ಸದೃಢ ತಾಯ್ತನಕ್ಕೆ ಆಯುರ್ವೇದ ಅತ್ಯುಪಯುಕ್ತ
ಹಾಸನ: ಆಯುರ್ವೇದ ವಿಜ್ಞಾನದಲ್ಲಿ ಸ್ತ್ರೀ ಆರೋಗ್ಯಕ್ಕೆ ಗರಿಷ್ಠ ಪ್ರಾಧಾನ್ಯತೆ ನೀಡಲಾಗಿದ್ದು, ಗರ್ಭಿಣಿ ಹಾಗೂ ಪ್ರಸೂತಿ ನಂತರ ತಾಯಿಯ ಆರೋಗ್ಯ ರಕ್ಷಣೆಗೆ ಸೂಕ್ತ ಜ್ಞಾನ ಆಯುರ್ವೇದದಲ್ಲಿ ಲಭ್ಯವಿದೆ ಎಂದು ಬನಾರಸ್ನ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ಆಯುರ್ವೇದ ತಜ್ಞ ಡಾ. ಮಂಜರಿ ದ್ವಿವೇದಿ ಅಭಿಪ್ರಾಯಪಟ್ಟರು.
ನಗರದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ಸ್ನಾತಕೋತ್ತರ ವಿಭಾಗ- ಹಾಸನ ಮತ್ತು ಉಡುಪಿ ಆಶ್ರಯದಲ್ಲಿ ನಡೆಯುತ್ತಿರುವ ಪ್ರಜಾತ-2014 ಎಂಬ ಶೀರ್ಷಿಕೆಯ ಸೂತಿಕಾ ಪರಿಚರ್ಯ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ಪ್ರಾಯೋಗಿಕ ಕಾರ್ಯಾಗಾರ ಉದ್ಘಾಟಿಸಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಹೆಣ್ಣು ಸಮಾಜದ ಕಣ್ಣು ಎಂಬ ಉಕ್ತಿಯಂತೆ ಕುಟುಂಬದ ಗುರುತರ ಜವಾಬ್ದಾರಿ ಹೊರುವ ಸ್ತ್ರೀ ಆರೋಗ್ಯ ಅತ್ಯವಶ್ಯಕ ಅತ್ಯಮೂಲ್ಯ ಎಂದು ಹೇಳಿದರು.
ಎರಡು ದಿನಗಳ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರದ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಮಂದಾ ಘೋರ್ಪಡೆ, ಚೆನ್ನೈನ ಖ್ಯಾತ ಆಯುರ್ವೇದ ವೈದ್ಯೆ ಡಾ. ಪಿ ಎಲ್.ಟಿ. ಗಿರಿಜಾ, ಕಾಲೇಜಿನ ಕೌಮಾರಭೃತ್ಯ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಯು., ಆಡಳಿತ ವಿಭಾಗದ ಡೀನ್ ಡಾ.ಟಿ.ಬಿ. ತ್ರಿಪಾಠಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಪ್ರಕಾಶ್ ಎಲ್. ಹೆಗಡೆ ಇದ್ದರು.
ಪ್ರಬಂಧ ಮಂಡನೆ: ಕಾರ್ಯಾಗಾರದಲ್ಲಿ ಸೂತಿಕ ಸ್ತ್ರೀಯರಲ್ಲಿ ಸ್ಥಾನಿಕ ಚಿಕಿತ್ಸೆ, ಸೂತಿಕಾ ಸ್ತ್ರೀಯರ ಆಹಾರ ತಯಾರಿಕೆ, ಸ್ತನ್ಯ ಪರೀಕ್ಷಾ ವಿಧಾನ, ಬಾಣಂತಿಯರ ಆರೋಗ್ಯ ರಕ್ಷಣೆ ಕುರಿತಾದ ವಿಚಾರಗಳನ್ನು ಚರ್ಚಿಸಲಾಯಿತು. 50 ಯುವ ವೈದ್ಯರು ಪ್ರಬಂಧಗಳನ್ನು ಮಂಡಿಸಿದರು.
ವಸ್ತು ಪ್ರದರ್ಶನ, ಮಾರಾಟ: ವೈಜ್ಞಾನಿಕ ಭಿತ್ತಿಪತ್ರಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಪುಟ್ಟ ಕಂದಮ್ಮನನ್ನು ಸಿಂಗರಿಸಿದ ಸಾಂಪ್ರದಾಯಿಕ ತೊಟ್ಟಿಲಿನಲ್ಲಿ ತೂಗಿ, ವಿದ್ಯುಕ್ತವಾಗಿ ಈ ಕಾರ್ಯಾಗಾರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅನೇಕ ಪ್ರಕಾಶಕರ ಅತ್ಯುಪಯುಕ್ತ ಆಯುರ್ವೇದ ಪುಸ್ತಕಗಳ ಪ್ರದರ್ಶನ, ಮಾರಾಟ ಏರ್ಪಡಿಸಲಾಗಿತ್ತು.
ಡಾ. ಆಶಾ ಅವರ ಪ್ರಾರ್ಥನೆಯೊಂದಿಗೆ ಉದ್ಘಾಟನಾ ಸಮಾರಂಭ ಆರಂಭವಾಯಿತು. ಡಾ. ದರ್ಶನಾ ಮತ್ತು ಡಾ. ಪ್ರಭಾ ಅವರು ನಿರೂಪಿಸಿದರೆ, ಶೈಕ್ಷಣಿಕ ವಿಭಾಗದ ಡೀನ್ ಡಾ. ಮಲ್ಲಿಕಾ ಕೆ.ಜೆ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಗಾಯತ್ರಿಭಟ್ ವಂದಿಸಿದರು.
ಕಾರ್ಯಾಗಾರದಲ್ಲಿ ಉತ್ತರ ಪ್ರದೇಶ, ಚತ್ತೀಸಗಡ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಂದ 120 ಯುವ ಆಯುರ್ವೇದ ವಿದ್ಯಾರ್ಥಿಗಳು, ವೈದ್ಯರು ಹಾಗೂ ಉಪನ್ಯಾಸಕರು ಭಾಗವಹಿಸಿ ಪ್ರಬಂಧ ಮಂಡನೆ, ಅತಿಥಿ ಉಪನ್ಯಾಸ, ಸಂವಾದ ಹಾಗೂ ಪ್ರಯೋಗಿಕ ತರಬೇತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

