ಹಾನುಬಾಳುವಿನಲ್ಲಿ ಕಾಂಗ್ರೆಸ್ ಸಭೆ
ಸಕಲೇಶಪುರ: ಕಾಂಗ್ರೆಸ್ನ್ನು ಬಲಪಡಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನು ಹಾನುಬಾಳು ಗ್ರಾಮದಲ್ಲಿ ಕರೆಯಲಾಗಿತ್ತು. ರಾಜೀವ್ಗಾಂಧಿ ಘಟಕದ ಅಧ್ಯಕ್ಷ ಹಾನುಬಾಳ್ ಭಾಸ್ಕರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದು, ಪಕ್ಷದಲ್ಲಿನ ಒಳ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪಕ್ಷವನ್ನು ಬಲಪಡಿಸಲು ನಿರ್ಣಯಿಸಲಾಯಿತು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಉನ್ನತ ಸ್ಥಾನ ಮಾನ ನೀಡಲಾಗುತ್ತಿದೆ. ಈಚೆಗೆ ಪಕ್ಷ ಸೇರಿದವರಿಗೆ ಮಣೆಹಾಕದೆ ಕೆಲಕಾಲ ಪಕ್ಷಕ್ಕೆ ಶ್ರಮಿಸಿದ ಮೆಲೆ ಪಕ್ಷದಲ್ಲಿ ಸ್ಥಾನ ಮಾನ ನೀಡಲಿ ಎಂದು ಸಲಹೆ ನೀಡಿದರು.
ಪಕ್ಷದಲ್ಲಿ ಗುಂಪುಗಾರಿಕೆ ಮಾಡು ವರನ್ನು ಪ್ರೋತ್ಸಾಹಿಸಬಾರದು, ಜಿಲ್ಲಾ ಮಟ್ಟದಲ್ಲಿ ಕುಮ್ಮಕ್ಕು ನೀಡುವುದು ನಿಲ್ಲಬೇಕು. ಪಕ್ಷದ ಆಂತರಿಕ ಕಲ ಗಳಿಂದ ಬೇಸತ್ತು ಮನೆಯಲ್ಲಿ ಮೌನಕ್ಕೆ ಶರಣಾಗಿರುವ ಕಾಂಗ್ರೆಸ್ಮುಖಂಡರ ನಿವಾಸಕ್ಕೆ ತೆರಳಿ ಮನಮೊಲಿಸಿ ಪಕ್ಷಕ್ಕೆ ಕರೆತರುವ ಕೆಲಸವಾಗಬೇಕು.
ಜಿಲ್ಲೆಯಲ್ಲಿ ಜೆಡಿಎಸ್ ವಿರುದ್ಧ ಪಕ್ಷವನ್ನು ಗಟ್ಟಿ ಗೊಳಿಸಲು ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕು. ಜಿಲ್ಲೆಯ ಶಾಸಕ ಎ. ಮಂಜು, ರುದ್ರೇಶಗೌಡ, ಜಿಲ್ಲಾ ಮುಖಂಡರು, ರಾಜ್ಯ ವೀಕ್ಷಕರ ಸಮ್ಮುಖದಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಸುವುದು, ಕಾರ್ಯಕರ್ತರ ಹಾಗೂ ತಾಲೂಕಿನ ಸಮಸ್ಯೆ ಗಳಿಗೆ ಪರಿಹಾರ ಹುಡುಕುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಎಚ್.ಬಿ. ಕಾಂತರಾಜ್, ಕೆ.ಬಿ. ಚಂದ್ರು, ಸದಾಶಿವ ಬಂಡಾರಿ, ರಾಜೇಗೌಡ, ಬಿ.ಎ. ರೆಹಮತ್ ಉಲ್ಲಾ, ಡಿ ಸಿ ಸಣ್ಣಸಾಮಿ, ಮಸ್ತಾರೆ ಲೋಕೇಶ್, ಅರುಣ್, ಮಾಗೇರಿ ರಾಜು, ತುಳಸಿ ಪ್ರಸಾದ್, ಕೌಸಲ್ಯ, ನಿರ್ಮಲಾ, ಶಬ್ಬೀರ್ಖಾನ್, ಸಯ್ಯದ್ಮಪೀಝ್.ಬಿ ಕೆ ಮಹೇಶ್, ಭರತ್ ಡಿ. ಸೋಮಪ್ಪ, ಸುಂದ್ರಮ್ಮ ಪುರಸಭಾ ಸದಸ್ಯರು, ತಾಪಂ ಹಾಗೂ ಗ್ರಾಪಂ ಸದಸ್ಯರು, ಮುಖಂಡರು ಭಾಗವಹಿಸಿದ್ದರು.
ಪತ್ನಿ ಹತ್ಯೆ ಮಾಡಿದ ಪತಿಗೆ ಜೀವಾವಧಿ
ಹಾಸನ: ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪತ್ನಿ ಕೊಲೆ ಮಾಡಿದ್ದ ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ನೆಲಕ್ಕಿಹಳ್ಳಿ ಗ್ರಾಮದ ತಿಮ್ಮೇಗೌಡ ಎಂಬಾತನಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿ ತಿಮ್ಮೇಗೌಡ ಮಳಲಿಯ ಮಾವನೂರು ಗ್ರಾಮದ ರಾಜೇಗೌಡ ಮತ್ತು ಪ್ರೇಮಮ್ಮ ಎಂಬುವವರ ಪುತ್ರಿ ರೂಪ ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ತಿಮ್ಮೇಗೌಡ ಪತ್ನಿ ರೂಪಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ಆಕೆ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶಾಂತಿಗ್ರಾಮ ಠಾಣೆ ಎಸ್ಐ ಎಂ.ಸದಾನಂದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ್ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರ ಮಲ್ಲರಾಜೇಗೌಡ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

