ಹಾಸನ

ಕನ್ನಡ, ಆಂಗ್ಲ ಸಾಹಿತಿಗಳ ಬಗ್ಗೆ ಗೋಡೆ ಬರಹ

Published On :

ಜಾವಗಲ್:  ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಮತ್ತು ಆಂಗ್ಲ ಭಾಷಾ ವಿಭಾಗಗಳ ಆಶ್ರಯದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯ ಪ್ರಸಿದ್ಧ ಸಾಹಿತಿಗಳ ಮುಖಪರಿಚಯ ಹಾಗೂ ಸಾಧನೆಗಳ ಬಗ್ಗೆ ಗೋಡೆಬರಹಗಳು ಮತ್ತು ಫೋಟೋ ಪ್ರದರ್ಶನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ರವೀಂದ್ರನಾಥ ಠಾಕೂರ್, ಷೇಕ್ಸ್‌ಪಿಯರ್, ಈಲಿಯಟ್, ಸಾಕ್ರಟೀಸ್, ಕುವೆಂಪು, ಶಿವರಾಮ ಕಾರಂತ್, ದ.ರಾ. ಬೇಂದ್ರೆ, ಆರ್.ಕೆ. ಲಕ್ಷ್ಮಣ್ ಮೊದಲಾದವರ ಜೀವನ ಮತ್ತು ಸಾಧನೆಗಳನ್ನು ಏಕಕಾಲದಲ್ಲಿ ಅರಿಯುವ ಅವಕಾಶ ಕಲ್ಪಿಸಿಕೊಡಲಾಗಿತ್ತು.  ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಭಾಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಆಂಗ್ಲ ಭಾಷ ಸಹ ಪ್ರಾಧ್ಯಾಪಕ ಬಿ. ಶಿವಕುಮಾರ್, ಕನ್ನಡ ಸಹ ಪ್ರಾದ್ಯಾಪಕ ಶಂಕರಲಿಂಗೇಗೌಡ, ಶಿವಶಂಕರಮೂರ್ತಿ, ಸತೀಶ್, ಉಪನ್ಯಾಸಕ ದಯಾನಂದ್, ಪ್ರದೀಪ್, ದಿಲೀಪ್ ಮತ್ತು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.