ಅ. 9, ರು. 65 ಲಕ್ಷ ವೆಚ್ಚದ ಧ್ಯಾನ ಮಂದಿರ ಉದ್ಘಾಟನೆ
ಚನ್ನರಾಯಪಟ್ಟಣ: ಪಟ್ಟಣದ ಕೋಟೆ ಬಡಾವಣೆಯಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಥಿ ಆವರಣದಲ್ಲಿ 65 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಧ್ಯಾನ ಮಂದಿರದ ಉದ್ಘಾಟನಾ ಸಮಾರಂಭ ಅ.9 ರಂದು ನಡೆಯಲಿದೆ ಎಂದು ಮಠದ ಸಮಿತಿ ಅಧ್ಯಕ್ಷ ಸಿ.ವಿ ರಾಜಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಧ್ಯಾನಮಂದಿರವನ್ನು ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿ ಉದ್ಘಾಟಿಸುವರು. ಅ.8ರಂದು ಪಟ್ಟಣಕ್ಕೆ ಆಗಮಿಸುವ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದು ತಿಳಿಸಿದರು.
ವಾಣಿಜ್ಯಕ್ಕೆ ಸಂಬಂದಿಸದ ಕಾರ್ಯಕ್ರಮಗಳಿಗೆ ಬಾಡಿಗೆ ನೀಡದೆ ಸಂಗೀತ, ಸಾಂಸ್ಕೃತಿಕ ಹಾಗೂ ಯೋಗ ಕಾರ್ಯಕ್ರಮಗಳಿಗೆ ಮಂದಿರದಲ್ಲಿ ಅವಕಾಶ ಕಲ್ಪಿಸಲಾಗುವುದು. ಶಾಸಕ ಬಾಲಕೃಷ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮಿತಿಯ ನಾಗೇಂದ್ರರಾವ್, ಬಸವರಾಜು, ಪುಟ್ಟಸ್ವಾಮಿಗೌಡ, ದೇವರಾಜು, ಜಗದೀಶ್ ಮೊದಲಾದವರು ಇದ್ದರು.
ಹೇಳಿಕೆ ವಾಪಸ್ಗೆ ಅನಂತಮೂರ್ತಿಗೆ ವಿಪ್ರ ಸಂಘಟನೆ ಆಗ್ರಹ
ಚನ್ನರಾಯಪಟ್ಟಣ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್ ಅನಂತಮೂರ್ತಿ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ವಾಪಸ್ ಪಡೆಯಬೇಕು ಎಂದು ತಾಲೂಕು ವಿಪ್ರ ಸಂಘಟನೆಗಳು ಆಗ್ರಹಿಸಿವೆ. ಸ್ನೇಹ ಹಾಗೂ ಸೌಹಾರ್ಧತೆಗೆ ಹೆಸರಾಗಿರುವ ಬ್ರಾಹ್ಮಣ ಸಮುದಾಯವನ್ನು ಕೆಣಕುವ ಕಾರ್ಯಕ್ಕೆ ಕೈ ಹಾಕಿರುವ ಡಾ. ಅನಂತಮೂರ್ತಿ ಮುಂದಿನ ದಿನಗಳಲ್ಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಎಚ್ಚರಿಸುವ ಸಲುವಾಗಿ ಅವರಿಗೆ ಅಂಚೆ ಕಾರ್ಡ್ಗಳನ್ನು ಬರೆಯುವ ಮುಖೇನ ಅಂಚೆ ಕಾರ್ಡ್ ಚಳವಳಿ ಹಮ್ಮಿಕೊಂಡಿದೆ.
ಅನಂತಮೂರ್ತಿ ಹೇಳಿಕೆ ಹಾಗೂ ಅವರು ನಡೆದುಕೊಳ್ಳ ಬೇಕಾಗಿರುವ ವಿವರಗಳನ್ನು ಅಂಚೆ ಕಾರ್ಡಿನಲ್ಲಿ ಬರೆದು ಡಾ.ಯು.ಆರ್ ಅನಂತಮೂರ್ತಿ, 498, ಆಎಂವಿ 2ನೇ ಸ್ಟೇಜ್, ಡಾಲರ್ಸ್ ಕಾಲೋನಿ ಬೆಂಗಳೂರು-94 ವಿಳಾಸಕ್ಕೆ ಕಳುಹಿಸಬೇಕಾಗಿ ವಿಪ್ರ ಸಂಘಗಳ ಪರವಾಗಿ ಜಿ.ಆರ್. ಮೋಹನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

