ಅವ್ಯವಸ್ಥೆ ಸರಿಪಡಿಸಿದ ಪುರಸಭೆ ಸಿಬ್ಬಂದಿ
ಅರಸೀಕೆರೆ: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದುರ್ವಾಸನೆಯಿಂದ ಜನರು ಮೂಗುಮುಚ್ಚಿ ಓಡಾಡಬೇಕಿದ್ದನ್ನು ಗಮನಿಸಿದ ಪುರಸಭೆ ತನ್ನ ಸಿಬ್ಬಂದಿಯೊಂದಿಗೆ ಕಳೆದ ಎರಡು ದಿನಗಳಿಂದ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಅವ್ಯವಸ್ಥೆ ಸರಿಪಡಿಸುವಲ್ಲಿ ಯಶಸ್ವಿಯಾಯಿತು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ಅಂಬೇಡ್ಕರ್ ವೃತ್ತದಲ್ಲಿ ಒಳಚರಂಡಿ ವ್ಯವಸ್ಥೆಗೆ ಕಸ, ಕಡ್ಡಿ ತುಂಬಿ ಕೊಳಚೆ ತುಂಬಿ ನೀರು ಸರಾಗವಾಗಿ ಹರಿಯಲು ಅಡಚಣೆಯುಂಟಾಗಿತ್ತು. ಕೊಳಚೆ ನೀರು ರಸ್ತೆಯ ಮೇಲೆ ಹರಿಯುವ ಸ್ಥಿತಿ ನಿರ್ಮಾಣಗೊಂಡು ಒಳಚರಂಡಿಯಲ್ಲಿ ಕಸ, ಪ್ಲಾಸ್ಟಿಕ್ ಕವರ್, ಬಾಟಲ್ಗಳು ಶೇಖರಣೆಗೊಂಡು ಇಡೀ ಪ್ರದೇಶವೇ ಮಲಿನಗೊಂಡು ದುರ್ನಾತ ಬೀರುವಂತಾಗಿತ್ತು.
ಸ್ವಚ್ಛತೆ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಡುವ ಸಲುವಾಗಿ ಮನೆ ಮನೆ ಬಾಗಿಲಿಗೆ ಕಸದ ಗಾಡಿ ಕಳುಹಿಸಿಕೊಡಲಾಗುತ್ತಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕಸದ ತೊಟ್ಟಿಗಳನ್ನು ಇರಿಸಲಾಗಿದೆ. ಅಲ್ಲದೇ ಕಸವನ್ನು ಮನಬಂದಂತೆ ಎಸೆಯಬಾರದೆಂದು ಅಂಗಡಿ ಮುಗ್ಗಟ್ಟುಗಳ ವರ್ತಕರಿಗೆ ಆದೇಶಿಸಲಾಗಿದೆ. ಆದರೂ ಇಂತಹ ಬೇಜವಬ್ದಾರಿ ನಡೆಯಿಂದಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ಮುಂದಾದರೂ ಸಾರ್ವಜನಿಕರು, ವರ್ತಕರು ತ್ಯಾಜ್ಯವಸ್ತುಗಳನ್ನು ಚರಂಡಿಗೆ ಹಾಕಬಾರದೆಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

