ಹಾಸನ

ಜಲಾಶಯಗಳ ನೀರಿನ ಮಟ್ಟ

Published On :

ಹಾಸನ: ಹೇಮಾವತಿ ಜಲಾಶಯಕ್ಕೆ ಮಂಗಳವಾರ 4145 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ಮಟ್ಟ 2921.78 ಅಡಿ, 36.890 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 200 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 75 ಕ್ಯುಸೆಕ್, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3167.71 ಅಡಿ, ಒಳ ಹರಿವು 50 ಕ್ಯುಸೆಕ್, ಹೊರ ಹರಿವು ನಾಲೆಗೆ 80 ಕ್ಯುಸೆಕ್ ಒಟ್ಟು   1.412 ಟಿಎಂಸಿ ಸಂಗ್ರಹವಾಗಿದೆ.
ಮಳೆ ವಿವರ: ಸಕಲೇಶಪುರದಲ್ಲಿ 1.6, ಶುಕ್ರವಾರಸಂತೆ 7, ಮಾರನಹಳ್ಳಿ 3.4, ಹೊಸೂರು 2, ಹೆತ್ತೂರು 3.4 ಮಿ.ಮೀ. ಮಳೆಯಾಗಿದೆ.

ಹೆಬ್ಬಾಳು ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗೆ ರು. 1.85 ಲಕ್ಷ ನಿವ್ವಳ ಲಾಭ
ಬೇಲೂರು: ಹೆಬ್ಬಾಳು ಪ್ರಾಥಮಿಕ ಸಹಕಾರಿ ಬ್ಯಾಂಕ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ವಹಿವಾಟು  ನಿರ್ವಹಿಸಲು ಕಂಪ್ಯೂಟರ್ ಅಳವಡಿಸಲಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಚ್.ಜಿ.ಭುವನೇಶ್ ತಿಳಿಸಿದರು.
ಸಹಕಾರಿ ಸಂಘದ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು  ಪ್ರಸಕ್ತ ವರ್ಷ ಬ್ಯಾಂಕ್ 1.85 ಲಕ್ಷ ರು. ನಿವ್ವಳ ಲಾಭ ಹೊಂದಿದೆ. ಸುಮಾರು 76  ಲಕ್ಷ ರೈತರಿಗೆ ಬೆಳೆಸಾಲ ಹಾಗೂ ಚಿನ್ನಾಭರಣಗಳ ಮೇಲೆ ಸಾಲಗಳನ್ನು ನೀಡುತ್ತಾ ಬಂದಿರುವ ಬ್ಯಾಂಕ್ ಜಿಲ್ಲೆಯಲ್ಲಿ ಉತ್ತಮ ಸಹಕಾರಿ  ಬ್ಯಾಂಕ್ ಎಂದು ಹೆಸರು ಪಡೆದಿದೆ.ಮುಂದಿನ ದಿನಗಳಲ್ಲಿ ಷೇರುದಾರರ ಸಂಖ್ಯೆ ಹೆಚ್ಚಳ ಮಾಡುವ ಗುರಿ ಮತ್ತು ನಾನಾ ರೀತಿಯ ಸಾಲ ಸೌಲಭ್ಯಗಳನ್ನು ನೀಡುವ ಯೋಜನೆ ತರಲಾಗುತ್ತದೆ. ಸಹಕಾರಿ ಬ್ಯಾಂಕ್‌ಗಳ ಬೆಳವಣಿಗೆಗೆ ಜನರು ಠೇವಣೆಯನ್ನು ಬ್ಯಾಂಕ್‌ನಲ್ಲಿ ಸಂಗ್ರಹ ಮಾಡುವಂತೆ ಮಾನವಿ ಮಾಡಿದರಲ್ಲದೆ ಕಳೆದ ಸಾಲಿನಲ್ಲಿ ಸರ್ಕಾರದ ಸಾಲ ಮನ್ನಾ ಯೋಜನೆಯಿಂದ 277 ಫಲಾನುಭವಿಗಳಿಗೆ 60 ಲಕ್ಷ ರು. ಲಾಭದಾಯಕವಾಗಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಘ್ನೇಶಯ್ಯ ಮಾತನಾಡಿದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಕೆ.ಮೋಹನ್ ಮಾತನಾಡಿ, ಪ್ರಸಕ್ತ ವರ್ಷ ಬ್ಯಾಂಕ್ 4 ಕೋಟಿಗೂ ಹೆಚ್ಚು ವಹಿವಾಟು ನಡೆಸಿ 1.85 ಲಕ್ಷ ರು. ಲಾಭ ಗಳಿಸಲು ಸಾಧ್ಯವಾಗಿದೆ ಎಂದರು.ಎಚ್.ಬಿ.ಶಿವಕುಮಾರ್, ಮಲ್ಲಿಕಾರ್ಜುನ್, ಶಿವಕುಮಾರ್, ಕಮಲಮ್ಮ,ಧರ್ಮಪ್ಪ, ಕೃಷ್ಣೇಗೌಡ, ಮಳಲಿದಾಸಯ್ಯ ಇದ್ದರು.

ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಆರೋಗ್ಯ  ತಪಾಸಣೆ ಶಿಬಿರ
ಹಾಸನ: ಲಯನ್ಸ್ ಸೇವಾ ಸಂಸ್ಥೆ, ಜಿಲ್ಲಾ ಪೊಲೀಸ್ ಇಲಾಖೆ, ವಾತ್ಸಲ್ಯ ಆಸ್ಪತ್ರೆ, ಸಿಎಸ್‌ಐ ಮಿಷನ್ ಆಸ್ಪತ್ರೆ  ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ  ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು  ಸಿಬ್ಬಂದಿ ವರ್ಗದವರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಶಿಬಿರ ಉದ್ಘಾಟಿಸಿದರು. ಹೆಚ್ಚುವರಿ ಎಸ್ಪಿ ಜೆ.ಕೆ.ರಶ್ಮಿ,  ಜಿಲ್ಲಾ ಲಯನ್ಸ್ ಉಪ ರಾಜ್ಯಪಾಲ ಎಚ್.ಎಸ್.ಮಂಜುನಾಥಮೂರ್ತಿ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್‌ಕುಮಾರ್, ಕಾರ್ಯದರ್ಶಿ  ಬಿ.ಸೋಮೇಶ್, ಖಜಾಂಚಿ ಆನಂದ್, ಪಿಆರ್‌ಓ ಚಂದ್ರೇಗೌಡ, ಲಯನ್ಸ್ ಸದಸ್ಯರು ಮತ್ತು ಪೊಲೀಸ್ ಅಧಿಕಾರಿಗಳು ಇದ್ದರು. ಸುಮಾರು 350 ಪೊಲೀಸರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಬಡವರ ಹಸಿವು ನೀಗಿಸಿದ ಆಹಾರ ಭದ್ರತೆ ಕಾಯ್ದೆ  
ಬೇಲೂರು: ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸಿದ್ದು, ದೇಶದ ಬಹುತೇಕ ಬಡವರು ಹಸಿವಿನಿಂದ ಬಳಲುವುದು ತಪ್ಪಿದಂತಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ತಮ್ಮಣ್ಣಗೌಡ ಹೇಳಿದರು. ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತಾಲೂಕು ನ್ಯಾಯ ಬೆಲೆ ಅಂಗಡಿ ಜಾಗೃತ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಆಹಾರ ವಿತರಣೆ ದೇಶದ ಬಹು ದೊಡ್ಡ ವ್ಯವಸ್ಥೆಯಾಗಿದ್ದು, ಇದು ಸಮರ್ಪಕವಾಗಿ ನಡೆಯಬೇಕಾದರೆ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಇದರ ಬಗ್ಗೆ ಗಮನ ಹರಿಸಿದಾಗ ಈ ಯೋಜನೆ ಇನ್ನೂ ಉತ್ತಮ ಸಹಕಾರಿಯಾಗುತ್ತದೆ ಎಂದರು. ಶಿರಸ್ತೇದಾರ್ ನಾಗರಾಜು, ಅರೇಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.