ಹಾಸನ

ಸಹಕಾರ ಸಂಘದ ಸರ್ವ ಸದಸ್ಯರ ಸಭೆ

Published On :

ಕ.ಪ್ರ.ವಾರ್ತೆ ಹಾಸನ ಸೆ. 23
ನಗರ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಬ್ಯಾಂಕಿನ ಅಧ್ಯಕ್ಷ ಎಚ್.ಆರ್.ಎನ್. ಕಂಠಿ ಅಧ್ಯಕ್ಷತೆಯಲ್ಲಿ ನಡೆದು 2012-13ರ ಸಾಲಿನ ಆಡಳಿತ ವರದಿಯ ಬಗ್ಗೆ ಚರ್ಚೆ ನಡೆಸಲಾಯಿತು. ಮೃತರಿಗೆ ನಗರ ವಿವಿಧೋದ್ದೇಶ ಸಹಕಾರ ಸಂಘದಿಂದ 2 ಸಾವಿರ ರು. ನೀಡಲಾಗುತ್ತಿತ್ತು. ಸದಸ್ಯರ ಒಪ್ಪಿಗೆಯಂತೆ 3 ಸಾವಿರ ರು.ಗೆ ಏರಿಸುವ ನಿರ್ಧಾರವನ್ನು ಕಳುಹಿಸುವುದಾಗಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಎಂ. ಮಲ್ಲೇಶಗೌಡ  ತಿಳಿಸಿದರು.
2014 ರಲ್ಲಿ ಬ್ಯಾಂಕಿನ ಚುನಾವಣೆ ನಡೆಯಲಿದ್ದು, ಯಾವ ಸದಸ್ಯರು 500 ರು ಕಟ್ಟಿದ್ದಾರೆ ಅವರು ಉಳಿದ ಹಣವನ್ನು ಸಂದಾಯ ಮಾಡುವಂತೆ ಹೇಳಿದರು.
ಈಗಾಗಲೇ ಈ ಬ್ಯಾಂಕಿನಲ್ಲಿ 300 ಜನ ಸದಸ್ಯರು   ಇದ್ದಾರೆ. ಇದೇ ಕಟ್ಟಡದ ಮೇಲ್ಭಾಗದಲ್ಲಿ ಮತ್ತೊಂದು ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಬ್ಯಾಂಕಿನಿಂದ ಬಂದಂತಹ ಲಾಭಂಶವನ್ನು ಯಾವ ಯಾವ ನಿಧಿಗಳಿಗೆ ಕಳುಹಿಸಬೇಕು ಎಂಬುದರ ವಿಚಾರವಾಗಿ ಸದಸ್ಯರ ಜೊತೆ ಚರ್ಚಿಸಿದರು. ಸಮಗ್ರ ಬೈಲ ತಿದ್ದುಪಡಿಯನ್ನು ಮಾಡುವ ಬಗ್ಗೆ ತಿಳಿಸಿದರು.
 ನಿರ್ದೇಶಕ ಎಚ್.ಪಿ. ಅರುಣಕುಮಾರ್, ಎಚ್.ಸಿ. ಮಂಜುನಾಥ್, ಕೆ. ಶೇಷಾದ್ರಿ, ಎಮ್.ಜಿ. ರತ್ನಮ್ಮ, ಸುಜೀತ್ ಇತರರು ಇದ್ದರು. ಸಭೆಯ ಮೊದಲು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.