ಹಾಸನ

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು

Published On :

ಅರಸೀಕೆರೆ: ತಾಲೂಕಿನ ಹೆಬ್ಬಾರನಹಳ್ಳಿ ಸಮೀಪ ಕೃಷಿ ಜಮೀನೊಂದರಲ್ಲಿ ಟೊಮೇಟೊ ಬೆಳೆಗೆ ಹಾಕಲಾಗಿದ್ದ ತಂತಿಯ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತಿಬ್ಬರು ಗಾಯಗೊಂಡು ಪಟ್ಟಣದ ಜಯಚಾಮರಾಜೇಂದ್ರ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟವರು ಹೆಬ್ಬಾರನಹಳ್ಳಿ ಗ್ರಾಮದ ಮಂಜುನಾಥ (32) ಎಂಬವರಾಗಿದ್ದು,  ಗಾಯಗೊಂಡವರು ಎಸ್. ಮಾಕನಹಳ್ಳಿ ಗ್ರಾಮದ ನಂಜಮ್ಮ (60) ಹಾಗೂ ನೇತ್ರಾವತಿ (40).
ಎಂದಿನಂತೆ ಬೆಳಗ್ಗೆ ತೋಟಕ್ಕೆ ತೆರಳಿ ಟೊಮೇಟೊ ಬೆಳೆಗೆ ದಾರ ಕಟ್ಟಲು ಮುಂದಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಶನಿವಾರ ಸಂಜೆ ಬೀಸಿದ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಅದನ್ನು ದುರಸ್ತಿ ಪಡಿಸದೇ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಿನ್ನಲೆಯಲ್ಲಿ ಅವಘಡ ಜರುಗಿದೆ ಎನ್ನಲಾಗುತ್ತಿದೆ.  
ಸಂಬಂಧಿಕರ ಆಕ್ರಂದನ: ಮಗನನ್ನು ಕಳೆದುಕೊಂಡ ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟಿತು. ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆಯಿಂದಾಗಿ ಮಗನನ್ನು ಕಳೆದುಕೊಳ್ಳುವಂತಾಗಿದೆ ಎಂದು ರೋದಿಸುತ್ತಿದ್ದ ಕುಟುಂಬ ಸದಸ್ಯರ ಗೋಳು ಮುಗಿಲು ಮುಟ್ಟಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.