ಹಾಸನ

ಸ್ವಾರ್ಥಕ್ಕಾಗಿ ಮುಖಂಡರಿಂದಲೇ ದಲಿತರಿಗೆ ಅನ್ಯಾಯ

Published On :

ಕ.ಪ್ರ. ವಾರ್ತೆ  ಹಾಸನ  ಏ. 3
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಾನಾ ದಲಿತ ಮುಖಂಡರು ಸ್ವಾರ್ಥ ಸಾಧನೆಗೆ ದಿನಕೊಂಡು ಹೇಳಿಕೆ ನೀಡುತ್ತಿದ್ದು, ಕಾಂಗ್ರೆಸ್ಗೆ ಬೆಂಬಲ ಮತ್ತು ಜೆಡಿಎಸ್ಗೆ ಬೆಂಬಲ ಎನ್ನುವ ಮೂಲಕ ಮುಗ್ದ ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್ ಆರೋಪಿಸಿದ್ದಾರೆ.
ಕಳೆದ 65 ವರ್ಷಗಳಿಂದ ಕಾಂಗ್ರೆಸ್ಗೆ ಮತ ಹಾಕಿರುವ ದಲಿತರಿಗೆ ಕಾಂಗ್ರೆಸ್ ಏನು ಮಾಡಿದೆ  ಎಂಬುದು ಅಂತ ಜನತೆಗೆ ತಿಳಿದಿದೆ. ಕಾಂಗ್ರೆಸ್ ನೀಡಿರುವ ಅನ್ನಭಾಗ್ಯ, ಕ್ಷೀರ ಭಾಗ್ಯ, ಮೈತ್ರಿ ಭಾಗ್ಯ, ಮನಸ್ವಿನಿ ಭಾಗ್ಯ, ಶಾದಿ ಭಾಗ್ಯ, ಸಾಲಭಾಗ್ಯಕ್ಕೆ ದಲಿತರ ಮುಖಂಡರು ತೃಪ್ತಿಪಟ್ಟುಕೊಂಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ಒತ್ತೆ: ಕಾಂಗ್ರೆಸ್ನ ದಲಿತ ಮಂತ್ರಿಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಈ ರೀತಿಯ ಭಾಗ್ಯಗಳಿಗೆ ತೃಪ್ತಿಪಟ್ಟುಕೊಂಡು ದಲಿತರನ್ನು ಕಾಂಗ್ರೆಸ್ಗೆ ಒತ್ತೆ ಇಟ್ಟಿದ್ದಾರೆ ಎಂದು ಅವರು ಖಂಡಿಸಿದರು.
ತಕ್ಕಪಾಠ: ದಲಿತರು ಈ ರೀತಿಯ ಭಾಗ್ಯಗಳು ಬೇಡ, ಉಳುವ ಭೂಮಿ ಕೊಡಿ, ಶಿಕ್ಷಣ ಕೊಡಿ, ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಹಳ್ಳಿಗಳಲ್ಲಿ ಅಸ್ಪೃಶ್ಯ ಆಚರಣೆ ನಿಲ್ಲಿಸಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಿ ಎಂಬುದನ್ನು ಕೇಳದೆ ಸ್ವಾರ್ಥಕ್ಕಾಗಿ ದಲಿತರ ಹಿತಾಸಕ್ತಿ ಕಡೆಗಣಿಸಿ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ದಲಿತರು ಪ್ರಜ್ಞಾವಂತರಾಗಿದ್ದು, ಕಾಂಗ್ರೆಸ್ನಿಂದ ಬೇಸತ್ತಿರುವ ದಲಿತರು, ಅಂಬೇಡ್ಕರ್ ತತ್ವ ಸಿದ್ಧಾಂತದಲ್ಲಿ ನಡೆಯುತ್ತಿರುವ ಬಿಎಸ್ಪಿಗೆ ಮತವನ್ನು ನೀಡುವ ಮೂಲಕ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಿಸ್ಬಿಗೆ ಮತ ನೀಡಬೇಕು: ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮುಗ್ಧ ದಲಿತರು ಕುಳುವಾಡಿಕೆ, ಗ್ರಾಮ ಚಾಕರಿ, ಸತ್ತ ಪ್ರಾಣಿಗಳನ್ನು ಎಳೆಯುವುದು, ದೇವಸ್ಥಾನ ಪ್ರವೇಶಗಳಿಂದ ಹೊರಗುಳಿದು ಮಾನಸಿಕ ತೋಳಲಾಟದಲ್ಲಿ ಬದುಕು ಸಾಗಿಸುತ್ತಿದ್ದಾರೆ.
 ಇಂತಹ ಹೀನ ಕೃತ್ಯಗಳ ನಿಷೇಧಕ್ಕೆ ದಲಿತರಿಗೆ ಇರುವುದು ಒಂದೇ ಒಂದು ದಾರಿ - ಚುನಾವಣೆಗಳು ಬಂದಾಗ ದಬ್ಬಾಳಿಕೆ ದೌರ್ಜನ್ಯ ನಡೆಸಿರುವ ಕಾಂಗ್ರೆಸ್ ಮುಖಂಡರಿಗೆ ಮತ ನೀಡದೆ ಬಿಎಸ್ಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಯಾವ ನೈತಿಕತೆ ಇದೆ: ಕಾಂಗ್ರೆಸ್ ಅಭ್ಯರ್ಥಿ ಮಂಜು ಅವರ ಕ್ಷೇತ್ರವಾದ ಅರಕಲಗೂಡಿನಲ್ಲಿ ನಡೆದಿರುವಷ್ಟು ದಲಿತ ದೌರ್ಜನ್ಯ ಪ್ರಕರಣಗಳು ಜಿಲ್ಲೆಯಲ್ಲಿ ಬೇರೆ ಕಡೆ ನಡೆದಿಲ್ಲ ಎಂದು ಆರೋಪಿಸಿದ ಅವರು, ಇಂದಿಗೂ ಬಸವನಹಳ್ಳಿ, ರಾಗಿ ಮಮೂರು, ಗ್ರಾಮಗಳಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿದೆ. ದಲಿತರಿಗೆ ಕನಿಷ್ಟ ಸಾಂತ್ವನ ಹೇಳಲಿಕ್ಕಾದರೂ ದಲಿತ ಕೇರಿಗೆ ಭೇಟಿ ನೀಡದ ದಲಿತ ವಿರೋಧಿಗಳಾಗಿದ್ದಾರೆ. ಯಾವ ನೈತಿಕತೆ ಇಟ್ಟುಕೊಂಡು ದಲಿತರು ಮತವನ್ನು ಕೇಳುತ್ತಾರೆ ಎಂದು ಪ್ರಶ್ನಿಸಿದರು.
ದಲಿತ ಮುಖಂಡರಿಗೆ ಆಸೆ ಆಮಿಷಗಳನ್ನು ಒಡ್ಡಿ ಒಡೆದು ಹಾಳುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಇದು ನಡೆಯುವುದಿಲ್ಲ. ಯಾವುದೇ ಗೊಂದಲಗಳಿಗೆ ಕಿವಿಗೊಡದೆ, ಒಂದು ಪಕ್ಷದ ಪರ ಬೆಂಬಲಿಸುವಂತೆ ಹೇಳುವ ದಲಿತ ನಾಯಕರ ಹೇಳಿಕೆಗೆ ಆಸ್ಪದ ಕೊಡದೆ ದಲಿತರು ಒಗ್ಗಟ್ಟಿನಿಂದ ಇರಬೇಕು ಎಂದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ವಾದವನ್ನು ಪ್ರತಿಪಾದಿಸುತ್ತಿರುವ ಬಿಎಸ್ಪಿಗೆ ಮತ ನೀಡುವಂತೆ ಮನವಿ ಮಾಡಿದರು. ಈಸಂದರ್ಭದಲ್ಲಿ ಉಪಾಧ್ಯಕ್ಷ ರಾಜು ಅರೇಹಳ್ಳಿ, ಕುಮಾರ್ ಗೌರವ್, ದೇವರಾಜು, ಅತ್ನಿ ಹರೀಶ್ಮ್ತ್ತು ಶಿವಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.