ಹಾಸನ

ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸಾವು

Published On :

ಅರಸೀಕೆರೆ: ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತುಂಬಾಪುರ-ಮೇಳನಹಳ್ಳಿ ಗ್ರಾಮದ ಬಳಿ ನಡೆದಿದೆ. ತಾಲ್ಲೂಕಿನ ರಾಮಪುರ ಗ್ರಾಮದ ವಾಸಿ ಮಲ್ಲಿಕಾರ್ಜುನ ಮೃತಪಟ್ಟ ದುರ್ದೈವಿ. ಬೈಕ್‌ನಲ್ಲಿ ತಾಯಿ ಪಾರ್ವತಮ್ಮನೊಂದಿಗೆ ತಿಪಟೂರು ತಾಲ್ಲೂಕು ಸಾರ್ಥವಳ್ಳಿ ಜಾತ್ರೆಗೆ ಹೋಗಿದ್ದು, ಜಾತ್ರೆ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ತೆರಳಲು ತಾಲೂಕಿನ ತುಂಬಾಪುರ- ಮೇಳನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಬಂದ  ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ನಂತರ ತೀವ್ರಗಾಯಗೊಂಡ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ದೇವಾಲಯಗಳಲ್ಲಿ ಕಳವು
ಸಕಲೇಶಪುರ: ತಾಲೂಕಿನ ಜಂಭರಡಿ ಗ್ರಾಮದ ಗುಂಡುಬ್ರಹ್ಮ ಹಾಗೂ ಈಶ್ವರ ದೇವಸ್ಥಾನಗಳಲ್ಲಿ ಕಳ್ಳತನ ನಡೆದಿರುವ ಘಟನೆ ಇತ್ತೀಚೆಗೆ ನಡೆದಿದೆ. ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಎರಡು ದೇವಸ್ಥಾನಗಳ ಹುಂಡಿಯನ್ನು ಒಡೆದು ಹಣದೋಚಿದ್ದಾರೆ. ಆದರೆ ದೇವಸ್ಥಾನದಲ್ಲಿದ್ದ ಬೆಳ್ಳಿ ವಿಗ್ರಹಗಳನ್ನು ಕಳ್ಳತನ ನಡೆಸದೆ ಬಿಟ್ಟು ಹೋಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಘಾತದಲ್ಲಿ ವ್ಯಕ್ತಿ ಸಾವು
ಚನ್ನರಾಯಪಟ್ಟಣ: ಬೈಕ್‌ಗಳ ಮುಖಾ-ಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡ ಘಟನೆ ತಾಲ್ಲೂಕಿನ ಕೆ. ಬೈರಾಪುರ- ಬೀಚಗೋಡನಹಳ್ಳಿ ರಸ್ತೆ ಹತ್ತಿರ ನಡೆದಿದೆ. ತಾಲ್ಲೂಕಿನ ಕಕ್ಕೇನಹಳ್ಳಿ ಗ್ರಾಮದ ವಾಸಿ ಜಲಂದರ್ ಮೃತಪಟ್ಟ ದುರ್ದೈವಿ. ಬೈಕ್‌ನಲ್ಲಿ ಸ್ನೇಹಿತ ಜಯರಾಮ್ ಅವರೊಂದಿಗೆ ಹುಲಿಯಪ್ಪನ ಪಾಳ್ಯಕ್ಕೆ ಹೋಗಲು ತಾಲ್ಲೂಕಿನ ಕೆ. ಬೈರಾಪುರ- ಬೀಚಗೋಡನಹಳ್ಳಿ ರಸ್ತೆ ಹತ್ತಿರ ಹೋಗುತ್ತಿದ್ದಾಗ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಬೈಕ್ ಸವಾರ ಜಲಂದಾರ್‌ನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಂತರ ಬೈಕ್ ಹಿಂಬದಿ ಕುಳಿತಿದ್ದ ಜಯರಾಮ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ನಾಪತ್ತೆ
ಹಾಸನ: ಚನ್ನರಾಯಪಟ್ಟಣ ತಾಲೂಕು ಎಸ್. ಬೆಳಗೊಳ ಹೋಬಳಿ, ಕುಂಬೇನಹಳ್ಳಿ ಗ್ರಾಮದ ಕೆ.ಟಿ. ಶೇಷ ಅವರ ಮಗಳು ನಂದಿತ (20), ಇನ್ನೊಂದು ಪ್ರಕರಣದಲ್ಲಿ ಅರಕಲಗೂಡು ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ಸಿದ್ದೇಗೌಡರ ಪತ್ನಿ ಪುಷ್ಪ ಅಲಿಯಾಸ್ ಪುಟ್ಟಲಕ್ಷ್ಮಿ (29), ಮತ್ತೊಂದು ಪ್ರಕರಣದಲ್ಲಿ ಅರಕಲಗೂಡು ತಾಲೂಕಿನ ಸೋಮನಹಳ್ಳಿ ಗ್ರಾಮದ ರಾಜು (23) ಇವರು ಮನೆಯಿಂದ ಹೊರ ಹೋದವರು ವಾಪಸಾಗದೇ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.