8 ಆರೋಪಿಗಳ ಬಂಧನ
Published On :
ಸಕಲೇಶಪುರ: ವಾರದ ಹಿಂದೆ ರಾಷ್ಟ್ರೀಯ ಹೆದ್ದಾರಿ 48 ಕಪ್ಪಳ್ಳಿ ಗ್ರಾಮ ಸಮೀಪ ಸಾಫ್ಟ್ವೇರ್ ಎಂಜಿನಿಯರ್ ಅವರನ್ನು ತಡೆದು, ಹಲ್ಲೆ ನಡೆಸಿ, ದರೋಡೆ ನಡೆಸಿದ 8 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಏಪ್ರಿಲ್ ಒಂದರಂದು ಮಂಗಳೂರಿನಿಂದ ತಡರಾತ್ರಿ ತಮ್ಮ ಬೈಕ್ನಲ್ಲಿ ತೆರಳುತ್ತಿದ್ದ ಎಚ್.ಸಿ.ಎಲ್ ಕಂಪನಿಯ ಬಾಬುರಾಜ್ ಎಂಬುವರು ಮುಂಜಾನೆ 4 ಗಂಟೆ ಸಮಯದಲ್ಲಿ ಕಪ್ಪಳ್ಳಿ ಸಮೀಪದ ನೀರಿನ ಜರಿಯಲ್ಲಿ ಸ್ನಾನಮಾಡುತ್ತಿದ್ದ ವೇಳೆ ಮೂರು ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ತಂಡ ಬಾಬುರಾಜ್ ಅವರ ಕ್ಯಾಮೆರಾ ಇದ್ದ ಬ್ಯಾಗನ್ನು ಹೊತ್ತೊಯ್ಯಲು ಪ್ರಯತ್ನ ನಡೆಸಿದ್ದರು. ಈ ವೇಳೆ ಪ್ರತಿರೋಧ ತೋರಿದ ಬಾಬುರಾಜ್ ಮೇಲೆ ಖಾರದ ಪುಡಿ ಎರಚಿ, ದೊಣ್ಣೆ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಬ್ಯಾಗ್ ಕಸಿದು ಪರಾರಿಯಾಗಿದ್ದರು.
ಸುಳಿವು ನೀಡಿದ ಮೊಬೈಲ್: ಘಟನೆ ಸ್ಥಳದಲ್ಲಿ ದೊರತೆ ಮೊಬೈಲ್ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೈಸೂರಿನ ನಿವಾಸಿಗಳಾದ ಸಮರ್ಥ, ಅನಿಲ್, ಅವಿನಾಶ್ ಮತ್ತು ರಂಜಿತ್ ಹಾಸನ ನಗರದ ದೊಡ್ಡಮಂಡಿಗನಹಳ್ಳಿ ನಿವಾಸಿಗಳಾದ ಮಹೇಶ, ರಾಜು, ಪ್ರಸನ್ನ ಮತ್ತು ಚೇತನ್ರವರನ್ನು ಬಂಧಿಸಿ ಎರಡು ಕ್ಯಾಮೆರಾ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿ.ಡಿ. ಚನ್ನಣ್ಣನವರ್, ಹೆಚ್ಚುವರಿ ಎಸ್ಪಿ ರಶ್ಮಿ,ಸಕಲೇಶಪುರ ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಗುರುರಾಜ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಪಿಎಸೈ ಬಿ.ಆರ್. ಗೌಡ ಹಾಗೂ ಸಿಬ್ಬಂದಿ ಜಮೈದ್ ಖಾನ್, ಮಹೇಶ, ಶ್ರೀನಾಥ್, ಶಶಿಕುಮಾರ್, ನಾಗೇಶ್ ಮತ್ತು ಸತೀಶ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

