ಹಾಸನ

ಗಣೇಶನಗರಗ್ರಾಮಸ್ಥರಿಂದ ನೋಟಾ ಮತದಾನ

Published On :

ಸಕಲೇಶಪುರ: ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಣೇಶನಗರದ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ನೋಟಾ ಮತವನ್ನು  ಸಾಮೂಹಿಕವಾಗಿ ಚಲಾಯಿಸಿರುವುದಾಗಿ ತಿಳಿಸಿದರು.
ಗ್ರಾಮದ ನೂರಾರು ಮತದಾರರು ಮತದಾನದ ಸಂದರ್ಭದಲ್ಲಿ ಸಭೆ ಸೇರಿ ಚರ್ಚಿಸಿ ಕುಡಿಯುವ ನೀರು, ರಸ್ತೆ ಚರಂಡಿ ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾರೂ ಸ್ಪಂದಿಸದೆ ಇದ್ದುದರಿಂದ ಈ ಚುನಾವಣೆಯಲ್ಲಿ ತಿರಸ್ಕಾರ ಮತ (ನೋಟಾ) ಮತ ಚಲಾಯಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿರುವುದಾಗಿ ಗ್ರಾಮಸ್ಥರು  ಗ್ರಾಮ ಪಂಚಾಯತಿ ಕಾಟಾಚಾರಕ್ಕೆ ನೀರಿನ ಟ್ಯಾಂಕಿ ನಿರ್ಮಿಸಿದೆ. ಆದರೆ ಇದಕ್ಕೆ ಪೈಪ್ಗಳನ್ನು ಅಳವಡಿಸಿರುವುದಿಲ್ಲ. ಗ್ರಾಮದಲ್ಲಿರುವ ಒಂದು ಬೋರ್ವೆಲ್ನಲ್ಲಿಯೂ ನೀರು ಬರುವುದಿಲ್ಲ. ಇದರ ಬಗ್ಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೆಲವು ರಾಜಕೀಯ ಪುಡಾರಿಗಳು ಚುನಾವಣೆ ಸಂದರ್ಭವಾಗಿರುವುದರಿಂದ  ಸುಳ್ಳು ಭರವಸೆ ನೀಡಿದರು. ನಾವು ಇವರ ಮಾತಿಗೆ ಮರಳಾಗದೆ ವಿರೋಧ ಮತಗಳು ಚಲಾಯಿಸಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲೀಲಾ, ಗೋಪಾಲ ಶಾಂತರಾಜ ಶಿವಪ್ಪ, ಭಾಸ್ಕರ್  ಮುಂತಾದವರು ಇದ್ದರು.

ಮದ್ಯವರ್ಜನ ಶಿಬಿರ
ಜಾವಗಲ್: ಮದ್ಯಪಾನ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗಿ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ಜಾವಗಲ್ ಮಾಡೆಲ್ ಶಾಲೆಯ ಕಾರ್ಯದರ್ಶಿ ಡಾ. ಎಸ್. ವಿನಾಯಕ್ ಅಭಿಪ್ರಾಯಪಟ್ಟರು. ಚಿಕ್ಕಮಗಳೂರು ಜಿಲ್ಲೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡೆಲ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರವನ್ನು ಉದ್ಘ್ಘಾಟಿಸಿ ಮಾತನಾಡಿ, ದುಶ್ಚಟಗಳನ್ನು ದೂರಮಾಡುವುದರಿಂದ ಸಂಸಾರದಲ್ಲಿ  ನೆಮ್ಮದಿ ಸಿಗುತ್ತದೆ ಎಂದರು. ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ, ಶಿಬಿರವು ಏಳು ದಿನಗಳ ಕಾಲ ನಡೆಯಲ್ಲಿದ್ದು, ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಶಿಬಿರದ ಗೌರವಾಧ್ಯಕ್ಷ ಶಾಂತಪ್ಪಗೌಡ, ಕೋಶಾಧಿಕಾರಿ ಶಿವಾನಂದರಾಜು, ಉಪಾಧ್ಯಕ್ಷ ಚಂದ್ರಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.