'ಬದುಕಿಗೆ ನಾಟಕ ಮಾರ್ಗದರ್ಶಿ ಆಗಲಿ'
ಚನ್ನರಾಯಪಟ್ಟಣ: ನಾಟಕಗಳು ಸಮಾಜಕ್ಕೆ ಸಂದೇಶ ಸಾರುವ ಜೊತೆಗೆ ಬದುಕಿಗೆ ಮಾರ್ಗದರ್ಶನ ನೀಡಬೇಕು. ಸಾಹಿತಿಗಳು,ಕೃತಿಕಾರರು, ಸಮಾಜದ ಮೇಲೆ ಆಗುವ ಪರಿಣಾಮ ಚಿಂತನೆಯ ಬಗ್ಗೆ ನಾಟಕ ರಚನೆ ಮಾಡಬೇಕಾದ ಅಗತ್ಯವಿದೆ ಎಂದು ಕಲಾವಿದ ಹಾಗೂ ನಾಟಕಕಾರ ನಂಜುಂಡಮೈಮ್ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಿರಂತರ ಕಲಾತಂಡ ಆಯೋಜಿಸಿದ ರಂಗಹಬ್ಬ ನಾಟಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿ ಸ್ವಾತಂತ್ರ್ಯದ ಸದ್ಬಳಕೆ ಮಾಡಿಕೊಳ್ಳಬೇಕೆಂದು ನಾಟಕ ರಚನಾಕಾರರಿಗೆ ನಿರ್ದೇಶಕರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಿವರಾಂಬರಾಳು, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಎ.ಪಿ.ಎಸ್. ಆನಂದ್, ಕಲಾವಿದ ಉಮೇಶ್ ತೆಂಕನಹಳ್ಳಿ, ಧರ್ಮರಾಜ್ ಕಡಗ ಇತರರು ಇದ್ದರು.
ಮತದಾನದ ಹಕ್ಕಿದೆ: ಆದರೆ ಅವಕಾಶ ಇಲ್ಲ !
ಅರಕಲಗೂಡು: ಹೌದು, ಮತದಾನದ ಹಕ್ಕಿದೆ. ಆದರೆ ನಮಗೆ ಮತದಾನ ಮಾಡಲು ಅವಕಾಶವೇ ಇಲ್ಲ - ಈ ಕೊರಗು ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡಿರುವ ಕೆಲ ಸಿಬ್ಬಂದಿಗಳದ್ದು.
ಚುನಾವಣಾ ಪ್ರಕ್ರಿಯೆಗಾಗಿ ಖಾಸಗಿ ವಾಹನಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಟೆಂಪೋ ಟ್ರಾಕ್ಸ್, ಇಂಡಿಕಾ ಕಾರುಗಳು ಮತ್ತು ಟೆಂಪೋಗಳನ್ನು ಚುನಾವಣಾ ಕರ್ತವ್ಯಕ್ಕೆಂದು ತೆಗೆದುಕೊಳ್ಳಲಾಗಿದ್ದು, ಇದರ ಸಂಖ್ಯೆ ಅರಕಲಗೂಡು ವಿಧಾನಸಭಾ ಕ್ಷೇತ್ರವೊಂದರಲ್ಲೇ 60ಕ್ಕೂ ಹೆಚ್ಚು. ಏತನ್ಮಧ್ಯೆ, ಕುಶಾಲನಗರ ಇನ್ನಿತರೆ ಕಡೆಗಳಿಂದಲೂ ಹೋಂ ಗಾರ್ಡ್ಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಇವರಿಗೆ ಮತದಾನಕ್ಕೆ ಬೇಕಾದ ಯಾವ ಕ್ರಮವನ್ನೂ ಕೈಗೊಂಡಿಲ್ಲವಾದ್ದರಿಂದ ಮತದಾನ ಮಾಡಲು ಸಾಧ್ಯವಿಲ್ಲವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

