ಹಾಸನ

ಶಾಸಕರು, ಕಾರ್ಯಕರ್ತರ ನಿರ್ಧಾರದಂತೆ ಪ್ರಚಾರ

Published On :

ಹಾಸನ: ಜಿಲ್ಲೆಯಲ್ಲಿ ರೋಡ್ ಶೋ ಮಾಡಲಿಕ್ಕೆ ಆಗದು. ಕೇರಳ ರಾಜ್ಯವಲ್ಲದೇ, ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗಿದೆ. ಜಿಲ್ಲೆ ಮಟ್ಟದಲ್ಲಿ ಪ್ರಚಾರ ಮಾಡಿ ಸಾಕು, ಮಿಕ್ಕದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಶಾಸಕರು, ಮುಖಂಡರು, ಕಾರ್ಯಕರ್ತರು ಹೇಳಿದರೆ ಹಾಗೇ ಮಾಡುವೆ. ಅದು ಸಾಕಾಗದು ಪ್ರತಿ ತಾಲೂಕಿನಲ್ಲಿ ಪ್ರಚಾರ ಮಾಡಬೇಕೆಂದರೇ ಮಾಡುವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು.
ಬುರುಡೆ ಭಾಷಣಕ್ಕೆ ನನ್ನ ಜಿಲ್ಲೆಯ ಜನರು ಮಾರು ಹೋಗುವುದಿಲ್ಲ. ಕೆಟ್ಟ ಭಾಷೆ ಬಳಸಿ ನಿಂದಿಸುವುದಕ್ಕೆ ಮನ್ನಣೆ ನೀಡುವುದಿಲ್ಲ. ಸಮಯದ ಅಭಾವ ಇರುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ಮಾಡಲಿಕ್ಕೆ ಆಗದು. ನಾನು ಮನುಷ್ಯ. ನಮಗೆ ಹೆಲಿಕಾಫ್ಟರ್‌ಗಳು ಇಲ್ಲ. ಹಣಕಾಸಿನ ಅಭಾವ ಇದೆ. ಜನರು ಅರ್ಥ ಮಾಡಿಕೊಂಡು ಪ್ರೋತ್ಸಾಹಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಮೈಸೂರು ಜಿಲ್ಲೆ ಪ್ರವಾಸ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಅನೇಕ ಕಡೆ ಏಪ್ರಿಲ್ 4 ರಂದು ಪ್ರವಾಸ ಮಾಡಲಾಗುವುದು. ನಿವೃತ್ತ ಹೈಕೋರ್ಟ್ ಚಂದ್ರಶೇಖರ್ ಅವರಿಗಿಂತ ಗೌರವಯುತ ಅಭ್ಯರ್ಥಿ ಸಿಗುತ್ತಾರೆಯೇ. ರಾಜ್ಯದ 15 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ. ಕಾದು ನೋಡಿ  ಎಂದು  ಗೌಡರು ವಿಶ್ವಾಸದಿಂದ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.