ಹಾಸನ

ಬೇಲೂರಿನಲ್ಲಿ ರಾಮನವಮಿ ಉತ್ಸವ

Published On :
ಬೇಲೂರು: ಶ್ರೀ ರಾಮನವಮಿಯ ಅಂಗವಾಗಿ  ಪಟ್ಟಣದ ಪ್ರಸನ್ನ ಸೀತಾರಾಮಂಜನೇಯ ದೇಗುಲದಲ್ಲಿ ಶ್ರೀ ರಾಮಪಟ್ಟಾಭಿಷೇಕ ಹಾಗೂ ನಾನಾ ಉತ್ಸವ ಕಾರ್ಯಕ್ರಮ ಮತ್ತು ಮಜ್ಜಿಗೆ ಪಾನಕ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ  ದೇವಸ್ಥಾನ ರಸ್ತೆಯಲ್ಲಿರುವ ಪ್ರಸನ್ನ ಸೀತಾರಾಮಂಜನೇಯ ದೇಗುಲದಲ್ಲಿ ಶ್ರೀ ರಾಮನವಮಿಯನ್ನು ಸಡಗರ ಸಂಬ್ರಮದಿಂದ ಆಚರಿಸಲಾಯಿತು.  ಮಂಗಳವಾರ ಬೆಳಗಿನಿಂದಲೇ ನಾನಾ ಹೋಮ ಹವನ ಹಾಗೂ ಪೂಜಾ ಕಾರ್ಯಗಳು ನಡೆದವು. ನಂತರ ರಾಮಸೀತಾ ಲಕ್ಷ್ಮಣ ಉತ್ಸವ ಮೂರ್ತಿಗೆ ಅಭಿಷೇಕವನ್ನು ನಡೆಸಲಾಯಿತು. ಮಧ್ಯಾಹ್ನ ರಾಮ ಪಟ್ಟಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. 
ರಾಮ ನವಮಿಯ ಅಂಗವಾಗಿ  ಧರಣಿ ಯುವತಿ ಮಂಡ ವಿವಿದ ಉತ್ಸವ ಕಾರ್ಯಕ್ರಮ ಮತ್ತು ಮಜ್ಜಿಗೆ ಪಾನಕ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಕೆ.ಆರ್. ಮಂಜುನಾಥ್, ಸ್ವಾಮಿ, ಮಹೇಶ್, ನಂಜುಂಡಸ್ವಾಮಿ, ರಘುಪತಿ ಹತ್ವಾರ್, ಶ್ರೀಧರ್ ಹತ್ವಾರ್, ವಾಸುದೇವಧನ್ಯ, ರಾಜಕಮಲ್,  ಇದ್ದರು, ಧರಣಿ ಯುವತಿ ಮಂಡಳಿಯಿಂದ ಭಜನೆ ಏರ್ಪಡಿಸಲಾಗಿತ್ತು. ಮಜ್ಜಿಗೆ ಪಾನಕ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಶ್ರದ್ಧೆ, ಭಕ್ತಿಯ ರಾಮನವಮಿ ಆಚರಣೆ
ಆಲೂರು: ತಾಲೂಕಿನಾದ್ಯಂತ ಶ್ರದ್ಧೆ, ಭಕ್ತಿಗಳಿಂದ ರಾಮನವಮಿಯನ್ನು ಮಂಗಳವಾರ ಆಚರಿಸಲಾಯಿತು. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಭಾಗವಿರುವ ರಾಮಮಂದಿರದಲ್ಲಿ ಶ್ರೀ ರಾಮನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿ ಭಗವಂತನ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಗೆ ಪಾನಕ, ಕೊಸಂಬರಿಯನ್ನು ಹಂಚಲಾಯಿತು.
ತಾಲ್ಲೂಕಿನ ಕಸಬಾ ಹೋಬಳಿ ವರ್ತಿಕೆರೆ ಗ್ರಾಮದಲ್ಲೂ ಸಹ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸಲಾಯಿತು. ಇಂದು ಬೆಳಗ್ಗೆ ರಥೋತ್ಸವ, ಹೋಮ ಹವನಾದಿಗಳನ್ನು, ಕೈಗೊಂಡು ಶ್ರೀ ರಾಮನ ಮೂರ್ತಿಗೆ ವಿವಿಧ ಬಗೆಯ ಅಭಿಷೇಕಗಳನ್ನು ಮಾಡಲಾಯಿತು. ಈ ಗ್ರಾಮದಲ್ಲಿ ಆಚರಿಸುವ ರಾಮನವಮಿ ರಾಜ್ಯದಲ್ಲೇ ಪ್ರಸಿದ್ಧವಾಗಿದ್ದು, ರಾಜ್ಯದ ನಾನಾಕಡೆಗಳಿಂದ ಭಕ್ತಾಧಿಗಳು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.