ಮಠದಿಂದ ಮನೆಯಂಗಳಕ್ಕೆ
ಹಾಸನ: ದೇಶದಲ್ಲಿ ಹಿಂದೂ ಧರ್ಮ ಶಿಕ್ಷಣದ ಅವಶ್ಯಕತೆ ಇದ್ದು, ಸನಾತನ ಹಿಂದೂ ಸಂಸ್ಕೃತಿ ಬಗ್ಗೆ, ಅರಿವು ಮೂಡಿಸುವ ಸಲುವಾಗಿ ಮಠದಿಂದ ಮನೆಯಂಗಳಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ನಗರದ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಹೇಳಿದರು. ನಗರಸಭೆ ಸದಸ್ಯೆ ಉಷಾಕುಮಾರ್ ಮನೆಯಲ್ಲಿ ನಡೆದ ಮಠದಿಂದ ಮನೆಯಂಗಳಕ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಳೆಗೇರಿಗಳಲ್ಲಿ ವಾಸಿಸುವ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಾನಸಿಕವಾಗಿ ದುರ್ಬಲವಾಗಿರುವವರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಂತಹ ಜನರಿಗೆ ಆತ್ಮಸ್ಥೈರ್ಯ ತುಂಬಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು. ಜಿಲ್ಲಾ ವಿಷ್ಣು ಸೇನಾಸಮಿತಿ ಅಧ್ಯಕ್ಷ ಬಿ.ಎನ್. ಮಹಂತೇಶ್, ಮಂಜುನಾಥ ಶರ್ಮಾ, ಕುಮಾರ್ ಇನ್ನಿತರರು ಇದ್ದರು.
ಡಿಸ್ಕವರ್ ಬೈಕ್ ಪತ್ತೆ
ಅರಸೀಕೆರೆ: ಪಟ್ಟಣದ ಠಾಣಾ ವ್ಯಾಪ್ತಿಯಲ್ಲಿ ವಾರಸುದಾರರು ಇಲ್ಲದ ಬಜಾಜ್ ಡಿಸ್ಕವರ್ ಬೈಕ್ ಪತ್ತೆಯಾಗಿದೆ. ಬೆಂಗಳೂರಿನ ರಾಜೇಶ್ವರಿ ಪ್ರಾದೇಶಿಕ ಕಚೇರಿಯಲ್ಲಿ ನೊಂದಣೆಯಾಗಿರುವ ಬಜಾಜ್ ಡಿಸ್ಕವರ್ ಬೈಕ್ ಕೆಎ-41-ಇ- 7067 ಆಗಿದ್ದು, ವಾಹನದ ಆರ್.ಸಿ. ಮಾಲೀಕರು ಎಸ್.ಎಂ.ಮಧು ಬಿನ್ ಮಾದಯ್ಯ, ತೃಪ್ತಿ ನಿಲಯ 1 ನೇ ಮುಖ್ಯ ರಸ್ತೆ 10 ನೇ ಕ್ರಾಸ್ ಬಾಪೂಜಿ ನಗರ, ಬೆಂಗಳೂರು-26 ಎಂಬ ವಿಳಾಸ ಇದೆ. ವಾಹನದ ಮಾಲೀಕರು ಇದ್ದಲ್ಲಿ ಪಟ್ಟಣದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

