ಹಾಸನ

8 ಮರಳು ಲಾರಿ ವಶ

Published On :

ಕ.ಪ್ರ. ವಾರ್ತೆ ಹಾಸನ ಸೆ. 28
ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 8 ಲಾರಿ ಹಾಗೂ ಕಲ್ಲು ತುಂಬಿದ 7 ಟ್ರ್ಯಾಕ್ಟರ್‌ಗಳನ್ನು ಶನಿವಾರ ಜಿಲ್ಲಾಡಳಿತ ದಾಳಿ ನಡೆಸಿ ವಶಪಡಿಸಿಕೊಂಡಿದೆ. ನಗರದ ಬೈಪಾಸ್ ರಸ್ತೆಯ ಚನ್ನಪಟ್ಟಣ ಸಮೀಪ ನಿಲ್ಲಿಸಿದ್ದ ಅಕ್ರಮ ಮರಳು ಲಾರಿಗಳು ಹಾಗೂ ಕಲ್ಲು ತುಂಬಿದ್ದ ಟ್ರ್ಯಾಕ್ಟರ್‌ಗಳ ಪರವಾನಗಿಯನ್ನು ತಹಸೀಲ್ದಾರ್ ಮಂಜುನಾಥ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಈ ಭಾಗದಲ್ಲಿ ಅನೇಕ ಬಾರಿ ಅಕ್ರಮವಾಗಿ ಮರಳು ಹಾಗೂ ಕಲ್ಲನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ನೇತೃತ್ವದ ತಂಡ ಮರಳು ಲಾರಿಗಳ ಪರವಾನಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪರವಾನಗಿ ಇಲ್ಲದೆ ಮರಳನ್ನು ಸಾಗಿಸುತ್ತಿದ್ದ 8 ಲಾರಿಗಳು ಹಾಗೂ 7 ಕಲ್ಲು ತುಂಬಿದ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ತೆಗೆದುಕೊಂಡರು. ಪರವಾನಗಿ ಇಲ್ಲದ ವಾಹನಗಳನ್ನು ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಂದು ನಿಲ್ಲಿಸಿದರು. ಮರಳು ಮತ್ತು ಕಲ್ಲು ಮಾರಾಟಗಾರರಿಗೆ ಅನೇಕ ಬಾರಿ ಸೂಚನೆ ನೀಡಿದ್ದರೂ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದಿಡೀರ್ ದಾಳಿ ನಡೆಸಲಾಯಿತು. ಹಾಗೂ ಈ ವಾಹನಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಜೊತೆಗೆ ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಅರ್ಧ ಲೋಡ್ ಮರಳಿಗೆ ಮಣ್ಣು ಬೆರೆಸಿ ಕಲಬೆರಕೆ ಮಾಡುತ್ತಿದ್ದ ಜಾಲದ ವಿರುದ್ಧ ದೂರು ಬಂದಿದ್ದು, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ದಾಳಿ ಸಂದರ್ಭದಲ್ಲಿ ರೆವಿನ್ಯೂ ಅಧಿಕಾರಿ ಚಿಕ್ಕೇಗೌಡ, ಲೋಕೋಪಯೋಗಿ ಇಲಾಖೆ ಅಧಿಕಾರಿ ಕೃಷ್ಣೇಗೌಡ ಇತರರು ಇದ್ದರು.

ಗ್ರಾಪಂ ಅಧ್ಯಕ್ಷರಿಂದ ರಸ್ತೆ ಒತ್ತುವರಿ, ಮನೆ, ಮಳಿಗೆ ನಿರ್ಮಾಣ: ಆರೋಪ
ಕ.ಪ್ರ. ವಾರ್ತೆ ಬೇಲೂರು ಸೆ. 28

ಅಧಿಕಾರ ದುರುಪಯೋಗಿಸಿಕೊಂಡು ಪಿಡಬ್ಲೂಡಿ ರಸ್ತೆಗೆ ಹೊಂದಿಕೊಂಡಂತೆ ಮನೆ ಹಾಗೂ ಮಳಿಗೆಯನ್ನು ನಿರ್ಮಿಸಿರುವ ಅರೇಹಳ್ಳಿ ಗ್ರಾಪಂ ಅಧ್ಯಕ್ಷರ ಹಾಗೂ ಇದಕ್ಕೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮುಸ್ತಾಫ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೇಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಶಶೆಟ್ಟಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನು ಆಕ್ರಮಿಸಿರುವುದಲ್ಲದೆ, ತಮ್ಮ ಪತ್ನಿ ಸುಶ್ಮಿತಾ ಹೆಸರಿನಲ್ಲಿ ಪಂಚಾಯಿತಿ ಅಧಿಕಾರ ದುರಪಯೋಗಪಡಿಸಿಕೊಂಡು ಮನೆ ನಿರ್ಮಾಣ ಮಾಡಲು ಕೆಲವು ಸದಸ್ಯರ ಗಮನಕ್ಕೆ ತಾರದೆ ಅನುಮತಿ ಪತ್ರ ಪಡೆದುಕೊಂಡು ಮನೆ ನಿರ್ಮಾಣ ಮಾಡುತ್ತಿದ್ದರು. ಇದರ ಜೊತೆಯಲ್ಲಿ ದುರ್ಗಾ ಪರಮೇಶ್ವರಿ ಸಿದ್ದ ಉಡುಪುಗಳ ಘಟಕ ನಿರ್ಮಿಸುವುದಕ್ಕೆ ಮಳಿಗೆ ಕಟ್ಟಲು ಅನುಮತಿ ಪಡೆದಿರುವುದು ಅನೇರ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.  ವಿರಾಜಪೇಟೆ - ಬೈಂದೂರು ರಾಜ್ಯ ಹೆದ್ದಾರಿ ಹಾದು ಹೋಗುವ ಅರೇಹಳ್ಳಿ ಸಕಲೇಶಪುರ ರಸ್ತೆಯ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಮಾಡಲು ಗ್ರಾಪಂ ಅಧ್ಯಕ್ಷ ಅಧ್ಯಕ್ಷ ನಾಗೇಶ್‌ಶೆಟ್ಟಿ ಲೈಸನ್ಸ್ ಪಡೆದಿದ್ದು   ಲೋಕೋಪಯೋಗಿ ಇಲಾಖೆ ರಸ್ತೆಯಿಂದ 40 ಮೀ. ಜಾಗಬಿಟ್ಟು ನಿರ್ಮಾಣ ಮಾಡುವಂತೆ ಕರಾರು ಪತ್ರದಲ್ಲಿದೆ. ಆದರೆ ಅದನ್ನು ಗಾಳಿಗೆ ತೂರಿ ಯಾವುದಕ್ಕೂ ಲೆಕ್ಕಿಸದೆ ಮನೆ ಮಳಿಗೆಯನ್ನು ರಸ್ತೆ 10 ಅಡಿ ಸಮೀಪದ ವರೆಗೆ ನಿರ್ಮಾಣ ಮಾಡುತ್ತಿರುವುದು ಕಾನೂನಿಗೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ದಾಖಲಾತಿ ಸೃಷ್ಟಿಸಿ ಆವ್ಯವಾಹ ನಡೆಸಿದ್ದಾರೆ. ಅಲ್ಲದೆ ಕಟ್ಟಡ ನಿರ್ಮಾಣ ಮಾಡಲು ಕುಮ್ಮಕ್ಕು ನೀಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರುಗಳ ವಿರುದ್ದ ಕ್ರಮ ಹಾಗೂ ಮನೆ ನಿರ್ಮಾಣಕ್ಕೆ ಕುಮ್ಮಕ್ಕು ನೀಡುತ್ತಿರುವ ಅರೇಹಳ್ಳಿ ಗ್ರಾಮ ಪಂಚಾಯಿತಿಯನ್ನು ಸೂಪರ್‌ಸೀಡ್ ಮಾಡುವಂತೆ ಒತ್ತಾಯಿಸಿದರು.  
 ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸರ್ಧಾರ್‌ಪಾಷ, ಕೆಜೆಪಿ ಮುಖಂಡ ವಿಜಯಕುಮಾರ್, ಜೆಡಿಎಸ್ ಮುಖಂಡ ಎಂ.ಎಚ್.ಶಿವಪ್ಪಗೌಡ ಲಿಂಗಾಪುರದ ಹರೀಶ್ ಶೆಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.