ಹಾಸನ

'ಅರ್ಥವಾಗಲೆಂದು ಏಕವಚನ ಬಳಸಿದೆ'

Published On :

ಹಾಸನ: ಶಾಸಕ ಎಚ್.ಡಿ. ರೇವಣ್ಣನಿಗೆ ಅರ್ಥ ಆಗಲಿ ಅನ್ನೋ ಕಾರಣದಿಂದಲೇ ನಾನು ಏಕ ವಚನದ ಪದಗಳನ್ನು ಬಳಕೆ ಮಾಡಿ ನಿಂದಿಸಿದೆ ಎಂದು ಹಾಸನ ಲೋಕಸಭಾದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತಮ್ಮದೇ ಶೈಲಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ಮಾತುಗಳಿಂದ ಹೇಳಿದರೆ ರೇವಣ್ಣನಿಗೆ ಅರ್ಥ ಆಗೋದಿಲ್ಲ. ಅದಕ್ಕಾಗಿಯೇ ನಾನು ಏಕ ವಚನದಿಂದ ಪದವನ್ನು ಬಳಸಿದ್ದೇನೆ. ಅರಕಲಗೂಡು ರಸ್ತೆಯ ಗುಂಡಿ ಮುಚ್ಚಿಸೋದಿಕೆ ಸಾಧ್ಯವಾಗಿಲ್ಲ ಅಂತ ಹೇಳುತ್ತಿದ್ದಾರೆ. ಅವರು ಮಾಡಿರುವ ಕೆಲಸವಾದರೂ ಏನು ಎಂದು ಪ್ರಶ್ನಿಸಿದರು.
ತನಿಖೆಯಾಗಲಿ: ಈ ರಸ್ತೆಯನ್ನು ನಾನು ಬೇರೆಡೆಗೆ ಬದಲಾಯಿಸಿದೆನಾ ಅಥವಾ ರೇವಣ್ಣ ಬದಲಾಯಿಸಿದ್ದನಾ ಅಂತ ನನಗೆ ಚೆನ್ನಾಗಿ ತಿಳಿದಿದೆ. ಈ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ರೇವಣ್ಣನ ಹತ್ತಿರ ದಾಖಲೆಗಳಿದ್ದರೆ ಬರಲಿ ನಾನು ಚರ್ಚೆಗೆ ಬರುತ್ತೇನೆ. ಅದನ್ನು ಬಿಟ್ಟು ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಇನ್ನು ದುದ್ದ ರಸ್ತೆಗೆ ಅಂತ ಹಾಕಿದಂತಹ ಕಲ್ಲು ಮತ್ತು ಕಬ್ಬಿಣವನ್ನು ಸುವರ್ಣ ಗ್ರಾಮಕ್ಕೆ ಬಳಿಸಿಕೊಂಡು ಬಿಲ್ ಮಾಡಿಕೊಂಡಿದ್ದಾರಲ್ಲ ಅದು ಯಾರು? ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಅರ್ಥೈಸಿಕೊಳ್ಳಲಿ: ಜೆಡಿಎಸ್‌ನವರು ಜಿಲ್ಲೆಯ ಅಭಿವೃದ್ಧಿ ಮಾಡಿದ್ದೇವೆ ಅಂತ ಹೇಳುತ್ತಾರಲ್ಲ. ವಿಶೇಷವಾಗಿ ಯಾವ ಅಭಿವೃದ್ಧಿಯನ್ನು ಮಾಡಿದ್ದಾರೆ. ಒಬ್ಬರು ಪ್ರಧಾನಿ, ಮುಖ್ಯಮಂತ್ರಿ ಹಾಗೂ ಮಂತ್ರಿ ಹದ್ದೆಗಳನ್ನು ಅಲಂಕರಿಸಿದ ಕುಟುಂಬದವರಿಂದ ಜಿಲ್ಲೆಯ ಜನತೆ ಹೆಚ್ಚಿನ ನಿರೀಕ್ಷೆ ಮಾಡುತ್ತಾರೆ. ಜನರ ನಿರೀಕ್ಷೆ ತಕ್ಕಂತೆ ಜೆಡಿಎಸ್‌ನವರು ಕೆಲಸ ಮಾಡಿದ್ದಾರಾ ಎಂಬುದನ್ನು ಅರ್ಥೈಸಿಕೊಳ್ಳಲಿ ಎಂದು ಹೇಳಿದರು.
ಕಾಳಜಿಯಿಲ್ಲ: ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನಗಳನ್ನು ನಿರ್ಮಿಸಿದ್ದೇವೆ ಅಂತ ಹೇಳುತ್ತಾರಲ್ಲ. ಅದೇ ಹೊಳೆನರಸೀಪುರದಲ್ಲಿ 30 ವರ್ಷ ಕಳೆದರೂ ಇನ್ನೂ ಒಕ್ಕಲಿಗರ ಸಮುದಾಯ ಭವನ ನಿರ್ಮಿಸಲು ಸಾಧ್ಯವಾಗಿಲ್ಲ ಎಂದ ಮಂಜು, ಕಾಲೇಜು ಇರೋ ಕಡೆಯಲ್ಲಿಯೇ ಸಿಮಾನಿ ಮಂದರಿ ಹಾಗೂ ಕಲ್ಯಾಣ ಮಂಟಪವನ್ನು ಕಟ್ಟಿದ್ದಾರೆ. ಇದರಿಂದಲೇ ಅರಿವಾಗುತ್ತೆ ಜೆಡಿಎಸ್‌ನವರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ಎಂದರು.
ಗೆಲುವಿನ ವಿಶ್ವಾಸ: ಹಾಸನ ಲೋಕಸಭಾ ಕ್ಷೇತ್ರದ 35 ಹೋಬಳಿ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ಜನರಿಂದ ಉತ್ತಮ ಬೆಂಬಲ ಸಿಕ್ಕಿದೆ. ಪ್ರಚಾರದ ವೇಳೆ ಮತದಾರರು ಹೊಸ ಶಕ್ತಿಯನ್ನು ನನ್ನಲ್ಲಿ ತುಂಬಿದ್ದು, ಎಲ್ಲಾ ಕಡೆ ಕಾಂಗ್ರೆಸ್‌ನ ಗೆಲುವಿನ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ನನ್ನಲ್ಲಿ ಸಮಾಧಾನ ಮತ್ತು ಆತ್ಮವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಸ್.ಎಂ. ಆನಂದ್, ಎಚ್.ಕೆ. ಮಹೇಶ್, ಡಿ.ಸಿ. ಸಣ್ಣಸ್ವಾಮಿ, ಎಚ್.ಕೆ. ಜವರೇಗೌಡ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.