ಹಾಸನ

ವಂಚಕನ ವಿರುದ್ಧ ಮೊಕದ್ದಮೆ ಹೂಡಲು ಆಗ್ರಹ

Published On :

ಕ.ಪ್ರ.ವಾರ್ತೆ ಟಿ ಸಕಲೇಶಪುರ ಟಿ ಏ. 25
ತಾಲೂಕಿನ ವ್ಯಕ್ತಿಯೊಬ್ಬರು ಸ್ಥಿರಾಸ್ತಿ ವಿಚಾರವಾಗಿ ವಂಚನೆ ಮಾಡುತ್ತಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೊಸಗದ್ದೆ ಗ್ರಾಮಸ್ಥರು ಶುಕ್ರವಾರ ಪಟ್ಟಣದ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಸಮಾಜ ಸೇವಕನಂತೆ ವರ್ತಿಸುವ ಸ್ವಾಮಿ ಎಂಬುವರು ಮಾಡುವ ಮೋಸಕ್ಕೆ ಹೊಸಗದ್ದೆ, ಮಡ್ಡಿನಕೆರೆ ಸುತ್ತಮುತ್ತಲಿನ ಗ್ರಾಮದ ಹಲವು ಅಮಾಯಕರು ಬಲಿಯಾಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪರಭಾರೆ ಮಾಡುತ್ತಿರುವ ಈ ವ್ಯಕ್ತಿ, ಯುವಕರಿಗೆ ಕೆಲಸ ಕೊಡಿಸುವುದಾಗಿ ನೆಪದಲ್ಲೂ ಮೋಸಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಹಲವು ವಂಚನೆ: ಹೊಸಗದ್ದೆ ಗ್ರಾಮದ ಸರ್ವೇ ನಂ. 82ರಲ್ಲಿ ರಂಗೇಗೌಡ ಎಂಬುವವರಿಗೆ 1980ರ ದಶಕದಲ್ಲಿ ಸರಕಾರ 4 ಎಕರೆ ಭೂಮಿ ಮಂಜೂರು ಮಾಡಿತ್ತು. ಇದರಲ್ಲಿ ವ್ಯವಸಾಯ ಮಾಡಿಕೊಂಡಿದ್ದ ರಂಗೇಗೌಡ ಅನಾರೋಗ್ಯಕ್ಕೆ ಈಡಾದ್ದರಿಂದ ಭೂಮಿಯನ್ನು ಪಾಳುಬಿಡಲಾಗಿತ್ತು. ಇದನ್ನರಿತ ಎಂ.ಬಿ. ಸ್ವಾಮಿ, 1998ರಲ್ಲಿ ರಂಗೇಗೌಡ ಎಂಬ ನಕಲಿ ವ್ಯಕ್ತಿಯನ್ನು ಕರೆತಂದು ತನ್ನ  ಹೆಸರಿಗೆ ಭೂಮಿಯನ್ನು ಪರಭಾರೆ ಮಾಡಿಕೊಂಡಿದ್ದಾನೆ. ಆದರೆ, ಇದನ್ನು ಪ್ರಶ್ನಿಸಿ ರಂಗೇಗೌಡರ ಸೂಸೆ ರಂಗಮ್ಮ ಎಂಬುವವರು ನ್ಯಾಯಲಯದ ಮೊರೆ ಹೋದ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರು ಭೂಮಿಯ ಕ್ರಯ ಪತ್ರ ರದ್ದುಪಡಿಸಿದ್ದಾರೆ.
ಇದಲ್ಲದೆ ಎಸ್ಸಿ, ಎಸ್ಟಿ ಕಾರ್ಪೋರೇಷನ್ ವತಿಯಿಂದ ನಿರೋದ್ಯೋಗಿ ಯುವಕರಿಗೆ ನೀಡುವ ಸಾಲವನ್ನು ಮಂಜೂರು ಮಾಡಿಸುವುದಾಗಿ ಗ್ರಾಮದ ಯುವಕರಿಗೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳ ಮೇಲೆ ಬ್ಲಾಕ್ ತಂತ್ರ ಅನುಸರಿಸಿ ತನ್ನ ಕೆಲಸ ಮಾಡಿಸಿಕೊಳ್ಳತ್ತಿದ್ದಾನೆ. ಈ ವ್ಯಕ್ತಿಯ ಕೆಲಸ ಮಾಡಿಕೊಡಲು ಒಪ್ಪದ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನೆ ಕಸಬಾಗಿಸಿಕೊಂಡಿದ್ದಾನೆ. ಇದರಿಂದಾಗಿ ಗ್ರಾಮದ ಅಮಾಯಕರು ಹಾಗೂ ಅಧಿಕಾರಿಗಳು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಬೇಕು ಎಂದು ಒತ್ತಾಯಿಸಿದ ಮನವಿಯನ್ನು ಅಧಿಕಾರಿಗಳಿಗೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.