ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ: ನಟ ರಮೇಶ್
ಚನ್ನರಾಯಪಟ್ಟಣ: ಬಾಲ್ಯದಲ್ಲಿ ಮಕ್ಕಳು ಕಲಿತಿದ್ದು, ಅದು ತಮ್ಮ ಜೀವನದುದ್ದಕ್ಕೂ ನೆನಪನಲ್ಲಿರುತ್ತದೆ. ಆದ್ದರಿಂದ ಬಾಲ್ಯದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯತೆಯಿದೆ ಎಂದು ಚಿತ್ರನಟ ಮಂಡ್ಯ ರಮೇಶ್ ತಿಳಿಸಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರತಿಮಾ ಟ್ರಸ್ಟ್ ಏರ್ಪಡಿಸಿದ್ದ ನಾಟಕೋತ್ಸವ ಹಾಗೂ ಜಾನಪದ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ಹಾಗೂ ಸಂಸ್ಕೃತಿ ಕಲಿಸಿದರೆ ಅವರ ಜೀವನದುದ್ದಕ್ಕೂ ಅದನ್ನು ನೆನಪಿನಲ್ಲಿಡುತ್ತಾರೆ ಎಂದು ತಿಳಿಸಿದರು.
ಗುಣವಂತರನ್ನಾಗಿಸಿ: ಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯವೋ ಅವರನ್ನು ಗುಣವಂತರನ್ನಾಗಿಸುವುದೂ ಅಷ್ಟೇ ಮುಖ್ಯ. ಇದು ಪೋಷಕರ ಕರ್ತವ್ಯ. ತಂದೆ ತಾಯಿಗಳ ಪ್ರೀತಿ ಅವರಿಗೆ ಮುಖ್ಯ. ಆದರೆ, ಅದನ್ನು ಎಂದಿಗೂ ತಪ್ಪಿಸದಂತೆ ನೋಡಿಕೊಳ್ಳಬೇಕು ಎಂದರು.
ಸ್ಪಷ್ಟತೆ ಬಂದಲ್ಲಿ ಹಿಡಿತ: ಚಿಕ್ಕಂದಿನಲ್ಲಿ ಮಕ್ಕಳು ನಾಟಕ ಹಾಗೂ ರಂಗಭೂಮಿ ತಾಲೀಮು ನಡೆಸಿದರೆ ಅವರಿಗೆ ಮಾತಿನ ಸ್ಪಷ್ಟತೆ ಬರುತ್ತದೆ. ಮಕ್ಕಳಿಗೆ ಮಾತಿನ ಸ್ಪಷ್ಟತೆ ಬಂದರೆ ಅವರಲ್ಲಿ ಭಾಷಾ ಹಿಡಿತವನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.
ದೇಶೀಯ ಸಂಸ್ಕೃತಿ ಮೂಡಿಸಿ: ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಪಾಲಿಸುತ್ತಿದ್ದಾರೆ. ಆದರೆ ನಮ್ಮ ಜನತೆ ತಮ್ಮ ದೇಶದ ಉತ್ತಮ ಸಂಸ್ಕೃತಿಯನ್ನು ಮರೆತು ವಿದೇಶಿ ಸಂಸ್ಕೃತಿ ಕಲಿಸುವ ಯತ್ನದಲ್ಲಿರುವ ಪೋಷಕರು ಮಾತೃಭಾಷೆ ಹಾಗೂ ದೇಶೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಮೂಡಿಸುವಲ್ಲಿ ಮುಂದಾಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯ್ಕುಮಾರ್, ಪೂರ್ಣಿಮಾ ಟ್ರಾವಲ್ಸ್ ಮಾಲೀಕ ವೆಂಕಟೇಶ್, ಕಲಾವಿದ ನಿಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

