ಹಾಸನ

ಅಗಲಿದ ನಾಯಕ ಎ. ಕೃಷ್ಣಪ್ಪಗೆ ಶ್ರದ್ಧಾಂಜಲಿ

Published On :

ಹಾಸನ: ಇತ್ತೀಚೆಗೆ ನಿಧನ ಹೊಂದಿದ ಹಿಂದುಳಿದ ವರ್ಗಗಳ ನಾಯಕ, ಕಾರ್ಮಿಕ ನಾಯಕ ಎ. ಕೃಷ್ಣಪ್ಪ ಅವರಿಗೆ ನಗರದ ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಎ. ಕಣಷ್ಣಪ್ಪ ಅವರು ಹಿಂದುಳಿದ ವರ್ಗಗಳ ಹಾಗೂ ಯಾದವ ಜನಾಂಗದ ಪ್ರಮುಖ ನಾಯಕರಾಗಿದ್ದರು. ಇವರ ಆಕಸ್ಮಿಕ  ನಿಧನದಿಂದ ಪಕ್ಷ ಹಾಗೂ ರಾಜ್ಯಕ್ಕೆ  ತುಂಬಲಾರದ ನಷ್ಟವಾಗಿದೆ ಎಂದರು.
ಎ. ಕೃಷ್ಣಪ್ಪ ವೈಯಕ್ತಿಕವಾಗಿ ಪಕ್ಷದ ಕೆಲಸಗಳನ್ನು ಮಾಡುತ್ತಿದ್ದರು. ಅವರ ಆದರ್ಶಗಳನ್ನು ಪಕ್ಷದ ಕಾರ್ಯಕರ್ತರು ಪಾಲಿಸಬೇಕು ಎಂದು ಹೇಳಿದರು. ಮಾಜಿ ಶಾಸಕ ಬಿ.ವಿ. ಕರೀಗೌಡ ಮಾತನಾಡುತ್ತಾ, ಎ. ಕೃಷ್ಣಪ್ಪ ಅವರನ್ನು ಹತ್ತಿರದಿಂದ  ನೋಡಿದ್ದೇನೆ. ನೇರ, ನಿಷ್ಠುರವಾದಿ ಎಂದರು.
ಕೆ.ಎಂ. ರಾಜೇಗೌಡ ಮಾತನಾಡಿ,  ಜೆ.ಡಿ.ಎಸ್ ನಾಯಕ, ಕೃಷ್ಣಪ್ಪ ಕ್ರೀಡಾಪಟುವಾಗಿದ್ದರು. ಫುಟ್‌ಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ಆಡುತ್ತಿದ್ದರು. ಬೇಲೂರಿನ ಚನ್ನಕೇಶವನ ಪರಮ ಭಕ್ತರು. ದಕ್ಷ, ಪ್ರಾಮಾಣಿಕರೂ ಆಗಿದ್ದ ಅವರು ಕೆಳವರ್ಗದ ಜನತೆಯನ್ನು ಮೇಲೆತ್ತುವ ಕಾರ್ಯ ಮಾಡಿದರು. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿದ್ದರು ಎಂದರು. ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕೃಷ್ಣಪ್ಪ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದರು. ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಎ. ಕೃಷ್ಣಪ್ಪ ಅನೇಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು ಎಂದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ತಾಲೂಕು ಜೆಡಿಎಸ್ ಅಧ್ಯಕ್ಷ  ಪಾಪೇಗೌಡ, ಶೇಷಾದ್ರಿ, ಜೆಡಿಎಸ್ ಮುಖಂಡ ಚನ್ನಂಗಿಹಳ್ಳಿ ಶ್ರೀಕಾಂತ, ತಾಲೂಕು  ಪಂಚಾಯ್ತಿ ಅಧ್ಯಕ್ಷೆ  ಕಾಮಾಕ್ಷಿ ಅಣ್ಣಪ್ಪ, ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.