ಹಾಸನ

'ಸಿದ್ಧಗಂಗಾ ಶ್ರೀ ಆಧುನಿಕ ಬಸವಣ್ಣ'

Published On :

ರಾಮನಾಥಪುರ: ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ, ಅನ್ನದಾಸೋಹ ಮಾಡಿ, ನಡೆದಾಡುವ ದೇವರಾಗಿ, ತ್ರಿವಿಧ ದಾಸೋಹಿಗಳಾಗಿರುವ ಸಿದ್ಧಗಂಗಾ ಶ್ರೀ ಶಿವಕುಮಾರಮಹಾಸ್ವಾಮೀಜಿ ಆಧುನಿಕ ಬಸವಣ್ಣ ಎಂದು ವಿಶ್ವ ವೀರಶೈವ- ಲಿಂಗಾಯಿತ ಮಹಾ ವೇದಿಕೆ ರಾಜ್ಯಾಧ್ಯಕ್ಷ ರಂಗಾಪುರ ಶಿವಲಿಂಗಶಾಸ್ತ್ರಿ ಬಣ್ಣಿಸಿದರು.  
ಅರಕಲಗೂಡು ತಾಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ವತಿಯಿಂದ ರಾಮನಾಥಪುರ ಹೋಬಳಿ ಶಿರದನಹಳ್ಳಿ ಬಸವಕಲ್ಯಾಣ ಮಠದಲ್ಲಿ ಸಿದ್ದಗಂಗಾ ಡಾ. ಶಿವಕುಮಾರ ಮಹಾಸ್ವಾಮೀಜಿ 107ನೇ ಹುಟ್ಟುಹಬ್ಬದ ಅಚರಣೆ ಪ್ರಯುಕ್ತ 75 ವೀರಶೈವ ವಟುಗಳಿಗೆ ಶಿವದೀಕ್ಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ವೀರಶೈವ ಧರ್ಮದಲ್ಲಿ ಶಿವದೀಕ್ಷೆಗೆ ಮಹತ್ವವಿದೆ. ಯಾವುದೇ ವೀರಶೈವರು ಗುರು ಕಾರುಣ್ಯದಿಂದ ಶಿವದೀಕ್ಷೆಯನ್ನು ಪಡೆದುಕೊಂಡರೆ ಮಾತ್ರ ವೀರಶೈವನಾಗುತ್ತಾನೆ ಎಂದರು. ಟಿ. ಮಾಹಿಗೌಡನಹಳ್ಳಿ ರಾಜಾಪುರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ,  ಲಿಂಗದ ಮಹತ್ವವನ್ನು ಲಿಂಗ ಪಡೆದ ವಟುಗಳಿಗೆ ಸ್ವಾಮೀಜಿ ಬೋಧಿಸಿದರು.  ಶಿರದನಹಳ್ಳಿ ಬಸವಕಲ್ಯಾಣ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಆಶೀರ್ವಚನ ನೀಡಿ, ಮಾನವ ಕೇವಲ ಬಹಿರಂಗ ಶುದ್ದಿಗೆ ಗಮನ ನೀಡದೆ, ಅಂತರಂಗ ಶುದ್ಧಿ ಮೂಲಕ ಮಾನವತ್ವದಿಂದ ದೈವತ್ವಕ್ಕೆ ತೆರಳಬೇಕು ಎಂದರು.
ಹಾಸನ ಜಿಲ್ಲಾ ಅಖಿಲ ಭಾರತ ಮಹಾ ಸಭಾ ಘಟಕದ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಆನಂದ್ ಪಟೇಲ್ ನೆಲ್ಲಿಗೆರೆ,  ಅರಕಲಗೂಡು ತಾಲೂಕು ಗೌರವ ಅಧ್ಯಕ್ಷ ಬೂದನೂರು ಕಾಂತರಾಜ್, ಶಾಂತಮಲ್ಲಪ್ಪ, ಸಮಾಜ ಸೇವಕರಾದ ತಟ್ಟವಾಳು ಮುಕ್ಕಣ್ಣಶೆಟ್ಟಿ, ಕಾಫಿಪುಡಿ ಶಂಕರಪ್ಪ, ಶಾಂತಮಲ್ಲಪ್ಪ, ಚಂದ್ರಶೇಖರಯ್ಯ ತಾಲೂಕು ಉಪಾಧ್ಯಕ್ಷ ಶಿರದನಹಳ್ಳಿ ಜಯಲಿಂಗಪ್ಪ, ಪ್ರದಾನ ಕಾರ್ಯದರ್ಶಿ ಕೊಣನೂರು ಬಿ.ನ್. ಪುಟ್ಟಸ್ವಾಮಿ, ಖಜಾಂಚಿ ಅರಕಲಗೂಡು ಕೆ.ಎಂ. ಪ್ರಕಾಶ್, ಹೋಬಳಿ ಅಧ್ಯಕ್ಷ ಸೋಮಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.