ಹಾಸನ

ಮತ ಎಣಿಕೆ ವ್ಯವಸ್ಥೆ; ಡಿಸಿ ಪರಿಶೀಲನೆ

Published On :

ಹಾಸನ: ಹಾಸನ ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ವಿ ಅನ್ಬುಕುಮಾರ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಅವರು ಅಧಿಕಾರಿಗಳ ತಂಡದೊಂದಿಗೆ ಭಾನುವಾರ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಮತಯಂತ್ರಗಳ ಭಧ್ರತೆ ಹಾಗೂ ಮತ ಎಣಿಕೆಗೆ ಮಾಡಿಕೊಳ್ಳಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಮತದಾನದ ನಂತರ ಪ್ರತಿ ವಿಧಾನಸಭೆವಾರು ಮತಯಂತ್ರಗಳನ್ನು ಪ್ರತ್ಯೇಕವಾದ ಕೊಠಡಿಯಲ್ಲಿ ಇಡಲಾಗುವುದು. ಅದಕ್ಕಾಗಿಯೇ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮತಯಂತ್ರಗಳ ಸುರಕ್ಷತೆಗೆ ಅಗತ್ಯವಿರುವ ತಾಂತ್ರಿಕ, ಭೌತಿಕ ಸಿದ್ಧತೆಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಈಗಾಗಲೆ ಅನೇಕ ಕಾರ್ಯಗಳು ಮುಗಿದಿದ್ದು ಮತಯಂತ್ರಗಳನ್ನು ಇರಿಸುವ ಕಟ್ಟಡದ ಸುತ್ತ ಪೊಲೀಸ್ ಪಹರೆ, ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿ ಅಳವಡಿಕೆ ಮತ್ತಿತರ ವಿಷಯಗಳ ಬಗ್ಗೆ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಯಿತು.
 ಮತ ಎಣಿಕೆಗೆ ಕ್ಷೇತ್ರವಾರು ಕೊಠಡಿಗಳನ್ನು ಈಗಾಗಲೇ ಗುರುತಿಸಿ ಮೀಸಲಿರಿಸಲಾಗಿದ್ದು ಈ ಎಲ್ಲಾ ರೂಂಗಳಲ್ಲಿ ಕಬ್ಬಿಣದ ಜಾಲರಿ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ, ಚುನಾವಣಾಧಿಕಾರಿ ಕಚೇರಿ, ನಿಯಂತ್ರಣ ಕೊಠಡಿ, ಏಜೆಂಟರು ಕೂರಲು ಸ್ಥಳಾವಕಾಶ. ವ್ಯವಸ್ಥಿತ ಮಾಧ್ಯಮ ಕೇಂದ್ರದ ಸ್ಥಾಪನೆ, ಮತ್ತಿತರ ಆಂಶಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಚುನಾವಾಣೆ ತಹಸೀಲ್ದಾರ್ ಬಾಬುರಾವ್, ಡಿವೈಎಸ್‌ಪಿ ಭೀಮಕ್ಕನವರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.