ಹಾಸನ

ಮತದಾರರ ಸಹಭಾಗಿತ್ವ ಸಮಿತಿ ಕಾರ್ಯಕ್ರಮ

Published On :

ಹೊಳೆನರಸೀಪುರ: ಪಟ್ಟಣದ ರೇಲ್ವೆ ನಿಲ್ದಾಣದಲ್ಲಿ ಸ್ವೀಪ್ ಸಮಿತಿ ಅಧಿಕಾರಿ ಆರ್. ನರಸಿಂಹಯ್ಯ ಮತ್ತು ಇತರ ಸದಸ್ಯರು ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಸವಣ್ಣ, ಎನ್.ಎಸ್.ಎಸ್ ಅಧಿಕಾರಿ ರಾಜಶೇಖರ್ ಮತ್ತು ಇನ್ನಿತರ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳೊಡನೆ ರೈಲು ಪ್ರಯಾಣಿಕರನ್ನು ಸಂದರ್ಶನ ಮಾಡಿ ಮತದಾನದ ಜಾಗೃತಿ ಉಂಟುಮಾಡಲಾಯಿತು.
ಮೈಸೂರಿನಿಂದ ಶಿವಮೊಗ್ಗಕ್ಕೆ ಹೋಗುವ ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಚಲಿಸುವ ರೈಲು ನಿಲ್ದಾಣಕ್ಕೆ ಆಗಮಿಸುವ ಸಂದರ್ಭಗಳಲ್ಲಿ ಬ್ಯಾನರ್ ಮತ್ತು ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸುತ್ತಾ ಸ್ವಪ್ರೇರಣೆಯಿಂದ ತಪ್ಪದೇ ಮತದಾನ ಮಾಡುವಂತೆ ಘೋಷಣೆಗಳನ್ನು ಕೂಗುತ್ತಾ ಕರಪತ್ರಗಳನ್ನು ವಿತರಿಸಲಾಯಿತು.
ಪ್ರೇರೇಪಣೆ: ಎಲ್ಲಾ ಸಾರ್ವಜನಿಕ ಮತದಾರರನ್ನು ಏ. 17ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರೇರೇಪಿಸಲಾಯಿತು.   
ಪ್ರತಿಜ್ಞಾವಿಧಿ: ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಮತದಾನದ ಪ್ರತಿಜ್ಞಾವಿಧಿ ಭೋದಿಸಲಾಯಿತು. ನಂತರ ಬ್ಯಾನರ್ ಮತ್ತು ಪ್ಲೇಕಾರ್ಡ್‌ಗಳ ಸಹಿತ ಘೋಷಣೆ ಕೂಗುತ್ತಾ ಬಸ್ ನಿಲ್ದಾಣದ ಆವರಣದ ಸುತ್ತಲೂ ಜಾಥಾ ನಡೆಸಿ ಮುಖ್ಯ ರಸ್ತೆ ಮುಖಾಂತರ ಸಾಗಿದ ಜಾಥಾ, ಅಂಬೇಡ್ಕರ್ ವೃತ್ತವನ್ನು ಬಳಸಿ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್‌ಗಳೊಳಗಿದ್ದ ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚುವುದರ ಮುಖಾಂತರ ಚಾಲಕರು ಮತ್ತು ನಿರ್ವಾಹಕರುಮತದಾನದ ಮಹತ್ವ ತಿಳಿಸಿದರು.
ಅರ್ಹತೆಯುಳ್ಳ ಪ್ರತಿಯೊಬ್ಬ ಮತದಾರನು ತಪ್ಪದೇ ಮತ ಚಲಾಯಿಸುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಕಮಲ್ ಕುಮಾರ್ ಮತ್ತು ಇನ್ನಿತರ ಸಿಬ್ಬಂದಿ, ಸ್ವೀಪ್ ತಾಲೂಕು ನೋಡೆಲ್ ಅಧಿಕಾರಿ ಆರ್ ನರಸಿಂಹಯ್ಯ ಕಚೇರಿ ಸಿಬ್ಬಂದಿ ಮತ್ತು ಸಹಾಯಕ ನಿರ್ದೇಶಕ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.