ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಚಿಂತನೆ
ಹಾಸನ: ಒಕ್ಕಲಿಗರ ಜಾಗೃತಿಗಾಗಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಹಾಸನ ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಒಕ್ಕಲಿಗ ಹಿತರಕ್ಷಣಾ ಸೇನೆಯ ಅಧ್ಯಕ್ಷ ಮೈಲನಹಳ್ಳಿ ಮಂಜೇಗೌಡ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರೆ ಸಮುದಾಯದವರು ಅವರ ಧರ್ಮಗುರು ಅಥವಾ ನಾಯಕರ ಪ್ರತಿಮೆಗಳನ್ನು ಮಾಡಿಕೊಂಡು ಆ ಜನಾಂಗದವರು ತಮ್ಮ ಒಗ್ಗಟನ್ನು ಪ್ರದರ್ಶಿಸುತ್ತಾರೆ. ಆದರೆ ನಮ್ಮಲ್ಲಿ ಒಗ್ಗಟ್ಟು ಇಲ್ಲ. ಆದ್ದರಿಂದ ಬೇರೆ ಜನಾಂಗದವರು ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಒಕ್ಕಲಿಗರಲ್ಲಿ ವಿದ್ಯಾಭ್ಯಾಸ, ರಾಜಕೀಯ, ವ್ಯಾಪಾರ, ಉದ್ದಿಮೆ, ವೃತ್ತಿಪರರು ಒಕ್ಕಲಿಗ ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಆದರೂ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಅದಕ್ಕಾಗಿ ಒಕ್ಕಲಿಗರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲು ಸೇನೆ ತೀರ್ಮಾಸಿದೆ. ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಸುಮಾರು ರು. 2 ಕೋಟಿಗಳನ್ನು ಅಂದಾಜಿಸಲಾಗಿದೆ. ಈ ಕಂಚಿನ ಪ್ರತಿಮೆ 12 ಎತ್ತರವಾಗಿರುತ್ತದೆ ಎಂದರು.
ದೇಣಿಗೆಗೆ ಮನವಿ: ಪ್ರತಿಮೆ ನಿರ್ಮಾಣಕ್ಕೆ ಹಣವನ್ನು ನಾಗರಿಕರಿಂದ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ರು. 100ಕ್ಕೂ ಮೇಲ್ಟಟ್ಟು ಎಷ್ಟಾದರೂ ಹಣ ನೀಡಬಹುದಾಗಿದೆ. ಹಣ ನೀಡುವವರು ಸಂಘದ ಹೆಸರಿನಲ್ಲಿ ಚೆಕ್ ಅಥವಾ ಡಿಡಿ ರೂಪದಲ್ಲಿ ನೀಡಬಹುದು. ಹಣ ನೀಡಲು ಆಗದಿದ್ದರೆ ಮನೆಯಲ್ಲಿನ ಧವಸ ಧಾನ್ಯ ನೀಡಬಹುದಾಗಿದೆ ಎಂದು ಹೇಳಿದರು.
ಇನ್ನು ಕೆಂಪೇಗೌಡ ಜಯಂತಿಯನ್ನು ರಾಜ್ಯದ ಎಲ್ಲಾ ಕಡೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿ ಕೆಂಪೇಗೌಡರ ಜಯಂತಿಯ ದಿವಸ ರಜೆಯ ಬದಲು 2 ತಾಸು ಹೆಚ್ಚಿನ ಕೆಲಸವನ್ನು ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸೇನೆಯ ಹರೀಶ್ ಗೌಡ, ಗಿಡ್ಡೇಗೌಡ, ಜಿ.ಕೆ. ಬಾಲಕೃಷ್ಣ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

