ಹಾಸನ

ಪಕ್ಷ ತ್ಯಜಿಸಿ ಬಂದು ಸ್ಪರ್ಧಿಸಿ

Published On :

ಹಾಸನ: ಜೆಡಿಎಸ್ ಅನ್ನು ಕುಟುಂಬ ರಾಜಕಾರಣವೆಂದು ಅಪಾದಿಸುತ್ತಿರುವ ಕಾಂಗ್ರೆಸ್ ಮುಖಂಡರು ಪಕ್ಷದಿಂದ ಹೊರಬಂದು ಸ್ಪರ್ಧಿಸಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರದು ಕುಟುಂಬ ರಾಜಕಾರಣ ಎಂದು ಟೀಕಿಸಿರುವ  ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಯಾರು ಎಂಬುದನ್ನು ಯೋಚಿಸಲಿ. ಕೇವಲ ಜೆಡಿಎಸ್ ಅನ್ನು ಮಾತ್ರ ಕುಟುಂಬ ರಾಜಕಾರಣ ಎನ್ನುವವರು, ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದರು.
ದೈವಾನುಗ್ರಹ ಇದೆ: ಕಾಂಗ್ರೆಸ್‌ನ ಕೆಲವು ಮುಖಂಡರು ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಬಿಟ್ಟು ಹೊರ ಬಂದು ದೇವೇಗೌಡರ ರೀತಿಯಲ್ಲಿ ವೀರ ಹೋರಾಟ ನಡೆಸಲಿ. ಜೆಡಿಎಸ್ ತನ್ನ ಸ್ವಂತ ಶಕ್ತಿಯಿಂದ ಹೋರಾಟ ನಡೆಸುತ್ತಿದೆ. ಜನಶಕ್ತಿ ಹಾಗೂ ದೈವಶಕ್ತಿ ನಮ್ಮ ಮೇಲಿದೆ ಎಂದು ಹೇಳಿದರು.
ಕೃಷ್ಣಗೆ ಸವಾಲು: ಜೆಡಿಎಸ್ ಪಕ್ಷ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಏನೂ ಕೊಡುಗೆ ನೀಡಿಲ್ಲ ಎಂದು ಹೇಳುತ್ತಾರಲ್ಲ. ಅದೇ ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರದಲ್ಲಿ ಸಚಿವರಾಗಿದ್ದ ಕಾಲದಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ನೀಡಿರುವಂತಹ ಕೊಡುಗೆಯಾದರೂ ಏನೂ ಎಂದು ಪ್ರಶ್ನಿಸಿದರು.
ಗೌಡ್ರಿಗೆ ರಾಜಯೋಗ: ದೇವೇಗೌಡರಿಗೆ ರಾಜಯೋಗ ಇಂದಿನಿಂದ ಆರಂಭವಾಗಿದ್ದು, ಮುಂದಿನ ಹತ್ತು ವರ್ಷ ಗೌಡರನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಉಪ ಚುನಾವಣೆ ಬೇಕಾಗಿದ್ದರೆ ಎ. ಮಂಜು ಅವರನ್ನು ಗೆಲ್ಲಿಸಿ ಎಂದು ಹೇಳಿರುವ ಕೃಷ್ಣ ಅವರು, ಭವಿಷ್ಯ ನುಡಿಯಲು ಅವರು ಬ್ರಹ್ಮ ಅಲ್ಲ ಎಂದು ತಿರುಗೇಟು ನೀಡಿದರು.
ಗೂಳಿ ಅವರ ಕ್ಷೇತ್ರ ನೋಡಿಕೊಳ್ಳಲಿ: ಕಾಂಗ್ರೆಸ್‌ನವರು ಜಿಲ್ಲೆಗೆ ಬಿಟ್ಟಿರುವ ಗೂಳಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೂಳಿಯಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಟೀಕಿಸಿದರು.
ಗೌಡ್ರ ಗೆಲುವು ನಿಶ್ಚಿತ: ಜಿಲ್ಲೆಯಲ್ಲಿ ಜೆಡಿಎಸ್ ಪರ ಜನರು ಉತ್ತಮವಾಗಿ ಒಲವನ್ನು ತೋರಿದ್ದು, ದೇವೇಗೌಡರು ಈ ಬಾರಿ ಚುನಾವಣೆಯಲ್ಲಿ ಗೆದ್ದು ಬರಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಿದ್ದು, ಜನತೆ ಕೂಡ ಜೆಡಿಎಸ್‌ಗೆ ಮತ ನೀಡಿಲು ನಿರ್ಣಯಿಸಿದ್ದಾರೆ. ಚುನಾವಣೆಯ ನಂತರ ದೇಶದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಚನ್ನವೀರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.