಾರಿಸಿದಾಗ, ಯುವಕನು ಬೇರೆ ಧರ್ಮದವನಾಗಿದ್ದು, ಅವನು ಯುವತಿಯ ಮೊಬೈಲ್‌ಗೆ ಮೆಸೇಜ್ ಮಾಡಿದ್ದ. ನಂತರ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು.
ನಂತರ ಯುವಕ ಶರ್ಟ್ ಹರಿದುಕೊಂಡು ನನ್ನ ಮೇಲೆ ಸುಳ್ಳು ದೂರು ನೀಡಿದ್ದು, ಅದು ಸಂಶಯಾಸ್ಪದವಾಗಿದೆ. ಜಿಲ್ಲಾ ಎಸ್ಪಿ ಇತ್ತೀಚೆಗೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಪೊಲೀಸ್ ಅಧಿಕಾರಿಗಳಿದ್ದಂತೆ. ಯಾವುದೇ ಸಂಶಯಾಸ್ಪದ ವರ್ತನೆಗಳು ಕಂಡು ಬಂದರೆ ಮಾಹಿತಿ ನೀಡುವಂತೆ ತಿಳಿಸಿದ್ದರು ಎಂದು ಹೇಳಿದರು.
ಇತ್ತೀಚೆಗೆ ನಗರದ ರಿಂಗ್ ರಸ್ತೆ, ಎಂ.ಜಿ.ರಸ್ತೆ, ಸ್ಲೇಟರ್‌ಹಾಲ್, ಜಿಲ್ಲಾ ಕ್ರೀಡಾಂಗಣ ಹಾಗೂ ಇತರೆ ಕಡೆಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಂತಹ ಚಟುವಟಿಕೆ ನಮ್ಮ ಗಮನಕ್ಕೆ ಬಂದಾಗ ಅದನ್ನು ಪೊಲೀಸರ ಗಮನಕ್ಕೆ ತಂದಿದ್ದರೂ ನಗರ ಬಡಾವಣೆ ಠಾಣೆಯಲ್ಲಿ ನಮ್ಮ ಮೇಲೆಯೇ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಯಾವುದೇ ತಪ್ಪು ಮಾಡದ ನಮ್ಮ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಉಪಾಧ್ಯಕ್ಷ ಕುಮಾರ್, ಹಿಂದುಪರ ಸಂಘಟನೆ ಮುಖಂಡ ರಮೇಶ್‌ನಾಯಕ್ ಇದ್ದರು.

ಶಿಬಿರಾರ್ಥಿಗಳಿಂದ ಹೊಳಲು ದೇವಾಲಯ ಸ್ವಚ್ಛತೆ
ಹಾಸನ: ಜಿಲ್ಲೆಯ ಹೊಳಲು ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾಮಟ್ಟದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು 10-13 ವರ್ಷಗಳಿಂದ ಮೂಲೆಗುಂಪಾಗಿದ್ದ 13ನೇ ಶತಮಾನದ ಹೊಯ್ಸಳ ಶ್ರೀ ಚೆನ್ನಕೇಶವ ದೇವಾಲಯವನ್ನು  ಶುಚಿಗೊಳಿಸಿದರು. ದೇವಾಲಯ ಸುತ್ತ ಮತ್ತು ದೇಗುಲ ಮೇಲೆ ಬೆಳೆದಿದ್ದ ಗಿಡಗಳನ್ನು ಕಿತ್ತು ಸ್ವಚ್ಛಗೊಳಿಸಿ ಭಕ್ತಾದಿಗಳು ಆರಾಮವಾಗಿ ಒಳಹೊಗಿ ಪೂಜೆ ಮಾಡುವ ರೀತಿ ಶುಚಿಗೊಳಿಸಲಾಯಿತು.  ಸ್ಥಳಕ್ಕೆ ಆಗಮಿಸಿದ್ದ ಹಾಸನ ತಾಲೂಕು ತಹಸೀಲ್ದಾರ್ ಮಂಜುನಾಥ್ ಅವರು ವಿದ್ಯಾರ್ಥಿಗಳ ಶ್ರಮದಾನ ಶ್ಲಾಘಿಸಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸರ್ಕಾರದಿಂದ ಸಂಪೂರ್ಣ ಸಹಕಾರ ಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಶ್ರಮದಾನದಲ್ಲಿ ಶಿಬಿರದ ಸಂಯೋಜಕ ಸಿ.ಎಲ್. ಶಿವಕುಮಾರ್, ಸಹ ಶಿಬಿರಾಧಿಕಾರಿ ಪ್ರೊ. ಕೃಷ್ಣಪ್ಪ,  ಎಚ್.ಎಸ್. ನಿಂಗಪ್ಪ, ಈ.ಮಧುಸೂದನ್, ಮುತ್ತಯ್ಯ  ಹಾಗೂ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.