ಬೇಲೂರು ಪುರಸಭೆಗೆ ಎರಡು ಟ್ಯಾಂಕರ್ ಖರೀದಿ
ಬೇಲೂರು: ಇಲ್ಲಿನ ಪುರಸಭೆಗೆ ನೀರು ಸರಬರಾಜು ಮಾಡುವ ಎರಡು ನೂತನ ಟ್ಯಾಂಕರ್ಗಳನ್ನು ಪುರಸಭೆ ಅನುದಾನದಲ್ಲಿ ಖರೀದಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಬಿ. ಗಿರೀಶ್ ತಿಳಿಸಿದರು. ಸಾಂಕೇತಿಕವಾಗಿ ಟ್ಯಾಂಕರ್ಗಳಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪುರಸಭೆಯಲ್ಲಿ ಇದೀಗ ಇದ್ದ ಒಂದು ಟ್ಯಾಂಕರ್ ತೂತು ಬಿದ್ದು ಹಾಳಾಗಿತ್ತು. ಅದರಲ್ಲೇ ನೀರು ಸರಬರಾಜು ಮಾಡುತ್ತಿದ್ದೆವು. ಹೊಸ ಟ್ಯಾಂಕರ್ ಖರೀದಿಗೆ ಡಿಸಿ ಅನುಮತಿ ಪಡೆದು ಟೆಂಡರ್ ಕರೆಯಲಾಗಿತ್ತು. ಇದೀಗ 2 ಟ್ಯಾಂಕರ್ಗಳು ಬಂದಿವೆ. ಇದರಿಂದ ತುರ್ತಾಗಿ ನೀರು ಸರಬರಾಜು ಮಾಡಲು ಅನುಕೂಲವಾಗಿದೆ ಎಂದರು.
ದೀಪಾಲಂಕಾರಕ್ಕೆ ಕ್ರಮ: ಚನ್ನಕೇಶವಸ್ವಾಮಿ ರಥೋತ್ಸವ ಸಂದರ್ಭದಲ್ಲಿ ನೀರು ಸರಬರಾಜು ಮಾಡಲು ಅನುಕೂಲವಾಗಿದೆ. ತೂತು ಬಿದ್ದಿರುವ ಟ್ಯಾಂಕರ್ ಅನ್ನು ದುರಸ್ತಿಪಡಿಸಿ ಅದನ್ನೂ ಉಪಯೋಗಿಸಲಾಗುವುದು. ದೇವರ ಉತ್ಸವ ಆಗಮಿಸುವ 8 ಬೀದಿಗಳಲ್ಲಿ ಅಳವಡಿಸಲು 36 ಎಲ್ಇಡಿ ವಿದ್ಯುತ್ ಬಲ್ಬ್ಗಳನ್ನು ಖರೀದಿಸಲಾಗುವುದು. ದೇವಾಲಯ ಅಂದ ಹೆಚ್ಚಿಸಲು ದೇಗುಲದ ಸುತ್ತಲಿರುವ 4 ಹೈಮಾಸ್ಟ್ ಸ್ತಂಭಗಳಿಗೆ ಅತ್ಯುತ್ತಮ ಹಾಗೂ ಪ್ರಕಾಶಮಾನವಾದ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗುವುದು ಎಂದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮಾಡುವ ವೇಳೆ ಪುರಸಭೆಯ ಪೈಪುಗಳು ಹಾಗೂ ಸಿಮೆಂಟ್ ರಸ್ತೆಗಳನ್ನು ಅಗೆದು ಹಾಳುಗೆಡವಲಾಗಿದೆ. ಇದನ್ನ ಸಂಬಂದಪಟ್ಟವರೇ ದುರಸ್ತಿ ಮಾಡಿಸಿಕೊಡಬೇಕು. ಕಳಪೆ ಕಾಮಗಾರಿ ಕಾರಣ ಕೆಲವು ಸ್ಥಳದಲ್ಲಿ ಪೈಪುಗಳ ಅಳವಡಿಸದಂತೆ ತಡೆಯಲಾಗಿದೆ. ರು. 17 ಕೋಟಿ ವೆಚ್ಚದ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡ ನಂತರ ಮೀಟರ್ ಅಳವಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ, ಸಿಇಒ ಬಸವರಾಜು, ಸದಸ್ಯರಾದ ಚನ್ನಕೇಶವ, ಶ್ರೀನಿಧಿ, ರವಿಅಣ್ಣೇಗೌಡ, ಎಂಜಿನಿಯರ್ ಶಿವಪ್ರಸಾದ್, ಆರೋಗ್ಯಾಧಿಕಾರಿ ವೆಂಕಟೇಶ್, ಕಾಂಗೈ ಯುವ ಮುಖಂಡ ಇಕ್ಬಾಲ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

