ಹಾಸನ

ವಿಧಾನಸಭೆ ಮತದಾರರ ನೋಂದಣಾಧಿಕಾರಿ ನೇಮಕ

Published On :

ಕನ್ನಡಪ್ರಭ ವಾರ್ತೆ ಹಾಸನ ಸೆ. 27
ಶ್ರವಣಬೆಳಗೊಳ, ಅರಸೀಕೆರೆ, ಹಾಸನ ಮತ್ತು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಗಳಿಗೆ ಮತದಾರರ ನೋಂದಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಬಿ. ಶರತ್ ಅವರನ್ನು ನೇಮಿಸಿದ್ದು, ಹಾಸನ ವೈದ್ಯಕೀಯ ಮಹಾ ವಿದ್ಯಾಲಯ ಎದುರಿಗಿರುವ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರನ್ನು ದೂರವಾಣಿ ಸಂಖ್ಯೆ 08172-568403, ಮೊಬೈಲ್ 9741811788, ಫ್ಯಾಕ್ಸ್ 08172-265349 ಈ ಮೂಲಕ ಸಂಪರ್ಕಿಸಬಹುದು.
 ಸಹಾಯಕ ಚುನಾವಣಾಧಿಕಾರಿಗಳಾಗಿ ಶ್ರವಣಬೆಳಗೊಳ ಕ್ಷೇತ್ರಕ್ಕೆ ಚನ್ನರಾಯಪಟ್ಟಣ ತಹಸೀಲ್ದಾರ್ ನಟರಾಜ್, ದೂರವಾಣಿ ಕಚೇರಿ 08176-252235, ಮೊಬೈಲ್ 9448221034, ಅರಸೀಕೆರೆ ಕ್ಷೇತ್ರಕ್ಕೆ ಅರಸೀಕೆರೆ ತಹಸೀಲ್ದಾರ್ ಕೇಶವಮೂರ್ತಿ ದೂರವಾಣಿ ಕಚೇರಿ 08174, ಮೊಬೈಲ್ 9844094497.
  ಹಾಸನ ಕ್ಷೇತ್ರಕ್ಕೆ ಹಾಸನ ತಾಲೂಕು ತಹಸೀಲ್ದಾರ್ ಮಂಜುನಾಥ್, ದೂರವಾಣಿ ಸಂಖ್ಯೆ 08172-268395, ಮೊಬೈಲ್ 944934358, ಹೊಳೆನರಸೀಪುರ ಕ್ಷೇತ್ರಕ್ಕೆ ಹೊಳೆನರಸೀಪುರ ತಾಲೂಕು ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ, ದೂರವಾಣಿ ಸಂಖ್ಯೆ 08175-2721111, ಮೊಬೈಲ್ 9448868443ಯವರನ್ನು  ನೇಮಿಸಲಾಗಿದೆ.
 ಇದೇ ರೀತಿ ಸಕಲೇಶಪುರ  ಉಪವಿಭಾಗದ ತಾಲೂಕುಗಳಲ್ಲಿ ಮತದಾರರ  ನೋಂದಣಿ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ  ಶ್ರೀವಿದ್ಯಾ ಅವರನ್ನು ನೇಮಿಸಲಾಗಿದೆ. ಸಂಪರ್ಕಿಸಬಹುದಾದ ದೂರವಾಣಿ 08173-244003, ಮೊಬೈಲ್ 8197419245.
 ಈ ವಿಭಾಗದ ಬೇಲೂರು ತಾಲೂಕಿನ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ  ಬೇಲೂರು ತಾಲೂಕು ತಹಸೀಲ್ದಾರ್ ಪಿ. ಈಶ್ವರಪ್ಪ, ದೂರವಾಣಿ 08177-222234, ಮೊಬೈಲ್ 9916821123. ಅರಕಲಗೂಡು ತಾಲೂಕಿಗೆ ತಹಸೀಲ್ದಾರ್ ಪಿ.ಈಶ್ವರಪ್ಪ ದೂರವಾಣಿ 08175-220246, ಸಕಲೇಶಪುರ ತಾಲೂಕಿಗೆ ತಹಸೀಲ್ದಾರ್ 08173-244004, ಮೊಬೈಲ್ 9035824649, ಆಲೂರು ತಾಲೂಕಿಗೆ ತಹಸೀಲ್ದಾರ್ ರವಿಚಂದ್ರನಾಯಕ್, ದೂರವಾಣಿ 08170-218222, ಮೊಬೈಲ್ 9916821123 ಸಂಪರ್ಕಿಸಬಹುದು. ಪಟ್ಟಿಯಲ್ಲಿ ಹೆಸರಿಲ್ಲದವರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸಬೇಕೆಂದು ಜಿಲ್ಲಾಧಿಕಾರಿ ಕೋರಿದ್ದಾರೆ. ಮತದಾರರ ಮಿತ್ರ
 ಗ್ಟಡಿಜ್ಠ ಋಛ್ಛ್ಝಟ್ಝಡಿಛಡ್ಝ್ಟಿಟಿ ್ಛಜಟಿಡ್ಠಿಜ (ಗಋಈ)  ಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿದ್ದು, ಈ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ನೌಕರರ ಹೆಸರು ಹಾಗೂ ಅವರುಗಳ ದೂರವಾಣಿ ಸಂಖ್ಯೆ ವಿವರ ಕೆಳಕಂಡಂತಿದೆ. ಮತದಾರರ ಮಿತ್ರ  ಉಊಖಿಆಐಔಖ ಕಋ ಗಕಖಊಿಖ ಋಆಈಐಔಐಖಿಆಖಿಐಕಃ ಈಊಃಖಿಖಊಖ
 193- ಶ್ರವಣಬೆಳಗೊಳ  ವಿಧಾನಸಭಾ ಕ್ಷೇತ್ರದ ಮತದಾರರಿಗೆ  ಮತದಾರರ ಅನುಕೂಲ ಕೇಂದ್ರವನ್ನು  ಮಿನಿ ವಿಧಾನಸೌಧ, ಚನ್ನರಾಯಪಟ್ಟಣ-573116ದಲ್ಲಿ  ತೆರೆಯಲಾಗಿದ್ದು ಇದರಲ್ಲಿ ತಾಲೂಕು ಕಚೇರಿ ಶಿರಸ್ತೇದಾರ್ ಅನಂತಪದ್ಮನಾಭ ಉಡುಪ ಕರ್ತವ್ಯ ನಿರ್ವಹಿಸುತ್ತಾರೆ. ದೂರವಾಣಿ 08176-252235, ಮೊಬೈಲ್ 9449066771.  
 194- ಅರಸೀಕೆರೆ ವಿಧಾನಸಭಾ  ಕ್ಷೇತ್ರದ ಮತದಾರರಿಗೆ ಮತದಾರರ  ಅನುಕೂಲ ಕೇಂದ್ರವನ್ನು ಮಿನಿ ವಿಧಾನಸೌಧ, ಅರಸೀಕೆರೆ-573103ದಲ್ಲಿ  ತೆರೆಯಲಾಗಿದ್ದು ಇದರಲ್ಲಿ ತಾಲೂಕು ಕಚೇರಿಯ ಶಿರಸ್ತೇದಾರ್ ಪೆರುಮಾಳ್ ಕರ್ತವ್ಯ ನಿರ್ವಹಿಸುತ್ತಾರೆ. ದೂರವಾಣಿ 08174-234879, ಮೊಬೈಲ್ 9242470955.
 195-ಬೇಲೂರು ವಿಧಾನಸಭಾ  ಕ್ಷೇತ್ರದ ಮತದಾರರಿಗೆ ಮತದಾರರ  ಅನುಕೂಲ ಕೇಂದ್ರವನ್ನು ಮಿನಿ ವಿಧಾನಸೌಧ,  ಬೇಲೂರು-573115ದಲ್ಲಿ  ತೆರೆಯಲಾಗಿದ್ದು ಇದರಲ್ಲಿ ತಾಲೂಕು ಕಚೇರಿಯ ಶಿರಸ್ತೇದಾರ್‌ಶಿವಯ್ಯ ಕರ್ತವ್ಯ ನಿರ್ವಹಿಸುತ್ತಾರೆ.
ದೂರವಾಣಿ 08177-222234, ಮೊಬೈಲ್ 7259378911.
 196-ಹಾಸನ  ಕ್ಷೇತ್ರದ ಮತದಾರರಿಗೆ ಮತದಾರರ  ಅನುಕೂಲ ಕೇಂದ್ರವನ್ನು ಹಾಸನ-573201ದ  ತಾಲೂಕು ಕಚೇರಿಯಲ್ಲಿ  ತೆರೆಯಲಾಗಿದ್ದು ಶಿರಸ್ತೇದಾರ್ ರಾಜು ಕರ್ತವ್ಯ ನಿರ್ವಹಿಸುತ್ತಾರೆ. ದೂರವಾಣಿ 08172-260395, ಮೊಬೈಲ್ 9449809931.
 197-ಹೊಳೆನರಸೀಪುರ  ವಿಧಾನಸಭಾ ಕ್ಷೇತ್ರದ ಮತದಾರರಿಗೆ  ಮತದಾರರ ಅನುಕೂಲ ಕೇಂದ್ರವನ್ನು  ಮಿನಿ ವಿಧಾನಸೌಧ, ಹೊಳೆನರಸೀಪುರ-573211ದಲ್ಲಿ  ತೆರೆಯಲಾಗಿದ್ದು ಇದರಲ್ಲಿ ತಾಲೂಕು ಕಚೇರಿಯ ಶಿರಸ್ತೇದಾರ್ ಮೋಹನ್ ಕರ್ತವ್ಯ ನಿರ್ವಹಿಸುತ್ತಾರೆ.  ದೂರವಾಣಿ 08172-272111, ಮೊಬೈಲ್ 94816266185.
 198-ಅರಕಲಗೂಡು ಕ್ಷೇತ್ರದ  ಮತದಾರರಿಗೆ ಮತದಾರರ ಅನುಕೂಲ  ಕೇಂದ್ರವನ್ನು ಮಿನಿ ವಿಧಾನಸೌಧ, ಅರಕಲಗೂಡು-573102ದಲ್ಲಿ  ತೆರೆಯಲಾಗಿದ್ದು ಇದರಲ್ಲಿ ತಾಲೂಕು ಕಚೇರಿಯ ಶಿರಸ್ತೇದಾರ್ ರಂಗರಾಜ್ ಕರ್ತವ್ಯ ನಿರ್ವಹಿಸುತ್ತಾರೆ. ದೂರವಾಣಿ 08175-220246, ಮೊಬೈಲ್ 9448758979.
 199-ಸಕಲೇಶಪುರ  ವಿಧಾನಸಭಾ ಕ್ಷೇತ್ರದ ಮತದಾರರಿಗೆ  ಮತದಾರರ ಅನುಕೂಲ ಕೇಂದ್ರವನ್ನು  ಸಕಲೇಶಪುರ ತಾಲೂಕು ಕಚೇರಿ, ಸಕಲೇಶಪುರ-573134ದಲ್ಲಿ  ತೆರೆಯಲಾಗಿದ್ದು ತಾಲೂಕು ಕಚೇರಿಯ ಶಿರಸ್ತೇದಾರ್ ರಮೇಶ್ ಕರ್ತವ್ಯ ನಿರ್ವಹಿಸುತ್ತಾರೆ.  ದೂರವಾಣಿ 08173-244004, ಮೊಬೈಲ್ 9448940879 ಆಗಿದೆ.
 ಆಲೂರು  ತಾಲೂಕು ಕಚೇರಿ, ಆಲೂರು-573713ದಲ್ಲಿ  ತೆರೆಯಲಾಗಿದ್ದು ತಾಲೂಕು ಕಚೇರಿಯ ಶಿರಸ್ತೇದಾರ್ ಓ.ರಮೇಶ್ ಕರ್ತವ್ಯ ನಿರ್ವಹಿಸುತ್ತಾರೆ.
  ಸಂಪರ್ಕಿಸಬೇಕಾದ ದೂರವಾಣಿ 08170-218222, ಮೊಬೈಲ್ 8971346101.

ಮತದಾರರ ಕರಡು ಪಟ್ಟಿ ಪ್ರಕಟ
ಜಿಲ್ಲೆಗೆ ಸಂಬಂಧಿಸಿದ ಶ್ರವಣಬೆಳಗೊಳ,ಅರಸೀಕೆರೆ,ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳ ಮತದಾನ ಕೇಂದ್ರಗಳ ಮತದಾರರ ಕರಡು ಪಟ್ಟಿಯನ್ನು ನಿಗದಿಪಡಿಸಿದ ಪ್ರಪತ್ರ -3ರಲ್ಲಿ (ಪ್ರಜಾ ಪ್ರಾತಿನಿಧ್ಯ ಕಾಯಿದೆ- 1951 ರ ಸೆಕ್ಷನ್ 25 ರನ್ವಯ) ಈ ಕೂಡ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಚುರ ಪಡಿಸಲಾಗಿದೆ.
  ಈ ರೀತಿ ಪ್ರಚುರಪಡಿಸಲಾದ ಕರಡು ಮತದಾನ  ಕೇಂದ್ರಗಳ ಪಟ್ಟಿಯ ಕುರಿತಂತೆ ಯಾವುದಾದರೂ ಆಕ್ಷೇಪಣೆಗಳು ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಅದನ್ನು ಲಿಖಿತ ಅಥವಾ ಖುದ್ದಾಗಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳು, ಉಪ ವಿಭಾಗಾಧಿಕಾರಿ ಕಚೇರಿಗಳಲ್ಲಿ ಕಚೇರಿ ವೇಳೆಯಲ್ಲಿ  ಸೆ. 30ರ ಸಂಜೆ  5-30 ರ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ತದನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ  ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ:  ಚುನಾವಣಾ ಆಯೋಗವು  ಜ.1ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕೈಗೊಂಡಿದ್ದು, ವೇಳಾಪಟ್ಟಿ ಹೀಗಿದೆ.
ಅ.30 ರಂದು  ಮತದಾರರ  ಪಟ್ಟಿಗಳ ಕರಡು ಪ್ರಕಟಣೆ, ಅಂದಿನಿಂದ ನ. 29 ರವರೆಗೆ   ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ, ನ.5 ರಿಂದ  ನ.8 ರವರೆಗೆ  ಮತದಾರರ ಪಟ್ಟಿಗಳನ್ನು ವಾರ್ಡ್, ಗ್ರಾಮಸಭೆಗಳಲ್ಲಿ ಓದುವುದು,  ನ.2, ನ.10 ಮತ್ತು ನ.17 ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಪ್ರತಿನಿಧಿಗಳೊಂದಿಗೆ ಹಕ್ಕು, ಆಕ್ಷೇಪಣೆ, ಸ್ವೀಕಾರ ವಿಶೇಷ ಅಭಿಯಾನದ ದಿನಗಳು ಹಾಗೂ  ಡಿ.21 ರಿಂದ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮತ್ತು   ಜ.6 ರಂದು  ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆ ಮಾಡಲಾಗುವುದು.
ಜ.1 ಕ್ಕೆ  18 ವರ್ಷ ತುಂಬುವ, ತಹಲ್‌ವರೆವಿಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರದೇ ಇರುವ ಮತದಾರರು ನಮೂನೆ-6ನ್ನು ಒಂದು ಪಾಸ್‌ಪೋರ್ಟ್ ಅಳತೆಯ  ಭಾವಚಿತ್ರಗಳೊಂದಿಗೆ, ಜನನ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸುವುದು.
 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸ್ಥಳಾಂತರವಾಗಿದ್ದರೆ, ನಮೂನೆ-8ಎ ನ್ನು ಭರ್ತಿ ಮಾಡಿ ದಾಖಲೆಗಳೊಂದಿಗೆ ನಿರ್ಧಿಷ್ಠಾಧಿಕಾರಿಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತಾಲೂಕು ಕಚೇರಿಗೆ ಉಪ ವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ.
 ಆನ್‌ಲೈನ್ ಮುಖೇನ eci.nic.in  / citizen services / login as citizen / httpzzzceokarnataka.kar.nic.in / httpzzzvoterreg.kar.nic.in  ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.