ಮೇರು ಪುರುಷ ಶಿವಕುಮಾರ ಸ್ವಾಮೀಜಿ
ರಾಮನಾಥಪುರ: ಭಕ್ತಿ ಭಂಡಾರಿ ಬಸವಣ್ಣನವರಂತೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಹ ಈ ನಾಡು ಕಂಡ ಮೇರು ಪುರುಷರಾಗಿದ್ದು, ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಶಿರದನಹಳ್ಳಿ ಬಸವಕಲ್ಯಾಣ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಕರೆ ನೀಡಿದರು.
ರಾಮನಾಥಪುರ ಹತ್ತಿರವಿರುವ ಕೊಣನೂರು ಪಟ್ಟಣದ ಮಹದೇಶ್ವರ ನಿಲಯದ ಅವರಣದಲ್ಲಿ ಇತ್ತೀಚೆಗೆ ನಡೆದ ಸಿದ್ದಗಂಗಾ ಶ್ರೀ ಹುಟ್ಟುಹಬ್ಬದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಮಾನವೀಯ ಮೌಲ್ಯಗಳನ್ನು ಬಿತ್ತಿದ ಬಸವಣ್ಣನ ಶರಣ ಧರ್ಮ, ಸಿದ್ಧಾಂತಗಳು ಇಲ್ಲವಾಗಿವೆ. ಇದನ್ನು ಉಳಿಸಲು ನಾವು ಸನಾತನ ಧರ್ಮ, ಸಂಸ್ಕೃತಿ ಇಂದು ಉಳಿಸಲು ಮುಂದಿನ ಪೀಳಿಗೆಗೆ ಸಂಸ್ಕಾರ ಅಗತ್ಯ. ಸಂಸ್ಕಾರ ಆದರ್ಶ ವಿಚಾರ ಬೆಳೆಯುವುದರಿಂದ ಇದು ಸಾಧ್ಯ ಎಂದರು. ಶನಿವಾರಸಂತೆ ಶ್ರೀಕ್ಷೇತ್ರ ತಪೋವನದ ಮಹಂತ ಶಿವಲಿಂಗಸ್ವಾಮೀಜಿ, ತೊರೆನೂರು ಮಠದ ಮಲ್ಲೇಶಸ್ವಾಮೀಜಿ, ಕೆಸವತ್ತೂರು ಮಠ ಶ್ರೀ ಬಸವರಾಜೇಂದ್ರಸ್ವಾಮೀಜಿ, ತಾಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಕಾರ್ಯದರ್ಶಿ ಬಿ.ಎನ್. ಪುಟ್ಟಸ್ವಾಮಿ ಮಾತನಾಡಿದರು. ಕೊಣನೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಪಾರ್ವತಮ್ಮ ಪುಟ್ಟಸ್ವಾಮಿ, ಕೊಣನೂರು ಹೋಬಳಿ ವಿಶ್ವ ವೀರಶೈವ- ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷ ಈರಪ್ಪ, ಸದಸ್ಯರಾದ ಮಹೇಶ್, ಬಿಸಲಹಳ್ಳಿ ಗಂಗಣ್ಣ, ಮುಖಂಡರಾದ ಗಂಗಾದರಪ್ಪ, ಹಂಡ್ರಂಗಿ ಸೋಮಣ್ಣ, ಬಿದರೂರು ನಿಂಗಪ್ಪ, ಕೆಸವತ್ತರು ಮುಂತಾದವರು ಭಾಗವಹಿಸಿದ್ದರು. ರಾಜೇಂದ್ರ ಸ್ವಾಗತಿಸಿದರು. ಕುಮಾರಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

