ಹಾಸನ

ಅಂತಿಮ ದಿನದಂದು ಅಭ್ಯರ್ಥಿಗಳ ಕಸರತ್ತು

Published On :

ಕನ್ನಡಪ್ರಭ ವಾರ್ತೆ, ಹಾಸನ, ಏ. 15
ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಮಂಗಳವಾರ ಜಿಲ್ಲಾದ್ಯಂತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದರು. ಬೈಕ್ ರ್ಯಾಲಿ, ಕಾರ್ಯಕರ್ತರ ಸಮಾವೇಶ ನಡೆಸಿದ್ದಲ್ಲದೇ ಮನೆ ಮನೆಗೆ ತೆರಳಿ ಓಟಿನ ಲಿಸ್ಟ್ ವಿತರಣೆ ನೀಡುತ್ತಲೇ ಮತ ಭಿಕ್ಷೆ ಬೇಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅರಸೀಕೆರೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ, ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ತಾಲೂಕಿನ ಜೆಡಿಎಸ್ ಎಲ್ಲಾ ಮುಖಂಡರು ಭಾಗವಹಿಸಿದ್ದರು. ಮಾಜಿ ಸಚಿವ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಹೊಳೆನರಸೀಪುರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮತಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರು, ಅರಕಲಗೂಡು, ಸಕಲೇಶಪುರ, ಚನ್ನರಾಯಪಟ್ಟಣ ಮತ್ತಿತರ ಕಡೆ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದರು.
ಮನವಿ: ಬಿಜೆಪಿ ಅಭ್ಯರ್ಥಿ ಸಿ.ಎಚ ್. ವಿಜಯಶಂಕರ್, ಹಾಸನ ನಗರದಲ್ಲಿ ಯುವಕರೊಂದಿಗೆ ಬೈಕ್ ರ್ಯಾಲಿ ನಡೆಸಿ ಮತ ಬೇಡಿದರು. ಅಮ್ ಆದ್ಮಿ ಅಭ್ಯರ್ಥಿ ಸಂತೋಷ್ ಮೋಹನ್, ಬಿಎಸ್ಪಿ ಅಭ್ಯರ್ಥಿ ಎ.ಪಿ. ಅಹಮ್ಮದ್ ನಗರ, ಗ್ರಾಮಾಂತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿ ಮತ ನೀಡುವಂತೆ ಮನವಿ ಮಾಡಿಕೊಂಡರು.
ಸಕಲೇಶಪುರದಲ್ಲಿ: ಸಕಲೇಶಪುರ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸಿದರು. ಮುಂಜಾನೆಯಿಂದಲೇ ಶಾಸಕ ಎಚ್.ಕೆ. ಕುಮಾರಸ್ವಾಮಿ ತಮ್ಮ ಪಕ್ಷದ ಕಾರ್ಯಕರ್ತರೊಟ್ಟಿಗೆ ಮನೆಮನೆಗೆ ತೆರಳ ಮತಯಾಚಿಸಿದರು. ಬಿ.ಎಂ ರಸ್ತೆ, ಅಶೋಕರಸ್ತೆ, ಎಸ್.ಪಿ ರಸ್ತೆ, ಕುಶಾಲನಗರ, ಚಂಪಕನಗರ ಸೇರಿದಂತೆ ಪುರಸಭೆ ವ್ಯಾಪ್ತಿಯ ಎಲ್ಲೆಡೆ ಸಂಚಾರಿಸಿ ದೇವೆಗೌಡರಿಗೆ ಮತ ನೀಡುವಂತೆ ಮನವಿ ಮಾಡಿದರು.
ಬೈಕ್ ರ್ಯಾಲಿ: ಬಿಜೆಪಿ ಕಾರ್ಯಕರ್ತರು ಪಟ್ಟಣದ ಗುಹೇಕಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ತಾಲೂಕಿನಾದ್ಯಂತ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಕ್ಯಾಮಹಳ್ಳಿ ರಾಜ್ ಕುಮಾರ್, ಮಂಜುನಾಥ್ ಸಿಂಘ್ವಿ ಮುಂತಾದವರಿದ್ದರು.

'ದೇಶದಲ್ಲೇ ಗಟ್ಟಿ ಧ್ವನಿ'
ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಮಾತನಾಡಿದ ಶಾಸಕ ಕುಮಾರಸ್ವಾಮಿ, ಮಾಜಿ ಪ್ರಧಾನಿಯಾಗಿ ಚುನಾವಣೆ ಎದುರಿಸುತ್ತಿರುವುದು ದೇವೆಗೌಡರೊಬ್ಬರೇ. ಇವರಿಗೆ ಮತನೀಡುವ ಸೌಭಾಗ್ಯ ಜಿಲ್ಲೆಯ ಜನತೆಗೆ ಬಂದಿರುವುದು ಅದೃಷ್ಟ. ದೇಶದಲ್ಲೇ ಗಟ್ಟಿ ಧ್ವನಿಯಾಗಿರುವ ದೇವೇಗೌಡರು ಲೋಕಸಭೆ ಪ್ರತಿನಿಧಿಸದಿದ್ದರೆ ಅದು ಜಿಲ್ಲೆಗಾಗುವ ಹಾನಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.