ಖಜಾನೆಯಿಂದ ದೇಗುಲಕ್ಕೆ ಚನ್ನಕೇಶವಸ್ವಾಮಿ ಆಭರಣ
ಬೇಲೂರು: ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಏ.4 ರಿಂದ ಪ್ರಾರಂಭಗೊಳ್ಳಲಿರುವುದರಿಂದ ಚನ್ನಕೇಶವಸ್ವಾಮಿ ಭರಣಗಳನ್ನು ತಾಲೂಕು ಕಚೇರಿಯ ಉಪ ಖಜಾನೆ ಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ದೇವಾಲಯಕ್ಕೆ ತರಲಾಯಿತು. ತಾಲೂಕು ಕಚೇರಿಯಲ್ಲಿರುವ ಉಪ ಖಜಾನೆಯಿಂದ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಪೊಲೀಸರ ಬಿಗಿ ಭದ್ರತೆಯಲ್ಲಿ ಮಂಗಳವಾದ್ಯ ಸಮೇತ ಮೆರವಣಿಗೆಯಲ್ಲಿ ತರಲಾಯಿತು.
ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅಗತ್ಯವಿರುವ ವಿವಿಧ ಉತ್ಸವಗಳು ಮತ್ತು ಸಾಂಪ್ರಾದಾಯಿಕ ಪೂಜೆಗಳು ಜಯನಾಮ ಸಂವತ್ಸರದ ಚೈತ್ರ ಶುದ್ಧ ಪಂಚಮಿ ಏ. 4ರಂದು ದಿವ್ಯ ಶಾರಾದಾ ಆಲಂಕಾರೋತ್ಸವದಿಂದ ಆರಂಭಗೊಳ್ಳಲಿದ್ದು, ಏ.17 ರವರೆಗೆ ಪಾಂಚರಾತ್ರ್ಯಾಗಮ ರೀತ್ಯಾ ಕಾರ್ಯಕ್ರಮ ನಡೆಯಲಿವೆ ದಿವ್ಯ ಚಂದ್ರಮಂಡಲಾ ರೋಹಣೋತ್ಸವ, ರಾಮನವಮಿ, ದಿವ್ಯ ಬೆಳ್ಳಿ ಮಂಟಪ ಉತ್ಸವ, ಹನುಮತೋತ್ಸವ, ಗರುಡೋತ್ಸವ ದಂತಹ ಸಾಂಪ್ರದಾಯಿಕ ಉತ್ಸವಗಳು ನಡೆಯಲಿವೆ. ಏ.13ರಂದು ದಿವ್ಯ ರಥೋತ್ಸವ, ರಾತ್ರಿ ಡೋಲೋತ್ಸವ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

