ಹಾಸನ

ಆತ್ಮವಿಶ್ವಾಸವೇ ಜೀವನದ ಯಶಸ್ಸಿನ ಕೀಲಿ ಕೈ: ಡಿವೈಎಸ್ಪಿ

Published On :

ಹಾಸನ: ಬದುಕಿನಲ್ಲಿ ಯಾವುದೇ ಶ್ರೇಷ್ಠ ಸಾಧನೆಗೆ ಆತ್ಮವಿಶ್ವಾಸವೇ ಕೀಲಿ ಕೈ. ಸ್ಪರ್ಧಾತ್ಮಕ ಪರೀಕ್ಷೆಗಳು ಈ ತತ್ವಕ್ಕೆ ಹೊರತಾಗಿಲ್ಲ ಎಂದು ಡಿವೈಎಸ್ಪಿ ಪಿ.ಎಚ್. ಭೀಮಕ್ಕನವರ್ ಹೇಳಿದರು.
ನಗರದ ಕಲಾಭವನದಲ್ಲಿ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಹಾಗೂ ಕ್ಲಾಸಿಕ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಯುವ ಜನರಲ್ಲಿ ವಿಶೇಷ ಪ್ರತಿಭೆಯಿದೆ. ಅದನ್ನು ಹೊರತರುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಹಾಗೂ ಕ್ಲಾಸಿಕ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ಯುವಕರಿಗೆ ಉಚಿತ ಮಾರ್ಗದರ್ಶನ ನೀಡುವ ಮೂಲಕ ಸ್ತುತ್ಯಾರ್ಹ ಕೆಲಸ ಮಾಡುತ್ತಿವೆ. ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಉನ್ನತ ಗುರಿಯನ್ನು ಹೊಂದುವುದರ ಜತೆಗೆ ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು.
ಅಬಕಾರಿ ಉಪ ಅಧೀಕ್ಷಕ ಕ್ಯಾಪ್ಟೇನ್ ಅಜಿತಕುಮಾರ ಮಾತನಾಡಿ,  ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವವನ್ನು ವಿವರಿಸುತ್ತ ಇಂದು ಯಾವುದೇ ಸರಕಾರಿ ಹುದ್ದೆ ಪಡೆಯಲು  ಇಂತಹ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಲೇಬೇಕಾದರೆ ಸರಿಯಾದ ತಯಾರಿ ಅವಶ್ಯವಿದೆ ಎಂದರು.
ಅಧ್ಯಯನದ ವಿಧಾನ, ಪರೀಕ್ಷೆಗಳನ್ನು ಎದುರಿಸುವ ರೀತಿ ಕುರಿತಾಗಿ ವಿವರವಾದ ಮಾಹಿತಿಯನ್ನು ಈ ಸಂದರ್ಭದಲ್ಲಿ ಅವರು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಲಕ್ಷ್ಮಣ ಉಪ್ಪಾರ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ನಾನಾ ಮಗ್ಗಲುಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ವಿಜಯೇಂದ್ರ ಮಹಿಷಿ, ಐ ಜಿ ಚೌಗಲಾ, ಮೋಹನ ಶಿಂಧೆ, ಎನ್.ಜಿ. ಕನಕರೆಡ್ಡಿ ಹಾಗೂ ಇತರರು ಇದ್ದರು. ಮಂಜುನಾಥ ಮಠಪತಿ, ಬಸವರಾಜ ಬಂಗಾರಿ, ರಾಜು ಲೋಂಡೆ, ರಾಘವೇಂದ್ರ ರೆಡ್ಡಿ, (ಮಾಧ್ಯಮ ಸಂಯೋಜಕರು), ಲಕ್ಷ್ಮಿಕಾಂತ ಸಗರದ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.