ಹಾಸನ

ಸಹಕಾರ ಸಂಘದ ನೋಂದಣಿ ರದ್ಧತಿ

Published On :

ಹಾಸನ: ಏಷ್ಯನ್ ಡ್ರೆಸ್ಸೆಸ್ ಅಂಡ್ ಅಲೈಡ್ ಪ್ರಾಡಕ್ಟ್  ಸಹಕಾರ ಸಂಘ ನಿ. ಹಾಸನ ಈ ಸಂಘವು ಸಮಾಪನೆಯಾಗಿದ್ದು, ಜಿಲ್ಲಾ ಸಹಕಾರ ಕೇಂದ್ರ ಸಹಕಾರ ಬ್ಯಾಂಕ್ ನಿ. ಹಾಸನ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಸಹಕಾರ ಬ್ಯಾಂಕ್ ನಿ. ಬೆಂಗಳೂರು ಈ ಬ್ಯಾಂಕ್‌ಗಳಲ್ಲಿ ಸಾಲ ಇದ್ದು, ಸಂಘದಲ್ಲಿ ಯಾವುದೇ ರಹಾ ಇಲ್ಲದಿರುವುದರಿಂದ ಸಾಲ ಮನ್ನಾ ಮಾಡಲು ಸದರಿ ಬ್ಯಾಂಕುಗಳಿಗೆ ಪತ್ರ ವ್ಯವಹಾರ ನಡೆಸಲಾಗಿದೆ.  ಸಂಘದ ಇರುವಿಕೆಯಿಂದ ಯಾರಿಗೂ ಉಪಯೋಗವಾಗದಿರುವುದರಿಂದ ಸಂಘದ ರದ್ಧತಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಈ ಬಗ್ಗೆ ಯಾರಿಗಾದರೂ ಆಕ್ಷೇಪಣೆ ಇದ್ದಲ್ಲಿ 7 ದಿನಗಳೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು  ಏಷ್ಯನ್ ಡ್ರೆಸ್ಸೆಸ್ ಅಂಡ್ ಅಲೈಡ್ ಪ್ರಾಡಕ್ಟ್ಸ್‌ನ ಸಮಾಪನಾಧಿಕಾರಿ ಎನ್. ಮಂಜುನಾಥ ಕೋರಿದ್ದಾರೆ.

ಅರ್ಜಿ ಆಹ್ವಾನ
ಹಾಸನ: ತಾಲೂಕು ವ್ಯಾಪ್ತಿಗೆ ಬರುವ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಕಪುರ ಕಾಲೋನಿ, ಹುಲ್ಲೇನಹಳ್ಳಿ, ಎಚ್.ಹಲಸಿನಹಳ್ಳಿ, ಜೋಡಿಕೃಷ್ಣಾಪುರ, ಕಟ್ಟಾಯದಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ  ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಆಯ್ಕೆ ಮಾಡಬೇಕಾಗಿದ್ದು, ಅದಕ್ಕಾಗಿ  ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಸಹಾಯಕಿಯರನ್ನು ಆಯ್ಕೆಗಾಗಿ ಅರ್ಜಿ ಕರೆಯಲಾಗಿದೆ. ಅದೇ ಗ್ರಾಮದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 15ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಬಹುದು.  ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ. ಆಯ್ಕೆಯ ಮಾನದಂಡಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಸನ ದೂ 08172-267223 ಸಂಪರ್ಕಿಸಬಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.