ಹಾಸನ

ಯುಪಿಎ ದುರಾಡಳಿತ: ಅಪಾಯದ ಅಂಚಿನಲ್ಲಿ ದೇಶ'

Published On :

ಹಾಸನ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ದುರಾಡಳಿತದಿಂದ ಜರ್ಜಿರಿತಗೊಂಡಿರುವ ದೇಶವನ್ನು ಉಳಿಸಲು ನರೇಂದ್ರ  ಮೋದಿಯಂಥ ಒಬ್ಬ ಮಹಾನ್ ನಾಯಕ ದೇಶದ ಸಾರಥ್ಯವನ್ನು ವಹಿಸಿಕೊಳ್ಳುವ ಅನಿವಾರ್ಯತೆ ಇದ್ದು ಅದಕ್ಕಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ. ಪ್ರಸಾದ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ನ ದುರಾಡಳಿತದಲ್ಲಿ ದೇಶದ ಜನತೆಯ ಬದುಕು ನರಕ ಸದೃಶವಾಗಿದ್ದು, ದಿನ ಬಳಕೆಯ ವಸ್ತುಗಳ ದರ ಗಗನಕ್ಕೇರಿದ್ದು ಈಗ ಇತಿಹಾಸ ಬೆಲೆ ನಿಯಂತ್ರಣ ಮಾಡಲು ವಿಫಲವಾದ ಸರ್ಕಾರದ ಆಡಳಿತದ ವಿಫಲತೆಯಿಂದಾಗಿ ದಿನ ಬಳಕೆ ಪದಾರ್ಥಗಳ ನಾಗರೀಕರ ಕೈಗೆಟುಕದೆ ಗಗನ ಕುಸುಮವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.
ಉದ್ಯೋಗ ಸೃಷ್ಟಿಯಲ್ಲೂ ಯು.ಪಿ.ಎ ಮುಗ್ಗರಿಸಿ ಬಿದ್ದಿದ್ದು, ವಾಜಪೇಯಿಯವರ ಆಡಳಿತದ ಅವಧಿಯಲ್ಲಿ 6.7 ಕೋಟಿ ಉದ್ಯೋಗದ ಸೃಷ್ಟಿಯಾದರೆ ಯು.ಪಿ.ಎ ಕಾಲದಲ್ಲಿ ಸೃಷ್ಟಿಯಾದ ಉದ್ಯೋಗದ ಪ್ರಮಾಣ ಕೇವಲ 2.7 ಕೋಟಿ ಇದರಿಂದಾಗಿ ನಾನಾ ಪದವಿಗಳನ್ನು ತಮ್ಮದಾಗಿಸಿಕೊಂಡು ನೌಕರಿಗಾಗಿ ಸರ್ಕಾರದ ಕಡೆಗೆ ನೋಡುತ್ತಿದ್ದು ಯುವ ಜನಾಂಗ ಕೊನೆಗೆ ಹತಾಶಗೊಂಡು ಅನೇಕ ವಿದ್ಯಾವಂತ ತರುಣರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಕಾರಣದಿಂದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರವನ್ನು ಪ್ರಾಣ ಕಂಟಕ ಸರ್ಕಾರವೆಂದೇ ಜನ ತೀರ್ಮಾನಕ್ಕೆ ಬಂದಿದ್ದಾರೆ. ಪ್ರಸ್ತುತ ಬಿಜೆಪಿ ಆಡಳಿತವಿರುವ ಗುಜರಾತ್, ಮಧ್ಯಪ್ರದೇಶ ಚತ್ತೀಸ್‌ಗಡ, ಗೋವಾ ರಾಜ್ಯಗಳು ನಿಜವಾದ ಅರ್ಥದಲ್ಲಿ ರಾಮರಾಜ್ಯವಾಗಿದ್ದು ಸಕಾಲ, ಭಾಗ್ಯಲಕ್ಷ್ಮಿ, ಭಾಗ್ಯ ರಥ ಮುಂತಾದ ಜನಪರ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಕರ್ನಾಟಕದ ಬಿಜೆಪಿ ಸಾಧನೆಯನ್ನು ರಾಜ್ಯದ ಜನ ಮರೆತಿಲ್ಲ ಎಂದರು.

ಮಸೀದಿಗಳಲ್ಲೂ ಮತ ಜಾಗೃತಿ
ಹೊಳೆನರಸೀಪುರ: ಪಟ್ಟಣದ ಲಷ್ಕರ್ ಮೊಹಲ್ಲಾ ಬಡಾವಣೆಯ ಸುನ್ನಿ ಮಸೀದಿ, ದೊಡ್ಡ ಮಸೀದಿ, ಮತ್ತು ಷಿಯಾ ಮಸೀದಿಗಳಿಗೆ ನೋಡೆಲ್ ಅಧಿಕಾರಿ ನರಸಿಂಹಯ್ಯ ಆರ್. ಸಿಬ್ಬಂದಿ ವರ್ಗದವರಾದ ತಮ್ಮಣ್ಣಗೌಡ ಮತ್ತು ಕೃಷ್ಣಮೂರ್ತಿ, ಸಮಿತಿ ಕಾರ್ಯದರ್ಶಿ ವೆಂಕಟೇಶ್  ಅವರು ಬ್ಯಾನರ್ ಮತ್ತು ಕರಪತ್ರಗಳೊಂದಿಗೆ ಭೇಟಿ ನೀಡಿ  ತಪ್ಪದೇ ಮತದಾನ ಮಾಡುವಂತೆ ಎಲ್ಲರ ಗಮನ ಸೆಳೆಯಲಾಯಿತು.  ಕರಪತ್ರ ವಿತರಿಸಿ ಮತದಾನದ ಅರ್ಹತೆಯುಳ್ಳ ಪ್ರತಿಯೊಬ್ಬರನ್ನು ಮತದಾನ ಮಾಡುವಂತೆ ಪ್ರೇರೇಪಿಸಲು ಕೋರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.