ಹಾಸನ

ಮಕ್ಕಳಿಗೆ ರಂಗಭೂಮಿ ಪರಿಚಯಿಸಿ: ನೀನಾಸಂ ಅಶ್ವತ್ಥ್

Published On :

ಚನ್ನರಾಯಪಟ್ಟಣ: ಪ್ರಸ್ತುತ ಮಕ್ಕಳಿಗೆ ಉತ್ತಮ ದಾರಿ ಯಾವುದು ಎಂದು ತಿಳಿಸಲು ಪೋಷಕರು ಕಷ್ಟ ಪಡುತ್ತಿದ್ದು, ಅವರನ್ನು ರಂಗಭೂಮಿಗೆ ಪರಿಚಯಿಸಿದಲ್ಲಿ ಉತ್ತಮ ದಾರಿಯನ್ನು ಅವರೇ ಕಂಡುಕೊಳ್ಳುತ್ತಾರೆ ಎಂದು ರಂಗಕಲಾವಿದ ನೀನಾಸಂ ಅಶ್ವತ್ಥ್ ಹೇಳಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರತಿಮಾ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಕ್ಕಳ ನಾಟಕೋತ್ಸವ ಹಾಗೂ ಜಾನಪದ ನೃತ್ಯ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತ ಮಾಡಲಾಗುತ್ತಿದ್ದು, ಬೇರೆ ಚಟುವಟಿಕೆಗಳಿಗೆ ಅವಕಾಶ ಸಿಗದಿರುವುದು ಮಕ್ಕಳ ಮೇಲೆ ಅನೇಕ ಪರಿಣಾಮ ಬೀರಿದಂತಾಗುತ್ತದೆ ಎಂದರು.
ನಂತರ ನಡೆದ ಸಾಂಸ್ಕತಿ ಕಾರ್ಯಕ್ರಮಗಳಿಗೆ ನೀನಾಸಂ ಅಶ್ವತ್ಥ್  ಅವರು ಕಲಾವಿದ ಬಾಲಕನಿಗೆ ಮೇಕಪ್ ಮಾಡುವ ಮೂಲಕ ಚಾಲನೆ ನೀಡಿದರು. ಉದಯಪರದ ಸರ್ಕಾರಿ ಫೌಡಶಾಲೆ ಮಕ್ಕಳು ಕಂಸಾಳೆ ಜಾನಪದ ನೃತ್ಯ ಪ್ರದರ್ಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಶಿಕ್ಷಕ ರಾಮಚಂದ್ರ, ಜೈ ಕನ್ನಾಡಂಬ ಸಂಘದ ಜಾವೀದ್ ಶಿವರಾಜ್, ಶ್ರೀನಿವಾಸ್, ಅಶೋಕ್ ವಸಿಷ್ಠ, ಭೈರೇಗೌಡ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.