ಮುಕ್ತ, ನ್ಯಾಯೋಚಿತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜು
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2196 ಮತಗಟ್ಟೆಗಳ ಪೈಕಿ 730 ಸೂಕ್ಷ್ಮಮತಗಟ್ಟೆಗಳು, 313 ಅತೀ ಸೂಕ್ಷ್ಮ ಮತಗಟ್ಟೆಗಳು, 130 ಸಾಧಾರಣ ಮತಗಟ್ಟೆಗಳು, 1004 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಮತದಾನಕ್ಕೆ ನಡೆಸಿರುವ ಸಿದ್ಧತೆಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅನ್ಬುಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಶ್ರವಣಬೆಳೆಗೊಳದಲ್ಲಿ 126 ಸೂಕ್ಷ್ಮ, 55 ಅತೀ ಸೂಕ್ಷ್ಮ, ಸಾಧಾರಣ 17, ಸಾಮಾನ್ಯ ಮತಗಟ್ಟೆಗಳು 270, ಅರಸೀಕೆರೆಯಲ್ಲಿ 48 ಸೂಕ್ಷ್ಮ, 39 ಅತೀ ಸೂಕ್ಷ್ಮ, ಸಾಧಾರಣ 14, ಸಾಮಾನ್ಯ ಮತಗಟ್ಟೆಗಳು 72 ಒಟ್ಟಾರೆಯಾಗಿ 275, ಬೇಲೂರಿನಲ್ಲಿ 96 ಸೂಕ್ಷ್ಮ, 48 ಅತೀ ಸೂಕ್ಷ್ಮ, ಸಾಧಾರಣ 12, ಸಾಮಾನ್ಯ ಮತಗಟ್ಟೆಗಳು 113 ಇರುವುದಾಗಿ ಅವರು ತಿಳಿಸಿದರು.
ಒಟ್ಟಾರೆಯಾಗಿ 268: ಹಾಸನದಲ್ಲಿ 104 ಸೂಕ್ಷ್ಮ, 18 ಅತೀ ಸೂಕ್ಷ್ಮ, ಸಾಧಾರಣ 10, ಸಾಮಾನ್ಯ ಮತಗಟ್ಟೆಗಳು 116 ಒಟ್ಟಾರೆಯಾಗಿ 265, ಹೊಳೆನರಸೀಪುರದಲ್ಲಿ 126 ಸೂಕ್ಷ್ಮ, 67 ಅತೀ ಸೂಕ್ಷ್ಮ, ಸಾಧಾರಣ 28, ಸಾಮಾನ್ಯ ಮತಗಟ್ಟೆಗಳು 95 ಒಟ್ಟಾರೆಯಾಗಿ 316, ಅರಕಲಗೂಡಿನಲ್ಲಿ 114ಸೂಕ್ಷ್ಮ, 23 ಅತೀ ಸೂಕ್ಷ್ಮ, ಸಾಧಾರಣ 21, ಸಾಮಾನ್ಯ ಮತಗಟ್ಟೆಗಳು 127 ಒಟ್ಟಾರೆಯಾಗಿ 285.
ಸಕಲೇಶಪುರದಲ್ಲಿ 65 ಸೂಕ್ಷ್ಮ, 36 ಅತಿ ಸೂಕ್ಷ್ಮ, ಸಾಧಾರಣಲ್ 28, ಸಾಮಾನ್ಯ ಮತಗಟ್ಟೆಗಳು 149 ಒಟ್ಟಾರೆಯಾಗಿ 281 ಮತ್ತು ಕಡೂರಿನಲ್ಲಿ 51 ಸೂಕ್ಷ್ಮ, 27 ಅತೀ ಸೂಕ್ಷ್ಮ, ಸಾಧಾರಣ 0, ಸಾಮಾನ್ಯ ಮತಗಟ್ಟೆಗಳು 158 ಒಟ್ಟಾರೆಯಾಗಿ 236 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಗುರುತಿನ ಚೀಟಿ
ಲೋಕಸಭಾ ಕ್ಷೇತ್ರದಲ್ಲಿ 15,59,655 ಮತದಾರರ ಪೈಕಿ 15,57,627 ಮತದಾರರು ಭಾವಚಿತ್ರ ಇರುವ ಗುರುತಿನ ಚೀಟಿ ಹೊಂದಿದ್ದಾರೆ. ಒಟ್ಟು 32,374 ಮತದಾರರು ಸೇರ್ಪಡೆಯಾಗಿದ್ದು, ಒಟ್ಟು 13,39,915 ಮತದಾರರಿಗೆ ಎಪಿಕ್ಗಳನ್ನು ವಿತರಿಸಲಾಗಿದೆ. ಉಳಿದ ಎಪಿಕ್ಗಳನ್ನು 3 ದಿನಗಳೊಳಗಾಗಿ ಬಿಎಲ್ಓ ಅವರ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.
ಕ್ಷೇತ್ರವಾರು ಮತದಾರರು
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಹಾಗೂ ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ 15,59,655 ಮತದಾರರು, ಆ ಪೈಕಿ ಪುರುಷರು- 7,82, 609, ಮಹಿಳೆಯರು- 7, 71,258.
ಶ್ರವಣಬೆಳಗೊಳ ವಿಧನಸಭಾ ಕ್ಷೇತ್ರ - 98,146 ಪುರುಷರು, 97,661 ಮಹಿಳೆಯರು, ಇತರೆ 10 ಸೇರಿದಂತೆ ಒಟ್ಟು 1,95,817 ಮತದಾರರು.
ಅರಸೀಕೆರೆ ಕ್ಷೇತ್ರ - 1,01,721 ಪುರುಷರು, 1,01687 ಮಹಿಳೆಯರು, ಇತರೆ 24 ಸೇರಿದಂತೆ 2,03,432 ಮತದಾರರಿದ್ದಾರೆ.
ಬೇಲೂರು: 91,958 ಪುರುಷರು, 88,659 ಮಹಿಳೆಯರು, ಇತರೆ 5 ಸೇರಿದಂತೆ 1,80,622 ಮತದಾರಿದ್ದಾರೆ.
ಹಾಸನ: 99,658 ಪುರುಷರು, 99,704 ಮಹಿಳೆಯರು, ಇತರೆ 19 ಸೇರಿದಂತೆ 1,99,381 ಮತದಾರರಿದ್ದಾರೆ.
ಹೊಳೆನರಸೀಪುರ: 1,02,529 ಪುರುಷರು, 1,00,502 ಮಹಿಳೆಯರು, 7 ಇತರೆ ಸೇರಿದಂತೆ 2,03,038 ಮತದಾರರಿದ್ದಾರೆ.
ಅರಕಲಗೂಡು ಕ್ಷೇತ್ರ: 1,05,146 ಪುರುಷರು, 98,054 ಮಹಿಳೆಯರು, 11 ಇತರೆ ಸೇರಿದಂತೆ 2,03,211 ಮತದಾರರಿದ್ದಾರೆ.
ಸಕಲೇಶಪುರ ಕ್ಷೇತ್ರ: 93,565 ಪುರುಷರು, 93,218 ಮಹಿಳಯರು, 5 ಇತರೆ ಸೇರಿದಂತೆ 1,86,788 ಮತದಾರರಿದ್ದಾರೆ.
ಕಡೂರು ಕ್ಷೇತ್ರ: 95,886 ಪುರುಷರಿದ್ದು, 91,773 ಮಹಿಳೆಯರು, 7 ಇತರೆ ಸೇರಿದಂತೆ 1,87,366 ಮತದಾರರು ಸೇರಿದಂತೆ ಒಟ್ಟಾರೆಯಾಗಿ 15,59,655 ಮತದಾರರು ಇದ್ದಾರೆ.
ಮತದಾನ ಕೇಂದ್ರಗಳ ವಿವರ
ಜಿಲ್ಲೆಯಲ್ಲಿ ಈ ಹಿಂದೆ 2009ರಲ್ಲಿ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಇದ್ದ 1757 ಮೂಲ ಮತಗಟ್ಟೆಗಳನ್ನು ಆಯೋಗದ ಇತ್ತೀಚಿನ ನಿರ್ದೇಶನಗಳ ಪ್ರಕಾರ ಕ್ರಮ ಬದ್ಧಗೊಳಿಸಿ, ಈಗ ನೂತನವಾಗಿ 203 ಮತಗಟ್ಟೆಗಳು ಸೇರಿದಂತೆ 1960 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 197 ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮತಗಟ್ಟೆ ಸಂಖ್ಯೆ143 ಕೊಂತಗೋಡನಹಳ್ಳಿಗೆ ಸಂಬಂಧಿಸಿದಂತೆ ಶೆಟ್ಟಿಹಳ್ಳಿ ಗ್ರಾಮಕ್ಕಾಗಿ ಪ್ರತ್ಯೇಕ ಮತಗಟ್ಟೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಅನುಮೋದನೆ ಆಗದ ಕಾರಣ ಈ ಮತಗಟ್ಟೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನು ಎಲ್ಲಾ ಅಭ್ಯರ್ಥಿಗಳ ರಾಜಕೀಯ ಪಕ್ಷಗಳ ಹಾಗೂ ಮತದಾರರ ಗಮನಕ್ಕೆ ತರಲಾಗಿದೆ. ಆಯೋಗವು ನಿರ್ದೇಶನದ ಪ್ರಕಾರ ಮತಗಟ್ಟೆಗಳ ಪೈಕಿ ಈ ಹಿಂದಿನ ಘಟನೆಗಳನ್ನು ಪರಿಶೀಲಿಸಿ ಪೋಲೀಸ್ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಮತ್ತು ಹಿಂದಿನ ಚುನಾವಣೆಗಳಲ್ಲಿನ ಮತದಾನ ಅಂಕಿಅಂಶಗಳನ್ನು ಪರಿಶೀಲಿಸಿ, ಗಲಭೆ ಗ್ರಸ್ತ ಮತ್ತು ಕ್ಲಿಷ್ಟಕರ ಮತಗಟ್ಟೆಗಳು ಮತಗಟ್ಟೆಗಳ ಮ್ಯಾಪಿಂಗ್ ಮಾಡಲಾಗುವುದು ಮತ್ತು ಒಂದೇ ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಿದ ಸಮೂಹ ಮತಗಟ್ಟೆಗಳು ಇರುವ ಪ್ರದೇಶಗಳಲ್ಲಿ ವಿಡಿಯೋ ಕಾರ್ಡ್ ಮಾಡಲಾಗುವುದು. ಆಯೋಗದ ನಿರ್ದೇಶನದಂತೆ ಕೆಲವು ಆಯ್ದ ಮತಗಟ್ಟೆಗಳಿಗೆ ಕೇಂದ್ರ ಸರ್ಕಾರದ ಅಧಿಕಾರಿ ಮತ್ತು ನೌಕರರನ್ನು ಮೈಕ್ರೋ ಅಬರ್ಸವರ್ಗಳನ್ನಾಗಿ ನೇಮಿಸಲಾಗುವುದು. ಇನ್ನಿತರ ಆಯ್ದ ಪೋಲಿಂಗ್ ಸ್ಟೇಷನ್ಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

