ಹಾಸನ

'ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗಿಸಿ'

Published On :

ಜಾವಗಲ್: ಮದ್ಯ ಸೇವನೆಗೆ ಹಣ ವ್ಯಯ ಮಾಡದೆ ಮಕ್ಕಳ ಶಿಕ್ಷಣಕ್ಕೆ ವಿನಿಯೋಗ ಮಾಡುವುದು ಅತ್ಯವಶ್ಯಕ ಎಂದು ಚಿಕ್ಕಮಗಳೂರು ಮಾಡೆಲ್ ಶಾಲೆಯ ಕಾರ್ಯದರ್ಶಿ ಎಂ.ಎನ್. ಷಡಾಕ್ಷರಿ ಅಭಿಪ್ರಾಯಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಜಾವಗಲ್ ಮಾಡೆಲ್ ಶಾಲೆ, ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಜಾವಗಲ್ ಮಾಡೆಲ್ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ 674ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದರು.
ಶ್ರಮಿಸಬೇಕು: ಚಿಕ್ಕ ವಯಸ್ಸಿನಲ್ಲಿ ಮದ್ಯ ಸೇವನೆ ಕಲಿಯುತ್ತಿದ್ದು, ದುಶ್ಚಟಗಳಿಗೆ ಬಲಿಯಾಗದಂತೆ, ಮತ್ತೊಬ್ಬರಿಗೆ ಹೊರೆಯಾಗಬಾರದು. ದುಡಿಮೆ ಮಾಡಿ ಹೆಂಡತಿ, ಮಕ್ಕಳು ಹಾಗೂ ಗುರು- ಹಿರಿಯರನ್ನು ಗೌರವಿಸಬೇಕು. ಉತ್ತಮ ಪ್ರಜೆಗಳಾಗುವಲ್ಲಿ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಕಲಿತಿದ್ದು ಅಳವಡಿಸಿ: ಚಿಕ್ಕಮಗಳೂರು ಜಿಲ್ಲಾ ಜ.ಜಾ. ವೇದಿಕೆ ಅಧ್ಯಕ್ಷ ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಸಂಸ್ಕಾರ ಮುಖ್ಯ. ಕುಡಿದು ಆನಾರೋಗ್ಯಕ್ಕೆ ತುತ್ತಾಗಿ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳಬಾರದು ಮತ್ತು ಶಿಬಿರದಲ್ಲಿ ಕಲಿತಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಶುಭ ಹಾರೈಕೆ: 674ನೇ ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎಸ್. ವಿನಾಯಕ್ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದ್ದ 75 ಶಿಬಿರಾರ್ಥಿಗಳಲ್ಲಿ 60 ಜನರಿಗೆ ಕುಟುಂಬ ದಿನ ಅಚರಿಸಿ ಮರು ಮದುವೆ ಮಾಡಿಸಿದ್ದು, ಶಿಬಿರಾರ್ಥಿಗಳು ಹಿಂದಿನ ತಪ್ಪುಗಳನೆಲ್ಲಾ ಮನ್ನಿಸಿ ಗಂಡಂದಿರನ್ನು ಮನೆಗೆ ತುಂಬಿಸಿಕೊಂಡು ಹೊಸ ಜೀವನ ಪ್ರಾರಂಭಿಸಿ ಎಂದು ಶುಭ ಹಾರೈಸಿದರು.
ಶ್ರೀ ಧ.ಗ್ರಾ.ಯೋಜನೆ, ಚಿಕ್ಕಮಗಳೂರು ನಿರ್ದೇಶಕಿ ಗೀತಾ, ತಾಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮೀರವಿಶಂಕರ್, ಮಾಡೆಲ್ ಶಾಲೆಯ ಉಪಾಧ್ಯಕ್ಷ ಬಿ. ಮಹಾಲಿಂಗಸ್ವಾಮಿ, ಪುಷ್ಪಗಿರಿ ಚಂದ್ರಣ್ಣ, ಶಿವಾನಂದರಾಜು ಮೇಲ್ವಿಚಾರಕ ಎಮ್. ನವೀನ್ ನಿವೃತ್ತ ಪ್ರಾಂಶುಪಾಲ ಶಾಂತಪ್ಪಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.