ಮತ ಪಡೆಯಲು ಸುಳ್ಳು ಪ್ರಚಾರ
Published On :
ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್
ಚನ್ನರಾಯಪಟ್ಟಣ: ಮತ ಗಿಟ್ಟಿಸುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರು ಹೇಮಾವತಿ ಸಹಕಾರಿ ಉದ್ದಿಮೆಯ ಮೇಲೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಮಾವತಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ. ಅಲ್ಲದೇ, ಮಂಜು ಅವರ ಅಪಪ್ರಚಾರ ಹೀಗೇ ಮುಂದುವರಿದರೆ, ಮಂಜು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ತಿಳಿಸಿದರು.
ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಚಾಮುಂಡೇಶ್ವರಿ ಷುಗರ್ಸ್ ನವರಿಗೆ ಗುತ್ತಿಗೆ ನೀಡಿದ್ದು ಅಲ್ಲಿನ 30 ಕೊಠಡಿಗಳನ್ನು ತೆರವುಗೊಳಿಸುತ್ತಿರುವುದರಿಂದ ಆ ಕಟ್ಟಡದಲ್ಲಿ ಶಾಲೆ ತೆರೆಯುವ ಉದ್ದೇಶದಿಂದ ಟ್ರಸ್ಟ್ ಸ್ಥಾಪಿಸಲಾಗಿದೆ. ಅದಿನ್ನೂ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗದಿದ್ದುದರಿಂದ ಅದಕ್ಕೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಪಕ್ಷಗಳ ಕೈವಾಡವಿಲ್ಲ: ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಈ ವಿಚಾರ ಚರ್ಚಿಸಿ, ಷೇರುದಾರರ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆ ತೆರೆಯುವ ಉದ್ದೇಶವಿದೆ. ಇದರಲ್ಲಿ ಯಾವುದೇ ಪಕ್ಷದ ಕೈವಾಡವಿರುವುದಿಲ್ಲ. ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶವಿದೆ ಈ ಕೆಲಸಕ್ಕೆ ಕೈಹಾಕಲಾಗಿದೆ ಎಂದರು.
ರು. 25 ಕೋಟಿ ಠೇವಣಿ: ನಮ್ಮ ಕಾರ್ಖಾನೆಯಲ್ಲಿ ರು. 25 ಕೋಟಿ 55 ಲಕ್ಷ ಹಣವನ್ನು ಬ್ಯಾಂಕಿನಲ್ಲಿ ಪ್ರಸ್ತುತವಾಗಿ ಠೇವಣಿ ಇಡಲಾಗಿದೆ. ಕಬ್ಬು ಅರೆಯುವ ಸಾಮಥ್ಯವನ್ನು ಹೆಚ್ಚಿಸದೇ ಇರುವುದರಿಂದ ಚಾಮುಂಡೇಶ್ವರಿ ಷುಗರ್ಸ್‌ನವರಿಗೆ ನೋಟೀಸ್ ಕೂಡಾ ನೀಡಿದ್ದೇವೆ, ಷೇರುದಾರಿಗೆ 25 ಕಿಲೋ ಸಕ್ಕರೆಯಂತೆ ರು. 1 ಕೋಟಿ 76 ಲಕ್ಷ ಹಣವನ್ನು ಡಿವಿಡೆಂಡ್ ರೂಪದಲ್ಲಿ ನೀಡಿದ್ದೇವೆ.
ಆಗ್ರಹ: ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸಂಪೂರ್ಣವಾಗಿ ಷೇರುದಾರರಿಗೆ ಸಕ್ಕರೆ ವಿತರಿಸಲಾಗಿಲ್ಲ. ಅರಕಲಗೂಡಿನಲ್ಲಿಯೂ 600 ಷೇರುದಾರರಿಗೆ ಸಕ್ಕರೆ ವಿತರಿಸಲಾಗಿದ್ದು ಬಾಕಿ 400 ಜನ ಷೇರುದಾರರಿಗೆ ಸಕ್ಕರೆ ವಿತರಿಸಲಾಗಿಲ್ಲ ಎಂದ ಮಂಜುನಾಥ್, ಸಕ್ಕರೆ ಹಂಚಿಕೆ ಸಮರ್ಪಕವಾಗಿಲ್ಲ ಎನ್ನುವುದಾದರೆ, ಈ ಕೆಲಸವನ್ನು ಎ. ಮಂಜು ನೆರವೇರಿಸಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕ ತೋಟಿ ಜಯರಾಂ, ವೆಂಕಟೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

